ಸ್ನೇಹಿತರೆ, 2013ರಲ್ಲಿ ಡೈರೆಕ್ಟರ್ ಸ್ಪೆಷಲ್(Director’s Special) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ಡಾಲಿ ಧನಂಜಯ್(Dananjaya) 10 ವರ್ಷಗಳಲ್ಲಿ ಅಗಾಧವಾದ ಬೆಳವಣಿಗೆ ಹೆಸರು ಖ್ಯಾತಿ ಕೀರ್ತಿಯನ್ನು ಸಂಭವಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ಆರಂಭಿಕ ದಿನಗಳಲ್ಲಿ ಕೇವಲ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಂತಹ ಡಾಲಿ ಧನಂಜಯ ಅವರಿಗೆ ಬ್ರೇಕ್ ನೀಡಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಟಗರು ಸಿನಿಮಾ.
ಈ ಚಿತ್ರದಲ್ಲಿ ಡಾಲಿ ಎಂಬ ಪಾತ್ರಕ್ಕೆ ಕಳನಟನಾಗಿ ಬಣ್ಣ ಹಚ್ಚಿದಂತಹ ಧನಂಜಯ್ ಅವರ ಅಭಿನಯಕ್ಕೆ ಕನ್ನಡಿಗರು ಮನಸೋತೂ ಹೋಗಿದ್ದರು. ಅಲ್ಲಿಂದ ತಮ್ಮ ಎರಡನೇ ಎನ್ನಿಂಗ್ಸ್ ಪ್ರಾರಂಭ ಮಾಡಿದಂತಹ ಧನಂಜಯ್ ಮತ್ತೆಂದು ಹಿಂದಿರುಗಿ ನೋಡಿಯೇ ಇಲ್ಲ. ಹೌದು ಗೆಳೆಯರೇ ಟಗರು ಸಿನಿಮಾದ ನಂತರ ತಮ್ಮ ಬೇಡಿಕೆಯನ್ನು ದಿನ ಹೆಚ್ಚಿಸಿಕೊಳ್ಳುತ್ತಿರುವಂತಹ ಧನಂಜಯ ಅವರು ಯಾವ ಸಿನಿಮಾದಲ್ಲಿ ಅಭಿನಯಿಸಿದರು ಅದು ಶತ ದಿನಗಳನ್ನು ಪೂರೈಸುತ್ತದೆ.
ಅದು ಬಾಕ್ಸ್ ಆಫೀಸ್ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತದೆ. ಇನ್ನು 23 ಆಗಸ್ಟ್ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನ ಹಳ್ಳಿಯಲ್ಲಿ ಜನಿಸಿದಂತಹ ಧನಂಜಯ ಅವರಿಗೆ ಚಿಕ್ಕಂದಿನಿಂದಲೂ ನಟನೆ ಹಾಗೂ ನಾಟಕಗಳ ಮೇಲೆ ಬಹಳಾನೆ ಆಸಕ್ತಿ ಇದ್ದ ಕಾರಣ ವಿದ್ಯಾಭ್ಯಾಸದ ಜೊತೆಯಲ್ಲಿಯೇ ರಂಧಭೂಮಿಗೆ ಸೇರಿಕೊಂಡು ತಮ್ಮ ಅತಿ ಅದ್ಭುತ ಅಭಿನಯದ ಮೂಲಕ ಹಳ್ಳಿಯಲ್ಲಿ ನಡೆಯುವ ಸಣ್ಣಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದಿದ್ದರು.
ಅನಂತರ ಕನ್ನಡ ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಢಾಲಿ ಇಂದು ಪ್ಲಾನ್ ಇಂಡಿಯಾದಂತಹ ಸಿನಿಮಾಗಳಲ್ಲಿ ಅಭಿನಯಿಸುತ್ತ ಅತಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟಾರ್ ನಟರಾಗಿದ್ದಾರೆ. ಮೊನ್ನೆ ಅಷ್ಟೇ ಧನಂಜಯ್ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಹುಟ್ಟು ಹಬ್ಬದ ಅಂಗವಾಗಿ ತಮ್ಮ ಮುಂದಿನ ಸಿನಿಮಾಗಳ ಸಾಲು ಸಾಲು ಪಟ್ಟಿಯನ್ನು ರಿಲೀಸ್ ಮಾಡಿದರು.
ಡಾಲಿಯ ಹುಟ್ಟುಹಬ್ಬಕ್ಕೆ ಕನ್ನಡ ಸಿನಿಮಾರಂಗದ ಪ್ರಖ್ಯಾತ ಸೆಲೆಬ್ರಿಟಿಗಳ ಜೊತೆಗೆ ಅಭಿಮಾನಿ ಬಳಗ ಶುಭಾಶಯಗಳು ಮಹಾಪೂರವನ್ನು ಹರಿಸುವೆ. ಇನ್ನು ಹುಟ್ಟು ಹಬ್ಬದ ದಿನ ಸಂಜೆ ಪಾರ್ಟಿ ಒಂದನ್ನು ಆಯೋಜಿಸಿ ಅದಕ್ಕೆ ಕನ್ನಡ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಿದ್ದ ಢಾಲಿ ಅವರ ಬರ್ತಡೆ ಸೆಲೆಬ್ರೇಶನ್(Birthday Celebration) ಗೆ ನೆನಪಿರಲಿ ಪ್ರೇಮ್ ಮತ್ತು ಕುಟುಂಬ, ಅನುಪ್ ಭಂಡಾರಿ, ರಾಕಿಂಗ್ ಸ್ಟಾರ್ ಯಶ್, ಅಯ್ಯಂದ್ರಿತಾ ರೈ ಮತ್ತು ದಿಗಂತ್, ವಾಸುಕಿ ವೈಭವ್, ಕಾಂತರಾ ಸಿನಿಮಾ ನಾಯಕ ನಟಿ ಸಪ್ತಮಿ ಗೌಡ ಹಾಗೂ ಲವ್ ಮಾಕ್ಟೈಲ್(Love Mocktail) ಜೋಡಿ ಡಾರ್ಲಿಂಗ್ ಕೃಷ್ಣ(Darling Krishna) ಮತ್ತು ಮಿಲನ ನಾಗರಾಜ್ (Milana Nagraj) ಸೇರಿದಂತೆ ಮುಂತಾದವರು ಭಾಗಿಯಾದರು.