Actress Amulya: ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಭರ್ಜರಿ ಫೋಟೋ ಶೂಟ್ ಮಾಡಿಸಿದ ಅಮೂಲ್ಯ, ಸಂತೂರ್ ಮಮ್ಮಿ ಎಂದ ನೆಟ್ಟಿಗರು!

Actress Amulya: ಸ್ನೇಹಿತರೆ, ಬಾಲ ನಟಿಯಾಗಿ ಬಣ್ಣದ ಲೋಕವನ್ನು ಪ್ರವೇಶಿಸಿ ಇಂದು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಂತೋಷವನ್ನು ಅನುಭವಿಸುತ್ತಿರುವಂತಹ ನಟಿ ಅಮೂಲ್ಯ(Amulya) ಅವರ ಕುರಿತು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಣ್ಣದ ಲೋಕವನ್ನು ಪ್ರವೇಶಿಸಿದ ನಟಿ ಅಮೂಲ್ಯ ಅವರು ತಮ್ಮ ಅಪ್ರತಿಮ ಅಭಿನಯ ಪ್ರತಿಭೆ ಹಾಗೂ ಸೌಂದರ್ಯದ ಮೂಲಕ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶವನ್ನು ಗಿಟ್ಟಿಸಿಕೊಂಡರು.

ಚೆಲುವಿನ ಚಿತ್ತಾರ(Cheluvina Chittara) ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದು ತೆರೆಯ ಮೇಲೆ ಮಿಂಚಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಅಭಿನಯಿಸುತ್ತಿದಂತಹ ಅಮೂಲ್ಯ ಅವರು ಕಳೆದ ಕೆಲವು ವರ್ಷಗಳ ಹಿಂದೆ ಉದ್ಯಮಿ ಜಗದೀಶ್ ಆರ್ ಚಂದ್ರ (Jagadish R Chandra) ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡು ತಮ್ಮ ವೈಯಕ್ತಿಕ ಬದುಕಿನತ್ತ ಗಮನ ಹರಿಸುತ್ತಿದ್ದಾರೆ.

ಅಮೂಲ್ಯ ದಂಪತಿಗಳಿಗೆ ಆರವ್ ಮತ್ತು ಆದರ್ವ ಎಂಬ ಇಬ್ಬರು ಅವಳಿ ಮಕ್ಕಳಿದ್ದು, ಅವರ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿರುವ ಅಮೂಲ್ಯ ಅವರು ಆಗಾಗ ಮುದ್ದಾದ ಫೋಟೋಶೂಟ್ಗಳನ್ನು ಮಾಡಿಸುತ್ತಾ ಆ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳ ಜೊತೆಗೆ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಅದರಂತೆ ಅಮೂಲ್ಯ ಅವರು ಕೆಂಪು ಮತ್ತು ಆಕಾಶ ನೀಡಿ ಬಣ್ಣದ ಸೀರೆಯನ್ನು ಉಟ್ಟು ತಮ್ಮ ಮಕ್ಕಳಿಬ್ಬರಿಗೂ ಒಂದೇ ರೀತಿಯ ಜುಬ್ಬಾ ಪೈಜಾಮ ಹಾಕಿಸಿ ತಮ್ಮ ಪತಿಯೊಂದಿಗೆ ಸಾಂಪ್ರದಾಯಕವಾಗಿ ಫೋಟೋಶೂಟ್ ಮಾಡಿಸಿ

ಅದನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಎರಡು ಮಕ್ಕಳು ಜನಿಸಿದರು ಮಾಸದ ಅಮೂಲ್ಯ (Amulya) ಅವರ ಬ್ಯೂಟಿಗೆ ಫಿದಾ ಆಗಿರುವ ಅಭಿಮಾನಿಗಳು ಸಂತೂರ್ ಮಮ್ಮಿ ಎಂದೆಲ್ಲ ಕಾಮೆಂಟ್ ಮಾಡ್ತಾ ಅಮೂಲ್ಯ ಅವರ ಕಾಲದಲ್ಲಿದ್ದಾರೆ.

ಇದನ್ನೂ ಓದಿ Viral Video: ಹೆಂಡತಿಯ ಮಡಿಲ ತುಂಬಾ ಕಂತೆ ಕಂತೆ ಹಣ ತಂದು ಸುರಿದ ಪತಿ, ವೈರಲ್ ಆಯಿತು ವೀಡಿಯೊ

Leave a Comment