Actress Shivaraj Kumar: ಅಮೆರಿಕದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬೀದಿ-ಬೀದಿ ಸುತ್ತುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್!

Actress Shivaraj Kumar: ಸ್ನೇಹಿತರೆ, ಸೆಲೆಬ್ರಿಟಿಗಳು ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿ ಇರುತ್ತಾರೆ ಅದು ಅವರವರ ಸಿನಿಮಗಳಿಂದಾಗಿಯೋ ಅಥವಾ ವೈಯಕ್ತಿಕ ವಿಚಾರಗಳಿಂದಲೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಸ್ಟಾರ್ ನಟ ನಟಿಯರ ಪೈಕಿ ಶಿವಣ್ಣ ಸಾಮಾನ್ಯರಲ್ಲಿ ಅತಿ ಸಾಮಾನ್ಯ ವ್ಯಕ್ತಿಯಂತೆ ಅಮೆರಿಕಾದ ರಸ್ತೆಯಲ್ಲಿ ತಿರುಗಾಡುತ್ತಿದ್ದು, ಇದು ವಿಶೇಷವಾಗಿ ಕಂಡುಬಂದಿದೆ.

ಹೌದು ಗೆಳೆಯರೇ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ (Navika Vishwa Kannada Summit) ಭಾಗಿಯಾಗುವ ಸಲುವಾಗಿ ಅಮೆರಿಕಕ್ಕೆ ತೆರಳಿರುವಂತಹ ಶಿವ ರಾಜಕುಮಾರ್(Shiva Rajkumar) ಅಲ್ಲಿನ ಕೆಲಸ ಕಾರ್ಯಗಳು ಮುಗಿದ ನಂತರ ಪಯಣಿಗನಂತೆ ಶಾರ್ಟ್ಸ್ ಟಿ-ಶರ್ಟ್ ಧರಿಸಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಅಮೆರಿಕದ ರಮಣೀಯವಾದ ತಾಣಗಳನ್ನು ವೀಕ್ಷಿಸುತ್ತಿದ್ದಾರೆ.

ಸಾಮಾನ್ಯವಾಗಿ ಯಾವುದಾದರೂ ಸೆಲೆಬ್ರೆಟಿಗಳು ಈ ರೀತಿ ರಸ್ತೆಯಲ್ಲಿ ಓಡಾಡಿದರೆ ಜನ ಅವರೊಟ್ಟಿಗೆಸಿಕೊಳ್ಳಲು ಸೆಲ್ಫಿ ಕ್ಲಿಕಿಸಿಕೊಳ್ಳಲು ಅಥವಾ ಆಟೋಗ್ರಾಫ್ ಪಡೆಯಲು ಮುಗಿಬಿದ್ದು ಅವರು ನೋಡಬೇಕೆಂದುಕೊಂಡಿರುವಂತಹ ಸ್ಥಳಗಳನ್ನು ವೀಕ್ಷಿಸಲಾಗದಂತೆ ಮಾಡಿಬಿಡುತ್ತಾರೆ.

ಈ ಕಾರಣದಿಂದ ಶಿವರಾಜ್ಕುಮಾರ್(Shiva Rajkumar) ಯಾರಿಗೂ ಹೇಳದೆ ಸಾಮಾನ್ಯ ವ್ಯಕ್ತಿಯಂತೆ ಅಮೆರಿಕದ ಪ್ರವಾಸಿ ತಾಣಗಳನ್ನೆಲ್ಲ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಇದರ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಮೇರಿಕಾದಲ್ಲಿ ಸೆಪ್ಟೆಂಬರ್ 1ನೇ ತಾರೀಕು ಪ್ರಾರಂಭವದಂತ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಪಂಚೆ ಧರಿಸಿ ರಗಡಾಗಿ ಕಾಣಿಸಿಕೊಂಡಂತಹ ಶಿವರಾಜಕುಮಾರ್(Shiva Rajkumar) ವೇದಿಕೆಯ ಮೇಲೆ ಕನ್ನಡವನ್ನು ಉದ್ದೇಶಿಸಿ ಹೆಮ್ಮೆಯಿಂದ ಮಾತನಾಡಿದರು.

ಇದರ ಜೊತೆಗೆ ಕನ್ನಡದ ಹಾಡುಗಳಿಗೆ ಸ್ಟೆಪ್ ಹಾಕುತ್ತಾ ಶಿವಣ್ಣ ಕುಣಿದ ಪರಿಗೆ ಫ್ಯಾನ್ಸ್ ಫಿದಾ ಆಗಿ ಹೋಗಿದ್ದರು. ಈ ಕಾರ್ಯಕ್ರಮ ಮುಗಿದ ನಂತರ ಅಮೇರಿಕಾ ನೋಡುವಂತಹ ಆಸೆಯಿಂದಾಗಿ ತಾನು ಓರ್ವ ಸೆಲೆಬ್ರಿಟಿ ಎಂದು ಯಾರಿಗೂ ತಿಳಿಯಬಾರದೆಂದು ಅತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಉಡುಪನ್ನು ಧರಿಸಿ ಕಣ್ಣಿಗೆ ಗಾಗಲ್ಸ್ ಹಾಗೂ ಹಣೆಗೆ ಸ್ಕಾಫ್ ಕಟ್ಟಿಕೊಂಡು ಅಮೆರಿಕದ (America) ರಮಣೀಯವಾದ ಪ್ರವಾಸಿ ತಾಣಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ Sanju Basayya: ಮದುವೆಯಾಗಿ ಕೆಲವೇ ದಿನಗಳಲ್ಲಿ ಅಪ್ಪು ಹಾಗೂ ರಾಜಕುಮಾರ್ ಸ್ಮಾರಕಕ್ಕೆ ಭೇಟಿ ಕೊಟ್ಟ ಸಂಜು ಬಸಯ್ಯ ದಂಪತಿ

Leave a Comment