ಬಲವಂತವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಕರೆದುಕೊಂಡು ಸ್ಟೇಜ್ ಮೇಲೆ ಹೋದ ಶಿವಣ್ಣ. ಕಾರಣವೇನು ಗೊತ್ತಾ

ಅಶ್ವಿನಿ ಅವರು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಸುಮಾರು ತಿಂಗಳುಗಳ ಕಾಲ ಕಳೆದಿವೆ. ಅಶ್ವಿನಿ ಅವರು ಆ ಒಂದು ದುರ್ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ತುಂಬಾ ದಿನಗಳ ಕಾಲ ಕೊರಗುತ್ತಿದ್ದರು. ಇದೀಗ ಇತ್ತೀಚೆಗೆ ಅಶ್ವಿನಿಯವರಿಗೆ ಎಲ್ಲ ದುಃಖವನ್ನು ಮರೆತು ಹೊಸ ಜೀವನವನ್ನು ಪ್ರಾರಂಭಿಸುವ ಚೈತನ್ಯ ಮೂಡಿದೆ. ನಿಧಾನವಾಗಿ ಅಶ್ವಿನಿಯವರು ಅಪ್ಪು ಅವರ ಪಿಆರ್ ಕೆ ನಿರ್ಮಾಣ ಸಂಸ್ಥೆಯನ್ನು ಕೂಡ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಾಗೆ ರಾಜ್ ಕುಮಾರ್ ಕುಟುಂಬದ ಕಾರ್ಯಕ್ರಮಗಳಿಗೆ ಕೂಡ ಅಶ್ವಿನಿಯವರು ಪಾಲ್ಗೊಳ್ಳುತ್ತಿದ್ದಾರೆ.

ಅಶ್ವಿನಿಯವರ ನಗು ಮುಖವನ್ನು ನೋಡದೆ ತುಂಬಾ ದಿನಗಳು ಆಗಿತ್ತು. ಇದೀಗ ಅಶ್ವಿನಿ ಅವರ ಮುಖದಲ್ಲಿ ಸ್ವಲ್ಪ ಚೈತನ್ಯ ಮೂಡಿದೆ. ಇತ್ತೀಚೆಗೆ ನಡೆದ ಶಿವರಾಜ್ ಕುಮಾರ್ ಅವರ 125 ನೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಅಶ್ವಿನಿ ಅವರು ಪಾಲ್ಗೊಂಡಿದ್ದರು. ಹಾಗೆ ವಿಶೇಷವಾಗಿ ಕಾರ್ಯಕ್ರಮದಲ್ಲಿ ರಾಜ್ ಕುಟುಂಬದ ಮೊಮ್ಮಕ್ಕಳು ಮತ್ತು ಮಕ್ಕಳು ಕೂಡ ಪಾಲ್ಗೊಂಡಿದ್ದರು ನಟಿ ಅಶ್ವಿನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು, ಜೊತೆಗೆ ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ, ಶಿವರಾಜ್ ಕುಮಾರ್ ಅವರ ಸಹೋದರಿ ಪೂರ್ಣಿಮಾ,ಯುವರಾಜ್ ಕುಮಾರ್, ಧೀರನ್ ಹೀಗೆ ರಾಜ್ ಕುಮಾರ್ ಕುಟುಂಬದ ಎಲ್ಲ ಸದಸ್ಯರೂ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ನಟ ಶಿವರಾಜ್ ಕುಮಾರ್ ಅವರ 125 ನೇ ಚಿತ್ರ ಸೆಟ್ಟೇರಲಿದೆ ಎಂಬ ಖುಷಿ ಎಲ್ಲರಲ್ಲಿಯೂ ಮನೆಮಾಡಿತ್ತು. ಶಿವಣ್ಣ ಅವರ ಈ 125 ನೇ ಚಿತ್ರವನ್ನು ವೇದ ಎಂದು ಹೆಸರಿಡಲಾಗಿದೆ. ಹಾಗೆ ಈ ಚಿತ್ರ 1960 ನೇ ಇಸವಿಯ ಸಮಯದಲ್ಲಿ ನಡೆಯುವ ಕಥಾಹಂದರ. ಈ ಚಿತ್ರವನ್ನು ನಿರ್ದೇಶಕ ಹರ್ಷ ಅವರು ನಿರ್ದೇಶನ ಮಾಡಲಿದ್ದಾರೆ. ಭಜರಂಗಿ ,ಭಜರಂಗಿ-2 ಮತ್ತು ವಜ್ರಕಾಯ ನಂತರ ಶಿವಣ್ಣ ಮತ್ತು ಹರ್ಷ ಅವರ ಜೋಡಿಯಲ್ಲಿ ಮೂಡಿಬರಲಿರುವ ನಾಲ್ಕನೇ ಚಿತ್ರ ವೇದ.. ಇನ್ನೊಂದು ವಿಶೇಷ ಏನೆಂದರೆ ಈ ಚಿತ್ರವನ್ನು ಶಿವಣ್ಣ ಅವರ ಪತ್ನಿ ಗೀತಾ ಅವರು ನಿರ್ಮಾಣ ಮಾಡಲಿದ್ದು. ಇದು ಗೀತಾ ಅವರ ನಿರ್ಮಾಣದ ಮೊದಲ ಸಿನಿಮಾವಾಗಲಿದೆ.

