Actor Kishore: ಕಾಂತರಾ ಸಿನಿಮಾದ ಕಡಕ್ ಪೊಲೀಸ್ ಆಫೀಸರ್ ಕಿಶೋರ್ ಕುಮಾರ್ ಕುಟುಂಬದ ಅಪರೂಪದ ಫೋಟೋಸ್!

Actor Kishore Family: ಸ್ನೇಹಿತರೆ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿರುವಂತಹ ಕಿಶೋರ್ ಕುಮಾರ್(Kishore Kumar) ಅವರು 2013ರಲ್ಲಿ ತೆರೆಕಂಡ ಅಟ್ಟಹಾಸ ಸಿನಿಮಾದ ವೀರಪ್ಪನ್ ಕ್ಯಾರೆಕ್ಟರ್ ಮೂಲಕ ಹೆಸರುವಾಸಿಯಾದರೂ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಿನಿ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡಿರುವ ಕಿಶೋರ್ 2004ರಲ್ಲಿ ಕಾಂತಿ(Kanthi) ಎಂಬ ಚಿತ್ರದಲ್ಲಿ

ಬ್ಯಾಡರ ಬೀರ ಎಂಬ ಸಣ್ಣ ಪಾತ್ರ ಒಂದರಲ್ಲಿ ಅಭಿನಯಿಸುವ ಮೂಲಕ ನಟನಾ ಬದುಕಿಗೆ ಕಾಲಿಟ್ಟು ಆನಂತರ ತೆರೆಕಂಡ ದುನಿಯಾ, ಅಟ್ಟಹಾಸ, ಉಳಿದವರು ಕಂಡಂತೆ ಹಾಗೂ ಈಗಿನ ಕಾಂತಾರ (Kantara) ಸಿನಿಮಾಗಳವರೆಗೂ ಯಶಸ್ವಿ ಪಾತ್ರಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಹೀಗೆ ಎಂತಹ ಪಾತ್ರ ನೀಡಿದರು ಬಹಳ ಲೀಲಾ ಜಾಲವಾಗಿ ಅಭಿನಯಿಸಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಇವರು ಸಿನಿಮಾ ರಂಗಕ್ಕೆ ಬರುವ ಮುನ್ನ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Actor Kishore Family

ಹೀಗೆ ಸಿನಿ ಬದುಕಿನ ನಂಟನ್ನು ಬೆಳೆಸಿಕೊಂಡ ಕಿಶೋರ್ ಕಾಲಕ್ರಮೇಣ ಎಲ್ಲಾ ಸಿನಿಮಾಗಳಲ್ಲಿಯೂ ಅವಕಾಶಗಳ ಸುರಿಮಳೆಯನ್ನು ಗಿಟ್ಟಿಸಿಕೊಂಡು ಬಿಜಿ಼ ಇದ್ದಾಗಲೇ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ವಿಶಾಲ(Vishala) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಈ ಜೋಡಿಗಳು ತಮ್ಮ ತಮ್ಮ ವೃತ್ತಿಗೆ ಗುಡ್ ಬೈ ಹೇಳಿ ಬೆಂಗಳೂರಿನಿಂದ 35 km ದೂರದಲ್ಲಿ ಇರುವಂತಹ ಕರಿಯಪ್ಪನ ದೊಡ್ಡಿಯಂಬ ಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಕೃಷಿ ಮಾಡುತ್ತಾ ಹಚ್ಚ ಹಸಿರಿನ ವಾತಾವರಣದ ಮಧ್ಯೆ ಕಾಲ ಕಳೆಯುತ್ತಿದ್ದಾರೆ.

ಅಲ್ಲದೆ ಯೂಟ್ಯೂಬ್ ಚಾನೆಲ್ನಲ್ಲಿಯೂ ಕೃಷಿಗೆ ಬೇಕಾದಂತಹ ಕೆಲ ಟಿಪ್ಸ್ಗಳನ್ನು ನೀಡುತ್ತಾ ಜನರಿಗೆ ಅನುಕೂಲವಾಗುವ ಕೆಲಸದಲ್ಲಿ ನಟ ಕಿಶೋರ್ ಕುಮಾರ್ ಮತ್ತು ಪತ್ನಿ ವಿಶಾಲ ತೊಡಗಿಕೊಂಡಿದ್ದಾರೆ. ಸದ್ಯ ಈ ಜೋಡಿಗಳ ಕ್ಯೂಟೆಸ್ಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಪುಟದ ಮುಖಾಂತರ ನೀವು ಕೂಡ ಕಿಶೋರ್ ಅವರ ಕುಟುಂಬ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ ಇಡೀ ಕರುನಾಡೆ ತಿರುಗಿ ನೋಡುವಂತೆ ಮಾಡಿದ್ದ ಶಿವಣ್ಣನ ಮಗಳ ಮದುವೆಯ ಅಪರೂಪದ ಫೋಟೋಸ್!

Leave a Comment