Actress Manya: ದರ್ಶನ್ ಜೊತೆ ಶಾಸ್ತ್ರೀ ಸಿನಿಮಾದಲ್ಲಿ ನಟಿಸಿದ ನಟಿ ಮಾನ್ಯ ನಾಯ್ಡು, ಕುಟುಂಬದ ಫೋಟೋಸ್

Actress Manya with family photos: ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಶಾಸ್ತ್ರಿ ಸಿನಿಮಾದ ಮೂಲಕ ಹೆಸರುವಾಸಿಯಾದಂತಹ ನಟಿ ಮಾನ್ಯ ನಾಯ್ಡು ಈ ಪ್ರೀತಿ ಒಂಥರಾ, ಬೆಲ್ಲಿ ಬೆಟ್ಟ ಹೀಗೆ ಮುಂತಾದ ಫೇಮಸ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಂತಹ ನಟಿ ಅಕ್ಟೋಬರ್ 7, 1982 ರಂದು ಆಂಧ್ರಪ್ರದೇಶದಲ್ಲಿ ಪ್ರಹ್ಲಾದ್ ನಾಯ್ಡು ಮತ್ತು ಪದ್ಮಿನಿ ನಾಯ್ಡು ದಂಪತಿಗಳಿಗೆ ಜನಿಸಿದ ನಟಿ ಮಾನ್ಯ ನಾಯ್ಡು(Manya Naidu),

ಚಿಕ್ಕಂದಿನಿಂದಲೂ ತಮ್ಮ ತಂದೆಯಂತೆ ತಾವು ಸಹ ವೈದ್ಯರಾಗಬೇಕು ಕನಸನ್ನು ಹೊಂದಿರುತ್ತಾರೆ, ಆದರೆ ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಗಣಿತ ಮತ್ತು ಅಂಕಿ ಅಂಶವನ್ನು ಓದುತ್ತಾರೆ, ಅನಂತರ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡಿ ಪದವಿಯನ್ನು ಪಡೆದ ಮಾನ್ಯ ನಾಯ್ಡು ಅವರಿಗೆ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ.

ಹೀಗಾಗಿ ತಮ್ಮ ವಿದ್ಯಾಭ್ಯಾಸ ಮುಗಿಸಿದೊಡನೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈ ನಟಿ 2000 ಇಸವಿಯಲ್ಲಿ ತೆರೆಕಂಡ ಜೋಕರ್(Joker) ಎಂಬ ಸಿನಿಮಾದಲ್ಲಿ ನಟ ದಿಲೀಪ್ ಅವರೊಂದಿಗೆ ಅಭಿನಯಿಸುವ ಮೂಲಕ ಮಲಯಾಳಂ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಹೀಗೆ ಮೊದಲ ಸಿನಿಮಾದಲ್ಲಿಯೇ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡ ಮಾನ್ಯ ಮಾತೃ ಭಾಷೆಯಾದ ತೆಲುಗು ಹಾಗೂ ಮಲಯಾಳಂನಲ್ಲಿ ಹೆಚ್ಚು ಹೆಚ್ಚು ಚಿತ್ರಗಳಲ್ಲಿ

ಕನ್ನಡ, ಹಿಂದಿ, ತಮಿಳು ಹಾಗೂ ಇಂಗ್ಲೀಷ್ ಸಿನಿಮಾಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿರುವ ಮಾನ್ಯ(Manya) 2007ರಲ್ಲಿ ತೆರೆಗೆ ಬಂದ ಈ ಪ್ರೀತಿ ಒಂತರ ಎಂಬ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದರು. ಆನಂತರ ಅಂಬಿ, ಬೆಲ್ಲಿ ಬೆಟ್ಟ, ವರ್ಷ, ಶಾಸ್ತ್ರಿ, ಶಂಭು, ಸೊಂಟರಗಾಳಿ ಹೀಗೆ ನಲವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿ ಅವಕಾಶಗಳ ಉತ್ತುಂಗದ ಶಿಖರದಲ್ಲಿ ಇರುವಾಗಲೇ 2008ರಲ್ಲಿ ಸತ್ಯ ಪಟೇಲ್(Sathya Patel) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಜೋಡಿಗಳಿಗೆ ಒಂದು ಮುದ್ದಾದ ಹೆಣ್ಣು ಮಗಳಿದ್ದು ಸದ್ಯ ಸೋಶಿಯಲ್ ಮೀಡಿಯಾ(Social media)ದಲ್ಲಿ ಸಾಂಪ್ರದಾಯಕ ಉಡುಪಿನಲ್ಲಿ ಮಾನ್ಯ, ಸತ್ಯ ಪಟೇಲ್ಮಗಳು ಮತ್ತು ಸಹೋದರಿ ಮೀರಾ ನಾಯ್ಡು (Meera Naidu) ಫೋಟೋಗೆ ಫೋಸ್ ನೀಡಿದ್ದಾರೆ. ಇನ್ಸ್ಟಾಗ್ರಾಮ್(Instagram) ನಲ್ಲಿ ಸಕ್ಕತ್ ಆಕ್ಟಿವ್ ಇರುವಂತಹ ಈ ನಟಿ ಆಗಾಗ ತಮ್ಮ ಕುಟುಂಬದ ಫೋಟೋಗಳನ್ನು ಶೇರ್ ಮಾಡುತ್ತಾ ವೈರಲ್ ಆಗುತ್ತಿರುತ್ತಾರೆ.

Leave a Comment