Abhishek Ambareesh ರೆಬಲ್ ಸ್ಟಾರ್ ಅಂಬರೀಶ್(Rebel Star Ambareesh) ಅವರ ಮಗ ಆಗಿರುವಂತಹ ಕನ್ನಡ ಚಿತ್ರರಂಗದ ಜೂನಿಯರ್ ರೆಬೆಲ್ ಸ್ಟಾರ್ ಆಗಿರುವ ಅಭಿಷೇಕ್ ಅಂಬರೀಶ್ ಅವರು ಈಗ ಮದುವೆಯಾಗಲು ಸಜ್ಜಾಗಿ ನಿಂತಿದ್ದಾರೆ. ಹೌದು ಸಾಕಷ್ಟು ಸಮಯಗಳಿಂದಲೂ ಕೂಡ ಅವರ ಮದುವೆಯ ಚರ್ಚೆಗಳು ನಡೆಯುತ್ತಿದ್ದವು.
ಈಗ ಕೊನೆಗೂ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಅವಿವ ಬಿದ್ದಪ್ಪ ಅವರನ್ನು ಇದೇ ಜೀವನದ ಅರಮನೆ ಮೈದಾನದಲ್ಲಿ ಸಾವಿರಾರು ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರ. ಇಡೀ ಕನ್ನಡ ಚಿತ್ರರಂಗವೇ ಇದರಲ್ಲಿ ಭಾಗಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಎಲ್ಲಕ್ಕಿಂತ ಪ್ರಮುಖವಾಗಿ ಈಗ ಸದ್ಯಕ್ಕೆ ಇಬ್ಬರ ಮದುವೆಗೂ ಮುನ್ನ ಮೆಹಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು ಈ ಸಂದರ್ಭದಲ್ಲಿ ಕುಟುಂಬದ ಅತ್ಯಂತ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಮಾತ್ರ ಭಾಗಿಯಾಗಿರುವುದು ಫೋಟೋಗಳಲ್ಲಿ ಕಂಡುಬಂದಿದೆ. ಫೋಟೋಗಳನ್ನು ನೋಡಿದ್ರೆ ಖಂಡಿತವಾಗಿ ನೀವು ಕೂಡ ಖುಷಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮದುವೆಗೆ ಕೇವಲ ಎರಡು ದಿನಗಳು ಬಾಕಿ ಇದ್ದು ಪ್ರತಿಯೊಬ್ಬರೂ ಕೂಡ ಅಂಬರೀಶ್ ಅವರು ಇದ್ದಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬುದಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತದೆ. ಇವರಿಬ್ಬರ ಈ ಮೆಹಂದಿ ಕಾರ್ಯಕ್ರಮದ ಫೋಟೋಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.