Abhishek Ambareesh: ನಿಖಿಲ್ ಕುಮಾರಸ್ವಾಮಿ ಜೊತೆ ಅಭಿಷೇಕ್ ಅಂಬರೀಶ್ ದೋಸ್ತಿ ಕಥಮ್? ಮದುವೆನಲ್ಲೆ ಸಿಕ್ತು ಸುಳಿವು.

Abhishek Ambareesh ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh)ಅವರ ಪುತ್ರ ಹಾಗೂ ಕನ್ನಡ ಚಿತ್ರರಂಗದ ಜೂನಿಯರ್ ರೆಬೆಲ್ ಸ್ಟಾರ್ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಇಂದು ತಮ್ಮ ಬಹುಕಾಲದ ಗೆಳತಿ ಅವಿವ ಅವರ ಜೊತೆಗೆ ಅವಿನಾಭಾವ ಸಂಬಂಧದ ಗಂಟನ್ನು ಕಟ್ಟಿದ್ದಾರೆ.

ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆಗೆ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟ ಹಾಗೂ ನಟಿಯರು ಮತ್ತು ಕಲಾವಿದರು ಆಗಮಿಸಿದ್ದರು ಆದರೆ ಅವರ ಅತ್ಯಂತ ಆಪ್ತ ಸ್ನೇಹಿತರಲ್ಲಿ ಒಬ್ಬರಾಗಿದ್ದಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಮಾತ್ರ ಬಂದಿರಲಿಲ್ಲ. ಪ್ರತಿಯೊಬ್ಬರೂ ಕೂಡ ನಿಖಿಲ್ ಬರುತ್ತಾರೆ ಎಂಬುದಾಗಿ ಕಾದಿದ್ದರು.

ಇಬ್ಬರೂ ಕೂಡ ಆರಂಭಿಕ ದಿನಗಳಿಂದಲೂ ಕೂಡ ಅತ್ಯಂತ ಆಪ್ತ ಸ್ನೇಹಿತರಾಗಿ ಕಾಣಿಸಿಕೊಂಡಿದ್ದು ಕಳೆದ ಲೋಕಸಭೆ ಎಲೆಕ್ಷನ್ ಸಂದರ್ಭದಲ್ಲಿ ಇಬ್ಬರ ನಡುವೆ ವೈ ಮನಸು ಉಂಟಾಗಿತ್ತು ಎಂಬುದಾಗಿ ತಿಳಿದು ಬಂದಿದ್ದು, ಮದುವೆಗಾದರೂ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಪ್ರತಿಯೊಬ್ಬರು ಕೂಡ ಭಾವಿಸಿದ್ದರು. ಆದರೆ ಅದು ಕೂಡ ಹುಸಿಯಾಗಿದೆ.

ಹೌದು ಮಿತ್ರರೇ ನಿಖಿಲ್ ಕುಮಾರಸ್ವಾಮಿಯವರು ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆಗೆ ಭಾಗವಹಿಸಿಲ್ಲ. ಈ ಮೂಲಕ ಇಬ್ಬರೂ ಕೂಡ ಪರಸ್ಪರ ವೈ ಮನಸನ್ನು ಹೊಂದಿದ್ದಾರೆ ಎಂಬುದನ್ನು ಬಹಿರಂಗವಾಗಿಯೇ ಸಾಬೀತುಪಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಒಟ್ಟಾರೆ ಈಗ ಕನ್ನಡದ ಮತ್ತೊಂದು ಸ್ನೇಹಿತರ ಜೋಡಿ ತಮ್ಮ ಸ್ನೇಹವನ್ನು ಕಳಿಚಿಕೊಂಡಿದೆ ಎಂದು ಹೇಳಬಹುದಾಗಿದೆ.

Leave a Comment