Actress Tara: ಹಿರಿಯ ನಟಿ ತಾರಾ ಅನುರಾಧರವರ ಸುಂದರ ಕುಟುಂಬ ಹೇಗಿದೆ ನೋಡಿ

Actress Tara family: ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಅಭಿನಯಿಸುವ ಮೂಲಕ ನೀಡಿದಂತಹ ಕ್ಯಾರೆಕ್ಟರ್ ಗೆ ಅಚ್ಚುಕಟ್ಟಾಗಿ ಜೀವ ತುಂಬುತ್ತಿದ್ದಂತಹ ನಟಿ ತಾರಾ ಅನುರಾಧ (Actress Tara) ಅವರು ನಾಯಕ ನಟಿಯಾಗುವಂತಹ ಎಲ್ಲಾ ಅರ್ಹತೆಗಳು ಇದ್ದರೂ ಸಹ ಪೋಷಕ ನಟಿಯಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡರು.

ಹೌದು ಗೆಳೆಯರೇ ಡಾಕ್ಟರ್ ವಿಷ್ಣುವರ್ಧನ್ ಅವರ ಕಾಲದಿಂದ ಹಿಡಿದು ಇಂದಿನ ಯುವ ನಟರ ಸಿನಿಮಾಗಳವರೆಗೂ ಸಹ ನಟಿಯಾಗಿ ಪೋಷಕ ನಟಿಯಾಗಿ ಕೆಲವೊಮ್ಮೆ ವಿಲ್ಲನ್ ಆಗಿ ಅಭಿನಯಿಸುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ಹಲವಾರು ವರ್ಷಗಳಿಂದ ರಕ್ಷಿಸುತ್ತಾ ಬಂದಿದ್ದಾರೆ.

ಹೀಗೆ ಬಾಲ ನಟಿಯಾಗಿ ಸಿನಿಮಾರಂಗವನ್ನು ಪ್ರವೇಶ ಮಾಡಿದ ತಾರಾ ಅವರು ವಿಷ್ಣುವರ್ಧನ್, ಅನಂತನಾಗ್, ರಮೇಶ ಅರವಿಂದ್, ಶಶಿಕುಮಾರ್, ರಿಷಬ್ ಶೆಟ್ಟಿ ಹಾಗೂ ಧ್ರುವ ಸರ್ಜಾರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ತಮ್ಮ ಅತ್ಯುನ್ನತ ಅಭಿನಯದ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದಂತಹ ಅಪ್ರತಿಮ ಕಲಾವಿದೆ.

ಹೀಗೆ ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಎಚ್ ಸಿ ವೇಣುಗೋಪಾಲ್(HC Venugopal) ಎಂಬ ಸಿನಿಮಾ ಆಟೋಗ್ರಾಫರ್ ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ನಟಿಯಾಗಿ ಮಿಂಚುತ್ತಿದ್ದಂತಹ ತಾರಾ ಅವರು ಕ್ಯಾಮೆರಾ ಮ್ಯಾನ್ರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬಂದ ಬೆನ್ನಲ್ಲೇ ತಾರಾ ಅನುರಾಧ ಅವರ ಮನೆಯಲ್ಲಿ ತೀವ್ರವಾದ ವಿರೋಧ ವ್ಯಕ್ತವಾಯಿತು.

ಯಾವುದೇ ಕಾರಣಕ್ಕೂ ಇವರಿಬ್ಬರಿಗೂ ಮದುವೆ ಮಾಡಲಾಗುವುದಿಲ್ಲ ಎಂದು ತಾರಾರವರ ಪೋಷಕರು ಹೇಳಿಬಿಟ್ಟರು. ಹೀಗೆ ಮದುವೆಯಾದರೆ ಅವರನ್ನೇ ಎಂದು ಕಾದು ಮನೆಯವರೆಲ್ಲರ ಒಪ್ಪಿಗೆ ಸಿಗುವವರೆಗೂ ಮಾತುಕತೆ ಆಡದೆ ಅನಂತರಾ ಇವರಿಬ್ಬರ ಪ್ರೀತಿಯನ್ನು ಮಚ್ಚಿ ಗ್ರೀನ್ ಸಿಗ್ನಲ್ ಕೊಟ್ಟ ನಂತರ 2005ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಗಳಿಗೆ 2013 ರಂದು ಶ್ರೀ ಕೃಷ್ಣ ಎಂಬ ಗಂಡು ಮಗು ಜನಿಸಿದ್ದು ಆಗಾಗ ತಮ್ಮ ಹಾಗೂ ತಮ್ಮ ಸುಂದರ ಫೋಟೋಗಳನ್ನು ನಟಿ ತಾರಾ ಅನುರಾಧ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸದಾ ಆಕ್ಟಿವ್ ಆಗಿ ಇರುತ್ತಾರೆ.

ಇನ್ನು ಈಗಿನ ಕನ್ನಡ ಸಿನಿಮಾ ಇಂಡಸ್ಟ್ರಿಯ ಬೆಳ್ಳಿ ತರೆಯಲ್ಲಿ ತಾಯಿಯಾಗಿ ಹೆಚ್ಚಿನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಸಕ್ರಿಯರಾಗಿರುವ ತಾರಾ ಕಿರುತೆರೆಯ (Television) ಸಾಕಷ್ಟು ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿಯೂ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಸೆಳೆದಿದ್ದಾರೆ. ಇದನ್ನೂ ಓದಿ ಯಾವ ಬಾಲಿವುಡ್ ಹೀರೋಯಿನ್ಗೂ ಕಡಿಮೆ ಇಲ್ಲ ಹಿರಿಯ ನಟ ಜೈ ಜಗದೀಶ್ ಮಗಳು!

Leave a Comment