Abhishek Ambareesh ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾದ(Amar Film) ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತಹ ಯುವ ಪ್ರತಿಭೆ ಆಗಿದ್ದು, ಈಗಾಗಲೇ ಒಂದೇ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು ಕೂಡ ಅಂಬರೀಶ್ ಅವರ ಮಗ ಎನ್ನುವಂತಹ ಅವರ ಜನಪ್ರಿಯತೆ ಎಲ್ಲಾ ಕಡೆ ಹರಡಿದೆ.
ಇನ್ನು ಅಭಿಷೇಕ್ ಅಂಬರೀಷ್(Abhishek Ambareesh ) ಅವರ ಮದುವೆಗೆ ಸಿನಿಮಾರಂಗದ ತಾರೆಯರಿಂದ ಹಿಡಿದು ರಾಜಕೀಯ ಕ್ಷೇತ್ರದ ಜನನಾಯಕರವರೆಗೂ ಎಲ್ಲರೂ ಬಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಮದುವೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಇನ್ನು ಈಗಾಗಲೇ ಮದುವೆ ಹಾಗೂ ರಿಸೆಪ್ಶನ್ ಎರಡು ಕೂಡ ಮುಗಿದಿದ್ದು ಹನಿಮೂನ್ಗಾಗಿ ತಯಾರಿ ಮಾಡಲಾಗುತ್ತಿದೆ.
ಸದ್ಯಕ್ಕೆ ಅಭಿಷೇಕ್ ಅಂಬರೀಶ್(Abhishek Ambareesh) ಅವರಿಗೆ ಕೆಲವೊಂದು ಸಿನಿಮಾ ಕೆಲಸಗಳು ಇರುವುದರಿಂದಾಗಿ ಸ್ವಲ್ಪ ಸಮಯ ಅದರಲ್ಲಿ ಸಮಯವನ್ನು ತೆಗೆದುಕೊಂಡು ನಂತರ ಇಬ್ಬರೂ ಕೂಡ ಹನಿಮೂನ್ಗಾಗಿ ವಿದೇಶಕ್ಕೆ ಹಾರಲಿದ್ದಾರೆ ಎಂಬುದಾಗಿ ಕೆಲವು ಮೂಲಗಳು ಸುದ್ದಿಯಲ್ಲಿ ತಿಳಿಸಿವೆ.
ಮೂಲಗಳಿಂದ ತಿಳಿದು ಬಂದಿರುವ ಸುದ್ದಿಯ ಪ್ರಕಾರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ(Aviva Bidapa) ಇಬ್ಬರು ಕೂಡ ಮಾಲ್ಡೀವ್ಸ್ ಗೆ ಹನಿಮೂನ್ ಆಚರಿಸಲು ಹೋಗಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಜೋಡಿ ಬಗ್ಗೆ ನಿಮಗಿರುವಂತಹ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.