ಸ್ನೇಹಿತರೆ ಧನಂಜಯ್ ಹಾಗೂ ಅಮೃತ ಅಯ್ಯರ್(Amrutha Iyer) ತಮ್ಮ ನಡುವೆ ಇರುವುದು ಪ್ರೀತಿನ ಅಥವಾ ಸ್ನೇಹನಾ ಎಂಬುದಕ್ಕೆ ಯಾವುದೇ ರೀತಿಯ ಸ್ಪಷ್ಟನೆಯನ್ನು ನೀಡುತ್ತಿಲ್ಲ. ಒಟ್ಟಾಗಿ ಮೂರು ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತ ಯಶಸ್ವಿ ಜೋಡಿಗಳ ಪಟ್ಟಿಗೆ ಸೇರ್ಪಡೆಯಾಗಿರುವ ಧನಂಜಯ್(Dhananjay) ಮತ್ತು ಅಮೃತ ಅಯ್ಯರ್(Amrutha Iyer) ನಿಜ ಜೀವನದಲ್ಲಿಯೂ ಒಂದಾಗಿರಬೇಕೆಂದು ಪ್ರತಿಯೊಬ್ಬ ಅಭಿಮಾನಿಗಳು ಕೂಡ ಕೇಳಿಕೊಳ್ಳುತ್ತಿದ್ದಾರೆ.
ಅಲ್ಲದೆ ಯಾವುದೇ ಕಾರ್ಯಕ್ರಮಕ್ಕೂ ಒಟ್ಟಾಗಿ ಬಂದು ಕಂಗಳಿಸುವಂತಹ ಈ ಜೋಡಿ ಹಕ್ಕಿಗಳನ್ನು ನೋಡುವ ಪ್ರತಿಯೊಬ್ಬರು ಮದುವೆ ಯಾವಾಗ? ಎಂದೆಲ್ಲ ಕೇಳುವ ಮೂಲಕ ಕಾಲಲ್ಲಿಯುತ್ತಿರುತ್ತಾರೆ. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿಯೂ ಕೂಡ ಡಾಲಿ ಧನಂಜಯ್ ಮತ್ತು ಅಮ್ಮು ಪ್ರಣಯ ಪಕ್ಷಿಗಳು, ಕ್ಯೂಟ್ ಲವ್ ಬರ್ಡ್ಸ್ ಹಾಗಂತೆ ಹೀಗಂತೆ ಎಂಬೆಲ್ಲಾ ಸುದ್ದಿ ಆಗಾಗ ಹರಿದಾಡುತ್ತಲೆ ಇರುತ್ತದೆ. ಆದರೆ ಇದ್ಯಾವುದಕ್ಕೂ ತುಟಿ ಬಿಚ್ಚದ ಧನಂಜಯ್ ಹಾಗೂ ಅಮೃತ ತಾವಾಯಿತು ತಮ್ಮ ಕೆಲಸವಾಯಿತು ಎಂದಿದ್ದಾರೆ.
ಹೌದು ಸ್ನೇಹಿತರೆ, ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಒಂದಾದ ಅಮೃತ ಅಯ್ಯರ್ ಮತ್ತು ಡಾಲಿ ಧನಂಜಯ್ ನಂತರ ಬಡವ ರಾಸ್ಕಲ್ ಮತ್ತು ಗುರುದೇವ ಹೊಯ್ಸಳ ಹೇಗೆ ಮುಂತಾದ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಅಭಿಮಾನಿಗಳ ನೆಚ್ಚಿನ ಜೋಡಿ ಎಂಬ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೀಗೆ ತೆರೆಯ ಮೇಲೆ ಯಶಸ್ವಿಯಾಗಿರುವಂತಹ ಜೋಡಿಗಳು ನಿಜ ಜೀವನದಲ್ಲಿಯೂ ಒಂದಾಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಡಾಲಿ-ಅಮೃತ ಅಯ್ಯರ್ ಅವರ ಕ್ಯೂಟೆಸ್ಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಅದರಲ್ಲೂ ಹೊಯ್ಸಳ (Hoysala) ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಗುಲಾಬಿ ಬಣ್ಣದ ಬಟ್ಟೆಯಲ್ಲಿ ನಟಿ ಅಮೃತ ಅಯ್ಯರ್(Amrutha Iyer) ಬಹಳನೇ ಸಿಂಪಲ್ ಆಗಿ ಕಾಣಿಸಿಕೊಂಡರೆ ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಜೀನ್ಸ್ ಧರಿಸಿ ಡಾಲಿ (Daali) ರಗಡಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಇದನ್ನು ಕಂಡಂತಹ ನೆಟ್ಟಿಗರು ಕ್ಯೂಟ್ ಜೋಡಿಗಳು, ಲವ್ ಬರ್ಡ್ಸ್, ಪುಳಿಯೋಗರೆ ಪ್ಲಸ್ ಹುಳಿ ಎರಡನ್ನು ಮಿಕ್ಸ್ ಮಾಡಿದಂತಿದೆ ಎಂದೆಲ್ಲ ಕಮೆಂಟ್ ಮಾಡುವ ಮೂಲಕ ಡಾಲಿ ಅಮ್ಮು ಜೋಡಿ ಮೇಲಿರುವಂತಹ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ ಅಪ್ಪನನ್ನು ತಬ್ಬಿ ಮುದ್ದಾಡಿದ ದುನಿಯಾ ವಿಜಯ್ ಮಗಳು!