Actor Yash: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಅದ್ದೂರಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ!

Actor Yash: ಸ್ನೇಹಿತರೆ, ರಾಕಿಂಗ್ ಸ್ಟಾರ್ ಯಶ್ (Yash) ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಯಾವುದೇ ಹಬ್ಬ ಹರಿದಿನಗಳು ಬಂದರು ಎಲ್ಲದರಿಂದ ಬ್ರೇಕ್ ಪಡೆದು ಮನೆಗೆ ತೆರಳು ಹೆಂಡತಿ ಮಕ್ಕಳೊಂದಿಗೆ ಬಹಳ ಸಡಗರ ಸಂಭ್ರಮದಿಂದ ಹಬ್ಬದ ವಿಶೇಷ ದಿನವನ್ನು ಆಚರಿಸುತ್ತಾರೆ ಅದರಂತೆ ಮಕ್ಕಳ ಜೊತೆ ಸೇರಿ ಗಂಡ ಹೆಂಡತಿ ಇಬ್ಬರೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ಆ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿವೆ.

ಹೌದು ಗೆಳೆಯರೇ ರಾಕಿಂಗ್ ಸ್ಟಾರ್ ಯಶ್ ರೇಷ್ಮೆ ಪಂಚೆ ಶರ್ಟ್ ಹಾಗೂ ಶಲ್ಯ ವಿಧಿಸಿದರೆ ಮಗನು ಕೂಡ ಅಪ್ಪನನ್ನೇ ಅನುಕರಿಸುತ್ತಾ ಅತಿ ಚಿಕ್ಕ ವಯಸ್ಸಿನಲ್ಲಿ ಪಂಚೆ ಉಡುವವರಾಗಿದ್ದಾರೆ. ಇತ್ತ ಮಗಳು ಐರಾ ಬಹಳನೆ ಸಿಂಪಲ್ಲಾಗಿ ಕೆಂಪು ಮತ್ತು ಹಸಿರು ಬಣ್ಣದ ಗೌನ್ ಧರಿಸಿದರೆ ನಟಿ ರಾಧಿಕಾ ಪಂಡಿತ್ ಅವರಂತೂ ತೇಟ್ ಮಹಾಲಕ್ಷ್ಮಿ ಅವರಂತೆ ಹಳದಿ ಬಣ್ಣದ ಸೀರೆಯನ್ನು ಉಟ್ಟು ಮೈತುಂಬ ಒಡವೆಗಳನ್ನು ಧರಿಸಿ ಕಂಗೊಳಿಸುತ್ತಿದ್ದಾರೆ.

ಸದ್ಯ ಇವರ ಈ ಫೋಟೋಗಳಿಗೆ ವ್ಯಾಪಕ ಮೆಚ್ಚುಗೆ ದೊರಕುತ್ತಿದ್ದು, ತನ್ನ ನೆಚ್ಚಿನ ನಟಿಯನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಡಂತಹ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗೆ ಸ್ಯಾಂಡಲ್ವುಡ್ನ ಸ್ಟಾರ್ ಸೆಲೆಬ್ರಿಟಿಗಳೆಲ್ಲರೂ ತಮ್ಮ ಮನೆಯಲ್ಲಿ ಅದ್ದೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿ ಅದರ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮನೆಯ ಹಬ್ಬಕ್ಕಿಂತ ಬೇರೆ ಯಾರ ಮನೆಯ ಹಬ್ಬವು ಅಷ್ಟು ವಿಜೃಂಭಣೆಯಾಗಿರಲಿಲ್ಲ.

ಹೌದು ಗೆಳೆಯರೇ ದೇವಿಯನ್ನು ಪ್ರತಿಷ್ಠಾಪಿಸಿ ಹೂವು ಹಣ್ಣು ಹಂಪಲಿನಿಂದ ಅಲಂಕಾರ ಮಾಡಿ ಬೆಳ್ಳಿ ತಟ್ಟೆ, ಬೆಳ್ಳಿ ದೀಪ ಹಾಗೂ ಬೆಳ್ಳಿ ಕಳಸಗಳಿಂದ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಇತ್ತ ಯಥರ್ವ ಅಪ್ಪನೊಂದಿಗೆ ನಿಂತು ಹಿಡಿದು ಫೋಟೋಗೆ ಫೋಸ್ ನೀಡಿದರೆ, ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಎಲ್ಲಾ ಫೋಟೋಗಳಿಗೆ ಮೆಚ್ಚುಗೆಯ ಸುರಿಮಳೆಯೇ ಹರಿದು ಬರುತ್ತಿದ್ದು ಫೋಟೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಬಾರಿ ವೈರಲಾಗುತ್ತಿದೆ.

ಇದನ್ನೂ ಓದಿ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕಾ ಪುನಚ್ಚ ಮತ್ತು ಭುವನ್ ಪೊನ್ನಣ್ಣ ಮದುವೆ ಆಲ್ಬಂ!

Leave a Comment