ಸ್ನೇಹಿತರೆ ನೆನ್ನೆ ಅಂದರೆ ಸಪ್ಟೆಂಬರ್ 29ನೇ ತಾರೀಕು ತಮಿಳುನಾಡಿಗೆ ಕಾವೇರಿಯನ್ನು ಹರಿಬಿಡುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ಬಂದ್ ಮಾಡಲಾಗಿತ್ತು. ಈ ಒಂದು ಬಂದ್ಗೆ ಪ್ರಮುಖ ಎಲ್ಲ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ದೊರಕಿದ್ದು, ಅದರಲ್ಲೂ ಕನ್ನಡ ಸಿನಿಮಾ ರಂಗದ (Kannada Film Industry) ಸಾಕಷ್ಟು ಕಲಾವಿದರು ಹೋರಾಟ ನಡೆಸುತ್ತಾ ರ.ಕ್ತ ಕೊಟ್ಟೆವು ಕಾವೇರಿ ಬಿಡೆವು ಎಂದು ಘೋಷಣೆ ಕೂಗುತ್ತಾ ಕಾವೇರಿಯನ್ನು ಯಾವುದೇ ಕಾರಣಕ್ಕೂ ತಮಿಳಿಗರಿಗೆ ಬಿಡಬಾರದು ಕಾವೇರಿ ನಮ್ಮದು ಎಂದು ಹೋರಾಟ ಮಾಡಿದರು.
ಈ ಪ್ರತಿಭಟನೆಯಲ್ಲಿ ಕನ್ನಡ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ ಸರ್ಜಾ, ಉಪೇಂದ್ರ, ವಿಜಯ ರಾಘವೇಂದ್ರ, ಶ್ರೀ ಮುರಳಿ, ಹಾಸ್ಯ ನಟ ಚಿಕ್ಕಣ್ಣ, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಹಾಗೂ ನಟಿಮಣಿಯರಾದ ಉಮಾಶ್ರೀ, ಪ್ರಮೀಳಾ ಜೋಷಾಯಿ, ಭಾವನ, ಅನುಪ್ರಭಾಕರ್ ಮುಖರ್ಜಿ, ರಘು ಮುಖರ್ಜಿ, ಮತ್ತು ಹಂಸಲೇಖ ಸೇರಿದಂತೆ ಕನ್ನಡ ಸಿನಿಮಾ ನಟ-ನಟಿಯರು ನಿರ್ದೇಶಕ ನಿರ್ಮಾಪಕರು ಕಾವೇರಿ ಹೋರಾಟದಲ್ಲಿ ಭಾಗಿಯಾಗಿ ತಮ್ಮ ನಿಲುವನ್ನು ತೋಡಿಕೊಂಡರು.
ಹಾಗೂ ಸರ್ಕಾರ ಮತ್ತು ಮೇಲಿನವರು ಯಾವ ನಿರ್ಧಾರವನ್ನು ತೆಗೆದುಕೊಂಡರೆ ಕಾವೇರಿಯನ್ನು ನಮ್ಮಲ್ಲಿ ಉಳಿಸಿಕೊಳ್ಳಬಹುದು ಎಂಬುದರ ಸಲಹೆ ಸೂಚನೆಯನ್ನು ನೀಡಿದರು. ಈ ಹೋರಾಟಕ್ಕೆ ಕನ್ನಡ ಸಿನಿಮಾರಂಗದ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಹಾಜರಾಗಿ ಕೆಲವರು ಮಾತ್ರ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಆದರೆ ನವರಸ ನಾಯಕ ಜಗ್ಗೇಶ್ (Jaggesh) ಅವರು ಹೋರಾಟದಲ್ಲಿ ಕಾಣಿಸಿಕೊಳ್ಳದೆ ಇರುವುದು ಸ್ವಲ್ಪ ಬೇಸರವನ್ನು ಮೂಡಿಸಿತ್ತು.
ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅವರ ಆಸ್ಪತ್ರೆಯ ಫೋಟೋಗಳನ್ನು ಕಂಡಂತಹ ಅಭಿಮಾನಿಗಳು ಆತಂಕಕ್ಕೊಳಗಾದರು. ಹೌದು ಗೆಳೆಯರೇ ಅನಾರೋಗ್ಯದ ಸಮಸ್ಯೆಯಿಂದ ಜಗ್ಗಣ್ಣ ದಿಡೀರ್ ಆಸ್ಪತ್ರೆಗೆ ದಾಖಲಾಗಿದ್ದು ಅವರ ತೋತಾಪುರಿ(Totapuri) ಭಾಗ ಎರಡರ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಳೆದ ಮೂರು ನಾಲ್ಕು ದಿನಗಳಿಂದ ಜಗ್ಗೇಶ್ ಅವರಿಗೆ ತೀವ್ರ ಆರೋಗ್ಯ ಸಮಸ್ಯೆ ಭಾದಿಸುತಿದ್ದು ನಡೆದಾಡಲು ಆಗದಂತಹ ಪರಿಸ್ಥಿತಿಯಲ್ಲಿ ಇದ್ದಾಗ ವೈದ್ಯರು ಬೆಡ್ ರೆಸ್ಟ್
ತೆಗೆದುಕೊಳ್ಳುವಂತೆ ಹೇಳಿದ ಕಾರಣ ಯಾವುದೇ ಸಿನಿಮಾ ಕೆಲಸಗಳಲ್ಲಾಗಲಿ ಅಥವಾ ರಾಜಕೀಯ ವಿಚಾರವಾಗಾಗಲಿ ಜಗ್ಗಣ್ಣ (Jaganna) ಭಾಗಿಯಾಗದೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಹೀಗಾಗಿ ಕಾವೇರಿ ಹೋರಾಟಕ್ಕೆ ಗೈರಾಗಿರುವ ಮಾಹಿತಿ ತಿಳಿದು ಬಂದಿದೆ, ಜಗ್ಗಣ್ಣ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ.
ಇದನ್ನೂ ಓದಿ ಕಾವೇರಿಯನ್ನು ರಕ್ಷಿಸಲು ಒಂದಾದ ಸ್ಯಾಂಡಲ್ವುಡ್ ಕಲಾವಿದರು!