Dhruva Sarja: ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಎರಡನೇ ಮಗುವಿನ ಸೀಮಂತ ಶಾಸ್ತ್ರ ಹೇಗಿತ್ತು ನೋಡಿ

Dhruva Sarja wife Prerana Simantha: ಸ್ನೇಹಿತರೆ, ಕಾಲೇಜು ದಿನಗಳಿಂದ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ನವೆಂಬರ್ 25ನೇ ತಾರೀಕು 2019 ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧ್ರುವ ಸರ್ಜಾ(Dhruva Sarja) ಮತ್ತು ಪ್ರೇರಣಾ(Prerana) ದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸದಾ ಸದ್ದು ಮಾಡುತ್ತಿರುತ್ತಾರೆ. ಹೌದು ಗೆಳೆಯರೇ ಸದಾ ವಿಭಿನ್ನವಾದಂತಹ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ,

ನೆಟ್ಟಿಗರ ಗಮನ ಸೆಳೆಯುವಂತಹ ಈ ಜೋಡಿ ಹಕ್ಕಿಗಳು ಕಳೆದ ಅಕ್ಟೋಬರ್ 2022ರ ಸಮಯದಲ್ಲಿ ತಮ್ಮ ಮನೆಗೆ ಮುದ್ದಾದ ಹೆಣ್ಣು ಮಗಳನ್ನು ಬರಮಾಡಿಕೊಳ್ಳುವ ಮೂಲಕ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದರು. ಅಪ್ಪನಾದ ಸಂತೋಷದ್ದ ಧ್ರುವ ಸರ್ಜಾ ಅವರು ಸಾಲು ಸಾಲು ಫೋಟೋಗಳನ್ನು ಪೋಸ್ಟ್ ಮಾಡುತ್ತಾ ತಮ್ಮ ಮುದ್ದು ಮಗಳ ಮೇಲಿನ ಪ್ರೀತಿಯನ್ನು ತೋಡಿಕೊಂಡರು.

ಹೀಗಿರುವಾಗ ಕಳೆದ ಕೆಲ ದಿನಗಳ ಹಿಂದೆ ವಿಶೇಷ ವಿಡಿಯೋ ಒಂದರ ಮೂಲಕ ಮನೆಗೆ ಆಗಮಿಸುತ್ತಿರುವಂತಹ ಎರಡನೇ ಅತಿಥಿಯ ಕುರಿತು ಮಾಹಿತಿ ಒಂದನ್ನು ಹಂಚಿಕೊಂಡಿದ್ದಂತಹ ಧ್ರುವ ಸರ್ಜಾ(Dhruva Sarja) ಇದೀಗ ತಮ್ಮ ಪತ್ನಿಗೆ ಎರಡನೇ ಮಗುವಿನ ಸೀಮಂತ ಶಾಸ್ತ್ರವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿ ಆ ಕೆಲ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ “ಐ ಲವ್ ಯು ಮೈ ವೈಫ್ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ನಮ್ಮೆಲ್ಲರಿಗೂ ಈ ಒಂದು ಸೀಮಂತ ಶಾಸ್ತ್ರದಿಂದಾಗಿ ಅಧಿಕ ಸಂತೋಷಕರವಾಗಿತ್ತು, ಜೈ ಹನುಮಾನ್” ಎಂಬ ಕ್ಯಾಪ್ಶನ್ ಬರೆದು ತಮ್ಮ ಹೆಂಡತಿಯ ಸೀಮಂತ ಶಾಸ್ತ್ರದ (Baby Shower) ವಿಡಿಯೋ ಝಲಕ್ ಒಂದನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ತಮ್ಮ ಫಾರ್ಮ್ ಹೌಸ್ ನಲ್ಲಿ ಇರುವಂತಹ ಅಣ್ಣ ಚಿರಂಜೀವಿ ಸರ್ಜಾ(Chiranjeevi Sarja) ಅವರ ಪುಣ್ಯ ಭೂಮಿಯಲ್ಲಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ನೆರವೇರಿಸಲಾಗಿದ್ದು,

ಈ ಒಂದು ಕಾರ್ಯಕ್ರಮಕ್ಕೆ ತೀರಾ ಹತ್ತಿರದವರು ಹಾಗೂ ಕುಟುಂಬಸ್ಥರನ್ನು ಆಹ್ವಾನಿಸಲಾಗಿತ್ತು, ಬಹಳ ಸರಳವಾಗಿ ನೆರವೇರಿಸಲಾದಂತಹ ಈ ಒಂದು ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ(Dhruva Sarja) ಕಂದು ಬಣ್ಣದ ಉಡುಪಿನ್ನು ಧರಿಸಿ ಮಿಂಚಿದರೆ ಪತ್ನಿ ಪ್ರೇರಣ(Prerana) ಸಾಂಪ್ರದಾಯಕವಾಗಿ ಸೀರೆ ಉಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಈ ವಿಡಿಯೋ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಬಾಲಕೃಷ್ಣನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದೇವೆ,

ಧ್ರುವ ಸರ್ಜಾ(Dhruva Sarja) ದೊಡ್ಡ ಹೋಟೆಲ್ ನಲ್ಲಿ ಈ ಕಾರ್ಯಕ್ರಮವನ್ನು ಮಾಡಬಹುದಿತ್ತು ಆದರೆ ಅಣ್ಣನ ಪುಣ್ಯಭೂಮಿಯಲ್ಲಿ ಮಾಡಿರುವುದು ವಿಶೇಷ, ಕ್ಯೂಟ್ ಫ್ಯಾಮಿಲಿ ಎಂದೆಲ್ಲ ಅಭಿಮಾನಿಗಳು ಕಮೆಂಟ್ ಮಾಡುತ್ತಾ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗಳಿಗೆ ಕಮೆಂಟ್ ಮೂಲಕ ಅಭಿನಂದನೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Leave a Comment