ಎರಡನೇ ಮದುವೆ ಆಗೋಕೆ ನಟಿ ಪ್ರೇಮಾ ಸಿದ್ಧ. ಪ್ರೇಮಾ ಮದುವೆಯಾಗೋ ಹುಡುಗ ಹೇಗಿರಬೇಕಂತೆ ಗೊತ್ತಾ

ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟಿ. ಪ್ರೇಮಾ ಅವರು 1994 ರಿಂದ 2004 ರ ತನಕ ಕನ್ನಡ ಚಿತ್ರರಂಗದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ನಟಿ. ಪ್ರೇಮ ಅವರಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದದ್ದು ಅವರ ಸಹಜ ನಟನೆ ಮತ್ತು ಸಹಜ ಸೌಂದರ್ಯ. ತನ್ನ ವೃತ್ತಿ ಜೀವನದಲ್ಲಿ ಪ್ರೇಮಾ ಅವರು ಎಂದಿಗೂ ಅತಿರೇಕದ ವರ್ತನೆ ಅಥವಾ ಗ್ಲಾಮರಸ್ ಪಾತ್ರಗಳಲ್ಲಿ ಅಭಿನಯಿಸಲು. ಹತ್ತು ವರ್ಷಗಳ ಕಾಲ ತಮ್ಮ ವ್ಯಕ್ತಿತ್ವವನ್ನು ಮತ್ತು ನಡತೆಯನ್ನು ಇಂದಿಗೂ ಹಾಳುಮಾಡಿಕೊಳ್ಳದೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾರೆ.

ನಟಿ ಪ್ರೇಮಾ ಅವರು ಊಹಿಸಲಾಗದಂಥ ಸಾಧನೆಯನ್ನು ಚಿತ್ರರಂಗದಲ್ಲಿ ವೃತ್ತಿ ಜೀವನದಲ್ಲಿ ಸಾಧಿಸಿ ತೋರಿಸಿದ್ದಾರೆ . ಆದರೆ ವೈಯಕ್ತಿಕ ಜೀವನದಲ್ಲಿ ಪ್ರೇಮಾ ಅವರು ಅಡೆತಡೆಗಳನ್ನು ಅನುಭವಿಸಿದ್ದಾರೆ. 2004 -2005 ರಲ್ಲಿ ನಟಿ ಪ್ರೇಮಾ ಅವರು ಚಿತ್ರರಂಗದ ಟಾಪ್ ನಟಿಯಾಗಿದ್ದರು. ಆದರೆ ಅದೇ ಸಮಯದಲ್ಲಿ ನಟಿ ಪ್ರೇಮಾ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. 2006 ನಟಿ ಪ್ರೇಮಾ ಅವರು ಜೀವನ್ ಅಪ್ಪಚ್ಚು ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿ ಟ್ಟರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪ್ರೇಮ ಅವರು ಸಿನಿಮಾಗಳಲ್ಲಿ ಕಾಣಿಸಿ ಕೊಳ್ಳಲಿಲ್ಲ.

ನಟಿ ಪ್ರೇಮಾ ಅವರ ದಾಂಪತ್ಯ ಜೀವನ ಹೇಳಿಕೊಳ್ಳುವಷ್ಟು ಸುಗಮವಾಗಿ ಸಾಗುವದಿಲ್ಲ ಹತ್ತೇ ವರ್ಷಗಳಲ್ಲಿ ನಟಿ ಪ್ರೇಮಾ ಅವರು ಗಂಡನಿಗೆ ಡೈವೋರ್ಸ್ ಕೊಟ್ಟರು. 2016 ರಲ್ಲಿ ನಟಿ ಪ್ರೇಮಾ ಅವರು ವಿಚ್ಛೇದನ ನೀಡಿ ಒಬ್ಬಂಟಿಯಾಗಿ ತಂದೆ ತಾಯಿ ಜೊತೆ ಜೀವನ ನಡೆಸಲು ಪ್ರಾರಂಭಿಸಿದರು. ನಟಿ ಪ್ರೇಮಾ ಅವರಿಗೆ ಜೀವನ್ ಜೊತೆ ಮದುವೆ ಆಗಲು ಸ್ವಲ್ಪ ಕೂಡ ಇಷ್ಟವಿರಲಿಲ್ಲ. ಆದರೆ ತಂದೆ ತಾಯಿಯ ಹಠಕ್ಕೆ ಸೋತು ನಟಿ ಪ್ರೇಮಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಒಪ್ಪಿಕೊಳ್ಳುತ್ತಾರೆ.

