Adipurush ಡಾರ್ಲಿಂಗ್ ಪ್ರಭಾಸ್(Darling Prabhas) ನಟನೆಯ ಕಳೆದ ಎರಡು ಸಿನಿಮಾಗಳು ನೆಲಕಚ್ಚಿರುವುದು ನಿಮ್ಮೆಲ್ಲರಿಗೂ ತಿಳಿದಿದೆ. ಒಂದು ಕಾಲದಲ್ಲಿ ಪ್ರಭಾಸ್ ನಟನೆಯ ಸಿನಿಮಾಗಳು ಎಂದರೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದ್ದವು ಹಾಗೂ ಸೋಲಿಲ್ಲದ ಸರದಾರನಾಗಿ ಮಿಂಚುತ್ತಿದ್ದರು ಎಂಬುದಾಗಿ ಎಲ್ಲರೂ ಮಾತನಾಡುತ್ತಿದ್ದರು.
ಆದರೆ ಸಾಹೋ ಹಾಗೂ ರಾಧೇಶ್ಯಾಮ್ ಸಿನಿಮಾಗಳು ಲಾಸ್ ಆಗುವ ಮೂಲಕ ಪ್ರಭಾಸ್ ಅವರ ಇಮೇಜ್ಗೆ ಕೂಡ ಡ್ಯಾಮೇಜ್ ಆಗಿದೆ. ಆದಿಪುರುಷ್(Adipurush) ಸಿನಿಮಾದ ಟೀಸರ್ ಮೊದಲ ಬಾರಿಗೆ ದೊಡ್ಡ ಮಟ್ಟದ ನೆಗೆಟಿವ್ ಪ್ರತಿಕ್ರಿಯೆಗಳನ್ನು ಪ್ರೇಕ್ಷಕರಿಂದ ಪಡೆದುಕೊಂಡಿತ್ತು.
ಈಗ ಎರಡನೇ ಬಾರಿಗೆ ಸ್ವಲ್ಪ ಗುಣಮಟ್ಟದ ಟೀಸರ್ ಅನ್ನು ಬಿಡುಗಡೆ ಮಾಡಿದ್ದು ಇದೇ ಜೂನ್ 16 ರಂದು ಸಿನಿಮಾ ಬಿಡುಗಡೆಯಾಗಿದ್ದು ಭರ್ಜರಿ 500 ಕೋಟಿ ಬಜೆಟ್ ನಲ್ಲಿ ಮೂಡಿ ಬಂದಿದೆ. ಇನ್ನು ಸಿನಿಮಾ ಬಿಡುಗಡೆಗು ಮುಂಚೆನೇ ಫ್ರೀ ರಿಲೀಸ್ ಬ್ಯುಸಿನೆಸ್ ಅನ್ನು ಚೆನ್ನಾಗಿ ಮಾಡಿದೆ. ಹಾಗಿದ್ದರೆ ಬಿಡುಗಡೆಗು ಮುನ್ನ ಈ ಸಿನಿಮ ಗಳಿಕೆ ಮಾಡಿದ್ದೆಷ್ಟು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಮಿತ್ರರೇ ಪ್ರಭಾಸ್(Prabhas) ನಟನೆಯ ಈ ಬಹುನಿರೀಕ್ಷಿತ ಸಿನಿಮಾ ಭರ್ಜರಿ 380 ರಿಂದ 400 ಕೋಟಿ ರೂಪಾಯಿ ಈಗಾಗಲೇ ಆಡಿಯೋ ಡಿಜಿಟಲ್ ಥಿಯೇಟರಿಕಲ್ ಸೇರಿದಂತೆ ಹಲವಾರು ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಗಳಿಸಿಕೊಂಡಿದೆ. ಅಂದರೆ ಖಂಡಿತವಾಗಿ ಸಿನಿಮಾ ತಂಡ ಈಗಾಗಲೇ ಸೇಫ್ ಆಗಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದ್ದು ಸಿನಿಮಾವನ್ನು ನೋಡಿದ ಮೇಲೆ ಸಿನಿಮಾ ಯಾವ ರೀತಿ ಗೆಲ್ಲುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಬಹುದಾಗಿದೆ.