Actress prema: ಒಂದು ಕಾಲದಲ್ಲಿ ಸಿನಿ ರಸಿಕರ ಮನಗೆದ್ದಂತ ಹಿರಿಯ ನಟಿ ಪ್ರೇಮ ಅವರ ಫ್ಯಾಮಿಲಿ ಹೇಗಿದೆ ನೋಡಿ

Actress prema ಸ್ನೇಹಿತರೆ, ಅದೊಂದು ಕಾಲದಲ್ಲಿ ತಮ್ಮ ಅತ್ಯುನ್ನತ ಅಭಿನಯದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿ ಕನ್ನಡ ಮಾತ್ರವಲ್ಲದೆ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸಕ್ರಿಯರಾದಂತಹ ನಟಿ ಪ್ರೇಮ ಅವರು 1995ರಲ್ಲಿ ತೆರೆಗೆ ಬಂದ ‘ಸವ್ಯಸಾಚಿ ಪ್ರೇಮ’ (Savyasachi Prema) ಎಂಬ ಚಿತ್ರದ ಮೂಲಕ ತಮ್ಮ ನಟನ ಪಯಣವನ್ನು ಶುರು ಮಾಡುತ್ತಾರೆ.

ಹೀಗೆ ಮೊದಲ ಸಿನಿಮಾದ ಮೂಲಕವೇ ತಮ್ಮ ಅಭಿನಯದ ಛಾಪನ್ನು ಸ್ಯಾಂಡಲ್ವುಡ್ ತುಂಬೆಲ್ಲ ಮೂಡಿಸುವಲ್ಲಿ ಯಶಸ್ವಿಯಾದಂತಹ ಪ್ರೇಮ ಅವರಿಗೆ ಉಪೇಂದ್ರ ಅವರ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದಲ್ಲಿ ಮೂಡಿ ಬಂದ ಓಂ ಸಿನಿಮಾದ ನಾಯಕ ನಟಿ ಆಗುವಂತಹ ಅವಕಾಶ ದೊರಕುತ್ತದೆ.

ಪ್ರೇಮ ಅವರು ಈ ಚಿತ್ರದ ಮೂಲಕ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಅನಂತರ ನಟ ಮೋಹನ್ ಲಾಲ್, ವಿಷ್ಣುವರ್ಧನ್ ರವಿಚಂದ್ರನ್, ಶಿವರಾಜಕುಮಾರ್, ರಮೇಶ್ ಅರವಿಂದ್, ಸಾಯಿ ಕುಮಾರ್ ಉಪೇಂದ್ರ ಅವರಂತಹ ದಿಗ್ಗಜ ನಟರೊಂದಿಗೆ ಅಭಿನಯಿಸುತ್ತಾ ಉತ್ತುಂಗದ ಶಿಖರವನ್ನೇರಿದ ಪ್ರೇಮ ಅವರು ಜೂನ್ 6ನೇ 2006ರಲ್ಲಿ ಜೀವನ್ ಅಪ್ಪಚ್ಚು ,

ಎಂಬವರನ್ನು ಪ್ರೀತಿಸಿದ ಪಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ಇವರಿಬ್ಬರ ನಡುವೆ ಹೊಂದಾಣಿಕೆ ಸರಿ ಬರದ ಕಾರಣ ವಿಚ್ಛೇ’ದನ ಪಡೆದು ಮತ್ತೆ ಸಿನಿಮಾ ರಂಗದಲ್ಲಿ ಆಕ್ಟಿವ್ ಆಗಿ ಇರುವಂತಹ ಪ್ರೇಮ ಅವರು ಯಶಸ್ವಿ ಸಿನಿಮಾಗಳ ಮೂಲಕ ಇಂದಿಗೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ತಮ್ಮ ಹಾಗೂ ತಮ್ಮ ಫ್ಯಾಮಿಲಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಳ್ಳುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುವಂತಹ ಪ್ರೇಮ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ತಂದೆ ಚೆಟ್ಟಿಚ(Chetticha) ಹಾಗೂ ತಾಯಿ ಕಾವೇರಿ (Kaveri) ಅವರ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಪ್ರೇಮ (Prema) ಅವರ ಸುಂದರ ಕುಟುಂಬಕ್ಕೆ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇದನ್ನೂ ಓದಿ ಅಭಿಮಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಯಶ್ ರಾಧಿಕಾ ಪಂಡಿತ್!

Leave a Comment