Actress AI Photos: ಸ್ನೇಹಿತರೆ, ಇತ್ತೀಚಿಗಿನ ಕೃತಕ ಬುದ್ಧಿಮತ್ತೆಯನ್ನು ಬಳಸಿ ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರೆಟಿಗಳ ಫೋಟೋಗಳನ್ನು ಎಡಿಟ್ ಮಾಡುವ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ಕನ್ನಡದ ಸ್ಟಾರ್ ನಟರು ಮಹಾಭಾರತ(Mahabharath) ಸಿನಿಮಾದಲ್ಲಿ ಅಭಿನಯಿಸಿದ್ದರೆ ಹೇಗಿರುತ್ತಿತ್ತು ಎಂಬ ಕಲ್ಪನೆಯನ್ನು ಎಐ ಫೋಟೋಗಳ ಮೂಲಕ ವೈರಲ್ ಮಾಡಲಾಗಿತ್ತು, ಅದರಂತೆ ಈಗ ಹಾಲಿವುಡ್ ಸಿನಿಮಾದಲ್ಲೇನಾದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕಾಣಿಸಿಕೊಂಡಿದ್ದಾರೆ ಹೇಗೆ ಕಾಣಿಸುತ್ತಾರೆ ಎಂಬ ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅತಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಾದ ಯಾವುದೇ ಪೋಸ್ಟ್ಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡರೆ ಅದು ಬಹು ದೊಡ್ಡ ಮಟ್ಟದಲ್ಲಿ ವೈರಲಾಗುತ್ತಿರುತ್ತದೆ. ಹೀಗಾಗಿ instagram ಹಾಗೂ facebook ನಂತಹ ಜಾಲಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನ ಸಾಕಷ್ಟು ಪ್ಯಾನ್ ಪೇಜ್ ಗಳು ಕ್ರಿಯೇಟ್ ಆಗಿದ್ದು ಅಭಿಮಾನಿಗಳು ದರ್ಶನ ಅವರ ಕ್ರಿಯೇಟಿವ್ ಫೋಟೋಗಳನ್ನು ಹಂಚಿಕೊಳ್ಳುತ್ತ ನೆಟ್ಟಿಗರನ್ನು ಆಕರ್ಷಿಸುತ್ತಿರುತ್ತಾರೆ.
ಹೀಗಿರುವಾಗ ದರ್ಶನ್ ಅವರ ಫೋಟೋಗಳನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಅದ್ಭುತವಾಗಿ ಎಡಿಟ್ ಮಾಡಿ ಅದನ್ನು ಮಧು ಚಕ್ರವರ್ತಿ ಎಂಬಾತ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಈ ಫೋಟೋಗಳು ಡಿ ಬಾಸ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಹುಲಿಯ ಪಕ್ಕದಲ್ಲಿ ರಗಡಾಗಿ ಕುಳಿತು ದರ್ಶನ್ ಪೋಸ್ ನೀಡಿರುವ ಹಾಗೆ ಅದ್ಭುತವಾಗಿ ಎಡಿಟ್ ಮಾಡಲಾಗಿದೆ.
ಇದನ್ನು ಕಂಡಂತಹ ನೆಟ್ಟಿಗರು ಇಂತಹ ಪಾತ್ರಗಳಲ್ಲಿ ದರ್ಶನ್ (Darshan) ಅಭಿನಯಿಸಿದರೆ ಚೆನ್ನಾಗಿರುತ್ತದೆ ದಯಮಾಡಿ ಮುಂದಿನ ದಿನಗಳಲ್ಲಿ ಈ ರೀತಿಯಾದಂತಹ ತ್ರಿಲ್ಲರ್ ಸಿನಿಮಾಗಳನ್ನು ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇನ್ನಷ್ಟು ಜನ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ವಾಟ್ಸಾಪ್ ಸ್ಟೋರಿ ಹಾಗೂ ಡಿಪಿಯಲ್ಲಿ ಹಾಕಿಕೊಂಡು ದಚ್ಚು ಮೇಲಿನ ಅಭಿಮಾನವನ್ನು ಮರೆಯುತ್ತಿದ್ದಾರೆ.