ವಿಭಿನ್ನ ವ್ಯಕ್ತಿತ್ವ ಯೋಚನೆ ಮತ್ತು ಭಿನ್ನಾಭಿಪ್ರಾಯಗಳಿಂದ ನಟಿ ಪ್ರೇಮಾ ಅವರು ಗಂಡನಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಗಂಡನಿಂದ ದೂರವಾಗಿ ಸುಮಾರು ಹದಿನಾರು ವರ್ಷಗಳು ಕಳೆದಿವೆ. ಇದೀಗ ನಟಿ ಪ್ರೇಮಾ ಅವರು ತನ್ನ ಎರಡನೆಯ ಮದುವೆಯ ಬಗ್ಗೆ ಇರುವ ಆಲೋಚನೆಗಳನ್ನು ತಿಳಿಸಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಪ್ರೇಮಾ ಅವರು ಮದುವೆಯಾಗುತ್ತಿದ್ದಾರೆ ಸುಳ್ಳು ಸುದ್ದಿಗಳು ಹರಿದಾಡುತ್ತಿತ್ತು. ನಟಿ ಪ್ರೇಮಾ ಅವರು ಮೊದಲನೇ ಮದುವೆ ನಂತರ ಇಲ್ಲಿಯವರೆಗೆ ಇನ್ನೂ ಮದುವೆಯಾಗಿಲ್ಲ.

ಇದೀಗ ನಟಿ ಪ್ರೇಮಾ ಅವರು ಮದುವೆಯಾಗುವ ಸೂಚನೆಯೊಂದನ್ನು ನೀಡಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ನಟಿ ಪ್ರೇಮಾ ಅವರು ಖುದ್ದಾಗಿ ತಾವೇ ಮದುವೆಯಾಗುವ ಆಲೋಚನೆ ಹೊಂದಿರುವುದಾಗಿ ತಿಳಿಸಿದ್ದಾರೆ. ಒಳ್ಳೆ ಹುಡುಗ ಸಿಕ್ಕರೆ ಖಂಡಿತ ಮದುವೆಯಾಗುತ್ತೀನಿ ಎಂದು ಹೇಳಿದ್ದಾರೆ. ನಾನು ಮದುವೆ ಆಗಲೇಬೇಕು ಅಂತ ಏನಿಲ್ಲ ಆದರೆ ನನ್ನ ಹಣೆಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ ನನಗೆ ಯಾವಾಗ ಮದುವೆಯಾಗುತ್ತೆ ಆಗಲಿ. ಸ್ವರ್ಗದಲ್ಲಿ ಮದುವೆ ನಿಶ್ಚಯವಾಗಿರುತ್ತದೆ ಅಂತ ಮಾತಿದೆ.

ಮದುವೆ ಆಗೋಕೆ ನಾನಂತೂ ರೆಡಿ ಇದ್ದೇನೆ ಆದರೆ ನಾನು ಮದುವೆಯ ಬಗ್ಗೆ ಏನೂ ಪ್ಲಾನ್ ಮಾಡಿಕೊಂಡಿಲ್ಲ. ಅಕಸ್ಮಾತ್ತಾಗಿ ಮದ್ವೆ ಆದರೂ ಆಗಬಹುದು ಹೇಳಲಿಕ್ಕೆ ಆಗಲ್ಲ. ಇನ್ನೊಮ್ಮೆ ಮದುವೆಯಾದರೆ ನಾನು ನನ್ನ ಗಂಡ ಹೀಗಿರಬೇಕು ಹಾಗಿರಬೇಕು ಎಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ಒಳ್ಳೆಯ ಮನಸ್ಸಿರುವ ಹೊಂದಾಣಿಕೆ ಮನೋಭಾವ ಇರುವ ವ್ಯಕ್ತಿ ಸಿಕ್ಕರೆ ಮದುವೆಯಾಗುತ್ತೀನಿ ಇಲ್ಲ ಎಂದರೆ ಆಗಲ್ಲ ನನಗೆ ಮದುವೆ ಆಗಲೇಬೇಕು ಅಂತೇನಿಲ್ಲ. ವಿವಾಹವೇ ಜೀವನವಲ್ಲ ಲತಾ ಮಂಗೇಶ್ಕರ್ ಹಾಗೂ ನಟಿ ರೇಖಾ ಅವರಂಥವರು ಮದುವೆಯಾಗದೆ ಬದುಕಿದ್ದಾರೆ. ಮದುವೆ ಆಗದೇ ಇದ್ದರೂ ಐಯಾಮ್ ಫೈನ್ ಅಂಥ ಪ್ರೇಮ ನಗುನಗುತ್ತಾ ವಿವಾಹದ ಬಗ್ಗೆ ಇರುವ ಅಭಿಪ್ರಾಯವನ್ನು ತಿಳಿಸಿದ್ದಾರೆ.

Leave a Comment