Abhishek Ambareesh ನಟ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆ ಈಗಾಗಲೇ ಅವಿವಾ ಅವರ ಜೊತೆಗೆ ಜೂನ್ 5ರಂದು ನಡೆದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಈ ಮದುವೆಗೆ ಗಣ್ಯತಿ ಗಣೀರೂ ಕೂಡ ಆಗಮಿಸಿ, ನವ ವಧುವರರಿಗೆ ಶುಭ ಹಾರೈಸಿ ಹೋಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅದ್ದೂರಿಯಾಗಿ ನಡೆದಿರುವ ಮದುವೆ ಇದಾಗಿದೆ.
ಕನ್ನಡ ತಮಿಳು ತೆಲುಗು ಹೀಗೆ ಪ್ರತಿಯೊಂದು ಭಾಷೆಗಳ ದೊಡ್ಡಮಟ್ಟದ ಸೂಪರ್ ಸ್ಟಾರ್ ಗಳು ಕೂಡ ಈ ಮದುವೆಗೆ ಆಗಮಿಸಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ(Aviva Bidapa) ಇಬ್ಬರಿಗೂ ಕೂಡ ಹರಸಿ ಹೋಗಿದ್ದಾರೆ. ಇನ್ನು ಜೂನ್ 7 ರಂದು ನಡೆದಿರುವಂತಹ ರಿಸೆಪ್ಶನ್ ಕಾರ್ಯಕ್ರಮಕ್ಕೆ ಕೂಡ ಸಾಕಷ್ಟು ದೊಡ್ಡ ಮಟ್ಟದ ಜನರ ಸಂಖ್ಯೆ ಬಂದು ಇಬ್ಬರನ್ನು ಹರಿಸಿ ಹೋಗಿತ್ತು.
ಈ ಕಾರ್ಯಕ್ರಮದಲ್ಲಿ ಅಂಬರೀಶ್ ಕುಟುಂಬದ ಅತ್ಯಂತ ಆಪ್ತ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಆಗಿರುವಂತಹ ದೊಡ್ಡಣ್ಣ(Doddanna) ಕೂಡ ಆಗಮಿಸಿದ್ದರು ಅವರು ಈ ಸಂದರ್ಭದಲ್ಲಿ ಮದುವೆ ಚೆನ್ನಾಗಿ ನಡೆದಿತ್ತು ಆದರೆ ಅದರಲ್ಲಿ ಒಂದು ಕೊರತೆ ಇತ್ತು ಎಂಬುದಾಗಿ ಹೇಳುವ ಮೂಲಕ ಎಲ್ಲರೂ ಆಶ್ಚರ್ಯ ತಳ್ಳಿದ್ದಾರೆ.
ಹೌದು ಅಂಬರೀಶ್ ಮಗನ ಮದುವೆಯಲ್ಲಿ ಅಂಬರೀಶ್(Ambareesh) ಇದ್ದಿದ್ದರೆ ಇನ್ನು ತುಂಬಾ ಚೆನ್ನಾಗಿತ್ತು ಆದರೆ ಆತ ಇಲ್ಲದೆ ಇರುವುದು ನಿಜಕ್ಕೂ ಕೂಡ ಒಂದು ಕೊರತೆಯ ರೀತಿಯಲ್ಲಿ ಕಾಣಿಸುತ್ತೆ ಹಾಗೂ ನಿಜಕ್ಕೂ ನಮಗೆ ಆತನ ಅನುಪಸ್ಥಿತಿ ಬೇಸರವನ್ನು ತರಿಸುತ್ತೆ ಅದೇನೇ ಇರಲಿ ಆದರೆ ಈಗ ಆತನ ಮಗನ ಮದುವೆ ಆಗಿರುವುದು ಖಂಡಿತ ಆತನ ಆತ್ಮಕ್ಕೆ ಶಾಂತಿಯನ್ನು ದೊರಕಿಸಿರುತ್ತದೆ ಎಂಬುದಾಗಿ ಹೇಳಿದ್ದಾರೆ.