Upendra: ಹುಟ್ಟು ಹಬ್ಬದ ದಿನವೇ ಅದ್ದೂರಿಯಾಗಿ ಗಣೇಶ ಹಬ್ಬ ಆಚರಿಸಿದ ಉಪೇಂದ್ರ ದಂಪತಿಗಳು!

Actress Upendra: ಸ್ನೇಹಿತರೆ, ಗೌರಿ ಗಣೇಶ ಹಬ್ಬ ಎಂದರೆ ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯವಿಲ್ಲ ಹೇಳಿ? ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಬಹಳ ಸಂಭ್ರಮದಿಂದ ಆಚರಿಸಲಾಗುವಂತಹ ಈ ಹಬ್ಬವನ್ನು ಸ್ಯಾಂಡಲ್ ವುಡ್ನ ಸಿನಿ ತಾರೆಯರು ಕೂಡ ಅರ್ಥಪೂರ್ಣವಾಗಿ ಆಚರಿಸಿದ್ದು, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಅದರಂತೆ ನೆನ್ನೆ ಉಪ್ಪಿ ದಾದನ ಮನೆಯಲ್ಲಿ ಎರಡೆರಡು ವಿಶೇಷ ಹಬ್ಬದ ಸಂಭ್ರಮ ಎಂದರೆ ತಪ್ಪಾಗಲಿಕ್ಕಿಲ್ಲ. ಉಪೇಂದ್ರ(Upendra) ಅವರೇ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿರುವ ಹಾಗೆ ಅವರ ಕುಟುಂಬಕ್ಕೂ ಹಾಗೂ ಗಣೇಶ ಹಬ್ಬಕ್ಕೂ ಬಹುದೊಡ್ಡ ನಂಟಿದೆ. ಹೀಗಾಗಿ ಮನೆಯವರೆಲ್ಲರೊಟ್ಟಿಗೆ ಸೇರಿ ಬಹಳ ಅದ್ದೂರಿಯಾಗಿ ಗಣೇಶ ಹಬ್ಬವನ್ನು(Ganesha Festival) ಪ್ರತಿ ವರ್ಷವೂ ಆಚರಿಸುತ್ತಾರೆ. ಇನ್ನು ಎಲ್ಲಾ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡುವಂತಹ ಪ್ರಿಯಾಂಕರೊಟ್ಟಿಗೆ ಸೇರಿ ಗಣೇಶನಿಗೆ ಪೂಜ ಕೈಂಕರಿಯವನ್ನು ನೆರವೇರಿಸಿ ಪತಿ ಒಟ್ಟಿಗೆ ಫೋಟೋಗೆ ಫೋಸ್ ನೀಡಿದ್ದಾರೆ.

ಹೌದು ಗೆಳೆಯರೇ ಉಪೇಂದ್ರ ಅವರು ಹಸಿರು ಬಣ್ಣದ ಜುಬ್ಬ ಪೈಜಾಮ ಧರಿಸಿದರೆ ಪ್ರಿಯಾಂಕಾ ಉಪೇಂದ್ರ (Priyanka Upendra) ನೀಲಿ ಬಣ್ಣದ ಸೀರೆಯುಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಗಂಡ ಹೆಂಡತಿ ಇಬ್ಬರು ಮನೆಯಲ್ಲೇ ಗಣೇಶನನ್ನು ಕೂರಿಸಿ ಹೂವು ಹಣ್ಣು ಹಂಪಲು ಹಾಗೂ ಸಿಹಿತಿಂಡಿ ಗಳನ್ನು ದೇವರಿಗೆ ಅರ್ಪಿಸುತ್ತಾ ಭಕ್ತಿಯಿಂದ ಪ್ರಾರ್ಥಿಸಿದ್ದು, ಅದರ ಕೆಲ ಫೋಟೋಗಳನ್ನು ತಮ್ಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ತಮ್ಮ ಹುಟ್ಟು ಹಬ್ಬದ ಬೆನ್ನಲ್ಲೇ ಈ ವಿಶೇಷ ಹಬ್ಬ ಇದ್ದ ಕಾರಣ ಉಪ್ಪಿ, ತಮ್ಮ 55ನೇ ವರ್ಷದ ಬರ್ತಡೇ ಯನ್ನು ಮನೆಯವರೊಟ್ಟಿಗೆ ಬಹಳ ಸರಳವಾಗಿ ಆಚರಿಸಿದ್ದು, ಫೋಟೋಗಳನ್ನು ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಉಪೇಂದ್ರ ಅವರಿಗೆ ಗಣೇಶ ಹಬ್ಬದ ಹಾಗೂ ಹುಟ್ಟು ಹಬ್ಬದ ಶಶುಭಾಶಯಗಳನ್ನು ಅಭಿಮಾನಿಗಳು ಕೋರಿದ್ದಾರೆ.

ಇದನ್ನೂ ಓದಿ Actress Amulya: ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಭರ್ಜರಿ ಫೋಟೋ ಶೂಟ್ ಮಾಡಿಸಿದ ಅಮೂಲ್ಯ, ಸಂತೂರ್ ಮಮ್ಮಿ ಎಂದ ನೆಟ್ಟಿಗರು!

Leave a Comment