ಪತಿ ಕೊಟ್ಟ ಸರ್ಪ್ರೈಸ್ ಗೆ ನಟಿ ರಕ್ಷಿತಾ ರಿಯಾಕ್ಷನ್ ಹೇಗಿತ್ತು ನೋಡಿ

ಕನ್ನಡ ಸಿನಿಮಾರಂಗವು ಅನೇಕ ನಟ ನಟಿಯರನ್ನು ತೆರೆ ಮೇಲೆ ತಂದು ನೇಮ್ ಫೇಮ್ ತಂದುಕೊಟ್ಟಿದೆ. ಈ ಲೋಕದಲ್ಲಿ ಈಗಾಗಲೇ ಅದೆಷ್ಟು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡು ಫೇಮಸ್ ಆದವರಲ್ಲಿ ನಟಿ ರಕ್ಷಿತಾ ಪ್ರೇಮ್ ಅವರು ಕೂಡ ಒಬ್ಬರು. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡವರು. ಸೂಪರ್ ಹಿಟ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ನಟಿ ರಕ್ಷಿತಾ. ನಟಿ ರಕ್ಷಿತಾ ಪ್ರೇಮ್ ಅವರು ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಚೆಂದುಳ್ಳಿ ಚೆಲುವೆ. ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದವರು. ಆದರೆ ಇದೀಗ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದು, ಪತಿ ಕೊಟ್ಟ ಸರ್ಪ್ರೈಸ್ ಗೆ ರಿಯಾಕ್ಷನ್ ಕೊಟ್ಟಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನಟಿ ರಕ್ಷಿತಾ ರವರ ಸಿನಿಮಾ ಜರ್ನಿ ಕುರಿತು ಹೇಳುವುದಾದರೆ, ಖ್ಯಾತ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಮತ್ತು ನಟಿ ಮಮತಾರಾವ್ ರವರ ಮುದ್ದಿನ ಪುತ್ರಿ. ತಂದೆ ಸಿನಿಮಾರಂಗದಲ್ಲಿದ್ದ ಕಾರಣ, ಮಗಳು ಕೂಡ ನಟನೆಯತ್ತ ಮುಖ ಮಾಡಿದರು. 2002 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ ಅಪ್ಪುಸಿನಿಮಾದಲ್ಲಿ ನಾಯಕಿ ಕಾಣಿಸಿಕೊಳ್ಳುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು.

ತದನಂತರದಲ್ಲಿ ತೆಲುಗು ಮತ್ತು ತಮಿಳು ರಿಮೇಕ್‌ನಲ್ಲೂ ನಾಯಕಿಯಾಗಿ ಫೇಮಸ್ ಆದರು. ಇದಾದ ಬಳಿಕ ತೆರೆಕಂಡ ಕಲಾಸಿಪಾಳ್ಯ ಚಿತ್ರ ರಕ್ಷಿತಾ ಅವರ ನಟನಾ ಬದುಕಿಗೆ ಬ್ರೇಕ್ ನೀಡಿತು. ಈ ಸಿನಿಮಾದಲ್ಲಿ ರಕ್ಷಿತಾ ಹಾಗೂ ದರ್ಶನ್ ಕೆಮಿಸ್ಟ್ರಿ ಸಿನಿಮಾದಲ್ಲಿ ವರ್ಕ್ ಔಟ್ ಆಗಿತ್ತು. ಇನ್ನು, ಕನ್ನಡ ಸೇರಿದಂತೆ ಪರಭಾಷಾ ನಟರ ಜೊತೆಗೆ ತೆರೆ ಹಂಚಿಕೊಂಡರು. ಅದಲ್ಲದೆ, 2007 ರಲ್ಲಿ ನಿರ್ದೇಶಕ ಪ್ರೇಮ್‌ ಅವರನ್ನು ಪ್ರೀತಿಸಿ ಮದುವೆಯಾದರು.

ಪ್ರೇಮ್ ಜೊತೆ ಮದುವೆಯಾದ ನಂತರ ನಟನೆಯಿಂದ ದೂರ ಉಳಿದರು. ಕ್ರೇಜಿ ಕ್ವೀನ್ ರಕ್ಷಿತಾ ಅವರು ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿ ಇಂದು ಖುಷಿ ಖುಷಿಯಿಂದ ಜೀವನ ಕಳೆಯುತ್ತಿದ್ದಾರೆ. ಇವರಿಬ್ಬರದೂ ತದ್ವಿರುದ್ಧ ಗುಣಗಳು. ಇವರ ಮದುವೆ ಆದದ್ದೇ ನಿಜಕ್ಕೂ ಆಶ್ಚರ್ಯಕರವಾದ ವಿಷಯವಾಗಿದೆ. ಪ್ರೇಮ್ ಅವರು ಮಂಡ್ಯದವರು ಇಂಗ್ಲಿಷ್ ಗೊತ್ತಿಲ್ಲ. ಆದರೆ ರಕ್ಷಿತಾ ಮಾತ್ರ ಸಿಟಿಯಲ್ಲಿ ಶ್ರೀಮಂತ ಮನೆಯಲ್ಲಿ ಬೆಳೆದವರು.

ರಕ್ಷಿತಾಗೆ ಹಳ್ಳಿಯ ಬದುಕು ಸೊಗಡಿನ ಬಗ್ಗೆ ಏನೂ ಗೊತ್ತಿಲ್ಲ. ಇವರಿಬ್ಬರು ಹೇಗೆ ಪ್ರೀತಿ ಮಾಡಿದರು ಹೇಗೆ ಮದುವೆಯಾದರು ಎಂಬುದು ಹಲವರಿಗೆ ಇನ್ನೂ ಆಶ್ಚರ್ಯವಾಗಿ ಉಳಿದಿದೆ. ಮನಸು ಮನಸುಗಳು ಒಂದಾದರೆ ಇನ್ನೇನು ಬೇಕು ಅಲ್ಲವೇ ಹಾಗೆಯೇ ರಕ್ಷಿತಾ ಮತ್ತು ಪ್ರೇಮ್ ಪ್ರೀತಿಸಿ ಮದುವೆಯಾದರು. ಇಂದು ಈ ದಂಪತಿಗೆ ಸೂರ್ಯ ಎಂಬ ಮಗನಿದ್ದಾನೆ. ಸದ್ಯ ನಟಿ ರಕ್ಷಿತಾ ಪ್ರೇಮ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತಾ ಪ್ರೇಮ್ ಅವರು ಕಾಮಿಡಿ ಕಿಲಾಡಿಗಳು ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿ ಮಿಂಚುತ್ತಿದ್ದಾರೆ.

Leave a Comment