Abhishek Ambareesh ನಟ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಕೊನೆಗೂ ಕೂಡ ತಾವು ಪ್ರೀತಿಸಿದ ಅವಿವ(Aviva) ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಇಬ್ಬರ ಮದುವೆ ಕೂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದಿದೆ. ಸಹಸ್ರಾರು ಸೆಲೆಬ್ರಿಟಿಗಳು ಹಾಗೂ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಈ ಮದುವೆಯಲ್ಲಿ ಭಾಗವಹಿಸಿದ್ದರು.
ಕಿಚ್ಚ ಸುದೀಪ್(Kiccha Sudeep) ರವರಿಂದ ಹಿಡಿದು ರಾಕಿಂಗ್ ಸ್ಟಾರ್ ಯಶ್(Yash) ರವರು. ರಾಜಕಾರಣಿಗಳಿಂದ ಹಿಡಿದು ಸೂಪರ್ ಸ್ಟಾರ್ ರಜನಿಕಾಂತ್ ರವರವರೆಗೂ ಕೂಡ ಎಲ್ಲರೂ ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಡೀ ಕನ್ನಡ ಚಿತ್ರರಂಗವೇ ಅಂಬರೀಶ್ ಮಗನ ಮದುವೆಯನ್ನು ಆಚರಿಸಲು ಅರಮನೆ ಮೈದಾನದಲ್ಲಿ ನೆರೆದಿತ್ತು ಎಂದರು ಕೂಡ ತಪ್ಪಾಗಲಾರದು.
ಎಲ್ಲಕ್ಕಿಂತ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಅಂಬರೀಶ್(Ambareesh) ಅವರ ಪ್ರತೀಕವಾಗಿ ಕಾಣಿಸಿಕೊಂಡಿದ್ದ ಅಭಿಷೇಕ ಅಂಬರೀಶ್ ಅವರು ವೈವಾಹಿಕ ಜೀವನಕ್ಕೆ 29ನೇ ವಯಸ್ಸಿನಲ್ಲಿ ಕಾಲಿಟ್ಟಿರುವುದು ಕೂಡ ಸಾಕಷ್ಟು ಜನರಿಗೆ ಆಶ್ಚರ್ಯವನ್ನು ತಂದೊದಗಿಸಿದೆ. ಇನ್ನು ಈ ಸಂದರ್ಭದಲ್ಲಿ ಮದುವೆಯಲ್ಲಿ ಅವರು ಹಾಕಿಕೊಂಡಿದ್ದ ಡ್ರೆಸ್ ಕೂಡ ಸಾಕಷ್ಟು ಮೆರುಗನ್ನು ನೀಡಿತು.
ಇನ್ನು ಅಭಿಷೇಕ್ ಅಂಬರೀಶ್ ಅವರ ಮದುವೆ ಡ್ರೆಸ್ ಅನ್ನು ಡಿಸೈನ್ ಮಾಡಿರೋದು ಬೇರೆ ಯಾರೋ ಅಲ್ಲ ಬದಲಾಗಿ ಅವರ ಪತ್ನಿ ಹಾಗೂ ಫ್ಯಾಶನ್ ಡಿಸೈನರ್ ಆಗಿರುವಂತಹ ಅವಿವಾ(Aviva Bidapa) ರವರೇ. ಸದ್ಯಕ್ಕೆ ಇವರಿಬ್ಬರೂ ಮದುವೆಯಾಗಿದ್ದು ಇವರ ಮುಂದಿನ ದಾಂಪತ್ಯ ಜೀವನ ಚೆನ್ನಾಗಿರಲಿ ಎಂಬುದಾಗಿ ಹಾರೈಸೋಣ.