ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್! ವೈರಲ್ ಆದ ಮದುವೆ ಆಲ್ಬಮ್ ಇಲ್ಲಿದೆ ನೋಡಿ

ತಮ್ಮ ಅತಿ ಅದ್ಭುತ ನಿರ್ದೇಶನ ಹಾಗೂ ನಟನೆಯ ಮೂಲಕ ಹಲವಾರು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಇಂದಿಗೂ ಅಷ್ಟೇ ಬೇಡಿಕೆ ಹಾಗೂ ವರ್ಚಸ್ಸನ್ನು ಕಾಪಾಡಿಕೊಂಡು ಬಂದಿರುವಂತಹ ಎಸ್ ನಾರಾಯಣ್(S Narayan) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ? ಡಾ ವಿಷ್ಣುವರ್ಧನ್ ಅವರ ಕಾಲದಿಂದಲೂ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಇಂದಿಗೂ ಕಿರುತೆರೆ ಸೀರಿಯಲ್ಗಳ ಮೂಲಕ ಸಿನಿ ಪ್ರೇಕ್ಷಕರಿಗೆ

ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿರುವ ಎಸ್ ನಾರಾಯಣ್ ಅವರು ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ತಮ್ಮ ಜೇಷ್ಠ ಪುತ್ರ ಪಂಕಜ್ (Pankaj) ಅವರ ಮದುವೆಯನ್ನು ಖಾಸಗಿ ರೆಸಾರ್ಟ್ ಒಂದರಲ್ಲಿ ಬಹಳ ಅದ್ದೂರಿಯಾಗಿ ನೆರವೇರಿಸಿದರು. ಮದುವೆಯ ಫೋಟೋಗಳೆಲ್ಲವೂ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಚೈತ್ರದ ಚಂದ್ರಮ (Chaitrada Chandrama) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಹೆಸರುವಾಸಿಯಾಗಿದ್ದಂತಹ ಪಂಕಜ್ ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಗಣಪತಿಯ ಜೀವನಕ್ಕೆ ಕಾಲಿಟ್ಟಿದ್ದು,

ಯಾರೆಲ್ಲಾ ಇವರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು? ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಹೌದು ಗೆಳೆಯರೇ ಮೈಸೂರಿನಲ್ಲಿ ಇರುವಂತಹ ಸ್ಪೆಕ್ಟ್ರ ಕನ್ವೆನ್ಷನ್ ಹಾಲ್ನಲ್ಲಿ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ಮತ್ತು ರಕ್ಷಾರ ಅದ್ದೂರಿ ಮದುವೆ ಸಂಭ್ರಮವು ನವೆಂಬರ್ 22ನೇ ತಾರೀಕು 2022ರಂದು ಬಹಳ ಅದ್ದೂರಿಯಾಗಿ ನೆರವೇರಿಸಲಾಗಿದ್ದು, ಈ ಒಂದು ಶುಭ ಕಾರ್ಯಕ್ರಮಕ್ಕೆ ಸಚಿವ ಎನ್ ಚೆಲುವನಾರಾಯಣಸ್ವಾಮಿ ಹಾಗೂ ಇನ್ನಿತರ ಪ್ರಭಾವಿ ರಾಜಕೀಯ ವ್ಯಕ್ತಿಗಳು ಬಂದು ನವದಂಪತಿಗಳನ್ನು ಹರಸಿ ಹಾರೈಸಿದರು.

ಅದರಂತೆ ಸಿನಿ ತಾರೆಯರಾದ ಶೃತಿ, ತಾರಾ ಅನುರಾಧ, ಭಾರತಿ ವಿಷ್ಣುವರ್ಧನ್, ಶ್ವೇತಾ ಚಂಗಪ್ಪ ದಂಪತಿಗಳು ಹೀಗೆ ಮುಂತಾದ ಸ್ಟಾರ್ ಸೆಲೆಬ್ರಿಟಿಗಳು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಿನಿಮಾಗಳನ್ನು ಮಾಡಿ ತಕ್ಕ ಮಟ್ಟದಲ್ಲಿ ಹೆಸರುವಾಸಿ ಆಗಿದ್ದ ಪಂಕಜ್ ಅವರು ಕಳೆದ ಕೆಲ ವರ್ಷಗಳ ಹಿಂದಷ್ಟೇ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಒಡೆಯ(Odeya) ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಮಾಲಾಶ್ರೀ ಮಗಳು ಆರಾಧನಾ ರಾಮ್ ಅವರನ್ನು ಹಾಡಿ ಹೊಗಳಿದ ದರ್ಶನ್ ಹೇಳಿದ್ದೇನು?

Leave a Comment