ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ನಿಸ್ವಾರ್ಥ ಸಹಾಯ ಮನೋಭಾವದ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಪುನೀತ್ ರಾಜ್ ಕುಮಾರ್ ಅವರು ಮನಸ್ಸು ಮಾಡಿದ್ದರೆ ಮತ್ತು ತಲೆಮಾರಿಗೆ ಆಗುವಷ್ಟು ಆಸ್ತಿಯನ್ನ ಮಾಡಬಹುದಿತ್ತು ಆದರೆ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ವೃದ್ಧರಿಗೆ ಮತ್ತು ಅನಾಥ ಮಕ್ಕಳಿಗೆ ಆಸರೆಯಾಗಿ ಬದುಕಿದ್ದರು. ಅಪ್ಪು ಅವರು ಸುಮಾರು 1800 ಮಕ್ಕಳ ಜೀವನಕ್ಕೆ ಆಸರೆಯಾಗಿದ್ದರು. ಅಪ್ಪು ಅವರ ಬದುಕು ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಂದು ಹಲವಾರು ಯುವಕರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ.
ಸಾಮಾಜಿಕ ಕಳಕಳಿ ತಂದಿದ್ದ ಇಂತಹ ಒಬ್ಬನು ತನ್ನನ್ನು ಕಳೆದುಕೊಂಡಿದ್ದು ನಮ್ಮ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ಪುನೀತ್ ಅವರ ನಷ್ಟವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಪುನೀತ್ ಅವರಿಂದ ಪ್ರೇರಣೆಗೊಂಡು ಇಂದು ಹಲವಾರು ನಟರು ಸಾಮಾಜಿಕ ಅಭಿವೃದ್ದಿಗೆ ಮುಂದಾಗುತ್ತಿರುವುದು ಖುಷಿಯ ವಿಚಾರ. ಇದರಲ್ಲಿ ನಟ ದರ್ಶನ್ ಅವರು ಕೂಡ ಒಬ್ಬರು ದರ್ಶನ್ ಅವರಿಗೆ ಮುಂಚೆಯಿಂದಲೂ ಕೂಡ ಸಹಾಯ ಮನೋಭಾವ ಇದೆ.
ಪ್ರಾಣಿ ಪಕ್ಷಿ ಮತ್ತು ರೈತರ ಮೇಲೆ ಕಾಳಜಿಯನ್ನು ಡಿ ಬಾಸ್ ಅವರು ಹೊಂದಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಅಷ್ಟೇ ಅಲ್ಲದೆ ನಟ ದರ್ಶನ್ ಅವರು ಇದೀಗ ಇನ್ನೊಂದು ಹೊಸ ಕ್ರಾಂತಿಯನ್ನು ಶುರುಮಾಡಿದ್ದಾರೆ . ಪುನೀತ್ ರಾಜ್ ಕುಮಾರ್ ಅವರಿಂದ ಪ್ರೇರಣೆಗೊಂಡು ನಟ ದರ್ಶನ್ ಅವರು ಈ ಒಂದು ಕ್ರಾಂತಿಯನ್ನು ಪ್ರಾರಂಭಿಸಿದ್ದಾರೆ. ಸರಕಾರಿ ಶಾಲೆಯ ಮಕ್ಕಳ ಅಭಿವೃದ್ಧಿ ಗೆ ಡಿ ಬಾಸ್ ಮುಂದಾಗಿದ್ದಾರೆ. ಹೌದು ಗೆಳೆಯರೆ ನಟ ದರ್ಶನ್ ಅವರು 13 ಸರಕಾರಿ ಶಾಲೆಗಳಿಗೆ ಸ್ವಂತ ಖರ್ಚಿನಿಂದ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿದ್ದಾರೆ.
ಸರಕಾರಿ ಶಾಲೆಯ ಉಳಿವಿಗೆ ದರ್ಶನ್ ಕರೆ ನೀಡಿದ್ದಾರೆ. 13 ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಬಟ್ಟಲು ಮತ್ತು ಸ್ಕೂಲ್ ಬ್ಯಾಗ್ ಗಳನ್ನು ಡಿ ಬಾಸ್ ವಿತರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಎಲ್ಲಾ ಶಾಲೆಗಳಿಗೂ ಉಚಿತವಾಗಿ ವಾಟರ್ ಫಿಲ್ಟರ್ ಮತ್ತು ಯುಪಿಎಸ್ ಅನ್ನು ವಿತರಿಸಿದ್ದಾರೆ. ಸರ್ಕಾರಿ ಶಾಲೆಯನ್ನು ಉಳಿಸಲು ಬಿಗ್ ಬಾಸ್ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿದ್ದಾರೆ. ಪುನೀತ್ ಅವರ ಹಾಗೆ ಇಂದು ದರ್ಶನ್ ಅವರು ಕೂಡ ಸಾವಿರಾರು ಮಕ್ಕಳಿಗೆ ಆಸರೆಯಾಗಿದ್ದಾರೆ. ಪುನೀತ್ ರಾಜ್ ಕುಮಾರ್ ರೂಪದಲ್ಲಿ ದರ್ಶನ ಅವರು ಸರಕಾರಿ ಶಾಲೆಯ ಮಕ್ಕಳ ಆರೈಕೆ ಮಾಡುತ್ತಿದ್ದಾರೆ.