ವೇದ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಿತ್ರರಂಗದ ಖ್ಯಾತ ನಟರಾದ ಅನಂತ್ ನಾಗ್, ದುನಿಯಾ ವಿಜಯ್, ಅರುಣ್ ಸಾಗರ್, ರಾಕ್ ಲೈನ್ ವೆಂಕಟೇಶ್ ಕೂಡ ಆಗಮಿಸಿದ್ದರು. ಈ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿಯೇ ಶಿವಣ್ಣ ಅವರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಬಲವಂತವಾಗಿ ಸ್ಟೇಜ್ ಮೇಲೆ ಕರೆದುಕೊಂಡು ಹೋಗಿದ್ದಾರೆ. ರಾಜ್ ಕುಮಾರ್ ಕುಟುಂಬದ ಎಲ್ಲ ಸದಸ್ಯರ ಜೊತೆ ಸ್ಟೇಜ್ ಮೇಲೆ ಒಂದು ಗ್ರೂಪ್ ಫೋಟೋ ತೆಗೆಸಿಕೊಳ್ಳಬೇಕು ಎನ್ನುವುದು ಶಿವಣ್ಣ ಅವರ ಆಸೆಯಾಗಿತ್ತು. ಆದಕಾರಣ ಶಿವಣ್ಣ ಅವರು ಅಶ್ವಿನಿಯವರನ್ನು ಸ್ಟೇಜ್ ಮೇಲೆ ಬರುವಂತೆ ಮನವಿ ಮಾಡಿಕೊಂಡರು, ಆದರೆ ಅಶ್ವಿನಿ ಅವರು ಇದಕ್ಕೆ ಒಪ್ಪಲಿಲ್ಲ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ತುಂಬಾ ಮುಜುಗರ. ಸ್ಟೇಜ್ ಮೇಲೆ ಬಂದು ಮಾತನಾಡುವುದು, ಸಂದರ್ಶನಗಳಲ್ಲಿ ಮಾತನಾಡುವುದು ಎಂದರೆ ಮುಜುಗರ ಪಡುತ್ತಾರೆ. ಶಿವಣ್ಣ ಅವರು ಸ್ಟೇಜ್ ಮೇಲೆ ಕರೆದಾಗ ಅಶ್ವಿನಿಯವರು ನಾನು ಬರುವುದಿಲ್ಲ ದಯವಿಟ್ಟು ನನ್ನನ್ನು ಕರೆಯ ಬೇಡಿ ಎಂದು ಹೇಳಿದರು. ಆದರೆ ಶಿವಣ್ಣ ಪಟ್ಟುಹಿಡಿದು ನೀವು ಬರಲೇಬೇಕು ಎಂದು ಸ್ಟೇಜ್ ನಿಂದ ಕೆಳಗೆ ಇಳಿದು ಅಶ್ವಿನಿಯವರು ಇದ್ದ ಜಾಗಕ್ಕೆ ಹೋಗಿ ಅವರನ್ನು ಬಲವಂತವಾಗಿ ಸ್ಟೇಜ್ ಮೇಲೆ ಕರೆದುಕೊಂಡು ಹೋಗಿ ಕುಟುಂಬದವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ರಾಜ್ ಕುಟುಂಬದವರು ಹೀಗೆ ನಗುತ್ತಾ ಸಂತೋಷವಾಗಿರಲಿ. ಶಿವಣ್ಣ ಅವರು 125, 150 ಹೀಗೆ 200 ಸಿನಿಮಾಗಳನ್ನು ಮಾಡುವಷ್ಟು ಶಕ್ತಿ ದೇವರು ನೀಡಲಿ ಎಂಬುದು ನಮ್ಮೆಲ್ಲರ ಹಾರೈಕೆ

Leave a Comment