Actress Ramya ನಟಿ ರಮ್ಯಾ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನ ಸಮಯದಲ್ಲಿ ಅಂಬರೀಶ್(Ambareesh) ಅವರ ಕುಟುಂಬದ ಜೊತೆಗೆ ಸಾಕಷ್ಟು ನಿಕಟವಾದ ಸಂಬಂಧವನ್ನು ಹೊಂದಿದ್ದರು. ರಮ್ಯಾ(Ramya) ಅವರ ರಾಜಕೀಯ ಜೀವನದ ಗುರು ಅಂಬರೀಶ್ ಎಂದರು ಕೂಡ ತಪ್ಪಾಗಲಾರದು.
ಆದರೆ ನಂತರದ ಸಂದರ್ಭದಲ್ಲಿ ರಮ್ಯ ಅವರಿಗೆ ಟಿಕೆಟ್ ನೀಡುವ ಕಾರಣದಿಂದಾಗಿ ಅಂಬರೀಶ್ ಅವರಿಗೆ ಟಿಕೆಟ್ ಅನ್ನು ತಪ್ಪಿಸಲಾಗಿತ್ತು ಇದೇ ಕಾರಣದಿಂದಾಗಿ ಇವರಿಬ್ಬರ ನಡುವೆ ಅಸಮಾಧಾನ ಕೂಡ ಮೂಡಿತ್ತು ಹಾಗೂ ಇಬ್ಬರು ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದರು ಎಂಬುದು ಕೂಡ ಸಾಕಷ್ಟು ಸಮಯಗಳಲ್ಲಿ ತಿಳಿದುಬಂದಿದೆ
ಅಂಬರೀಶ್ ಅವರ ಮರಣದ ಸಂದರ್ಭದಲ್ಲಿ ಕೂಡ ಅವರನ್ನು ಕೊನೆಯ ಬಾರಿಗೆ ನೋಡಲು ರಮ್ಯಾ(Ramya) ಅವರು ಬರದೇ ಇದ್ದಿದ್ದನ್ನು ಇವರಿಬ್ಬರ ನಡುವಿನ ದ್ವೇಷ ಎಂಬುದಾಗಿ ಬಿಂಬಿಸಲಾಗಿತ್ತು. ಆದರೆ ಈಗ ಅವರ ಮಗ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆಗೆ ಹೋಗುವ ಮೂಲಕ ಅದನ್ನು ಹುಸಿಗೊಳಿಸಿದ್ದಾರೆ.
ಇನ್ನು ಅಭಿಷೇಕ್ ಅಂಬರೀಶ್ ಅವರ ಮದುವೆಗೆ ನಟಿ ರಮ್ಯಾ(Ramya) ಅವರು ಭರ್ಜರಿ ಒಂದು ಲಕ್ಷ ರೂಪಾಯಿ ಅಧಿಕ ಮೌಲ್ಯದ ಸೀರೆಯನ್ನು ಹುಟ್ಟುಕೊಂಡು ಹೋಗಿರುವುದನ್ನು ತಮ್ಮ instagram ಖಾತೆಯಲ್ಲಿ ಕೂಡ ಅವರು ಪೋಸ್ಟ್ ಮಾಡಿರುವುದು ನೀವು ನೋಡಬಹುದಾಗಿತ್ತು ಈ ಸೀರೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.