Abhishek Ambareesh: ಎಲ್ಲಾ ಓಕೆ ಆದರೆ ಬೀಗರ ಊಟದಲ್ಲಿ ಅದೊಂದು ವಿಚಾರದ ಬಗ್ಗೆ ಅಭಿಷೇಕ್ ಅಂಬರೀಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Abhishek Ambareesh ಅಭಿಷೇಕ್ ಅಂಬರೀಶ್ ಅವರು ಇದೇ ಜೂನ್ 5 ರಂದು ಅವಿವ(Aviva Bidapa) ಅವರನ್ನು ಮದುವೆಯಾಗುವ ಮೂಲಕ ಇಡೀ ದೇಶದ ಮೆಚ್ಚುವಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆಯಾಗಿದ್ದಾರೆ. ಪ್ರತಿಯೊಬ್ಬರೂ ಕೂಡ ಈ ಮದುವೆಗೆ ಆಗಮಿಸಿ, ದೊಡ್ಡ ಸಂಖ್ಯೆಯಲ್ಲಿ ವಧು ವರರನ್ನು ಆಶೀರ್ವದಿಸಿದ್ದಾರೆ.

ಅಭಿಷೇಕ್ ಅಂಬರೀಶ್(Abhishek Ambareesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಂಬರೀಶ್ ಅವರ ಮಗ ಆಗಿರುವ ಕಾರಣದಿಂದಾಗಿ ಕನ್ನಡ ಚಿತ್ರರಂಗದಲ್ಲಿ ಅವರ ಹೆಸರಿಗೆ ಇನ್ನಷ್ಟು ತೂಕ ಇದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಲೇ ಬೇಕಾಗಿದೆ.

ಇನ್ನು ಅಂಬರೀಶ್ ಅವರ ಕಾರಣದಿಂದಾಗಿ ಅವರ ತವರು ಜಿಲ್ಲೆ ಆಗಿರುವಂತಹ ಮಂಡ್ಯದಲ್ಲಿ ಮೊನ್ನೆ ಅಷ್ಟೇ 50,000ಕ್ಕೂ ಅಧಿಕ ಜನರಿಗೆ ಸರಿಹೊಂದುವಂತೆ, ನಾನ್ವೆಜ್ ಊಟದ ಬೀಗರ ಊಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೋಟ್ಯಾಂತರ ರೂಪ ಖರ್ಚು ಮಾಡಿರುವುದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಜನರು ಊಟವನ್ನು ವೇಸ್ಟ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಅಭಿಷೇಕ್ ಅಂಬರೀಶ್ ಅವರು ಮೊನ್ನೆ ನಡೆದ ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಬೇಸರಗೊಂಡಿರುವುದು ತಿಳಿದುಬಂದಿದೆ. ದೇಶದಲ್ಲಿ ತಿನ್ನಲು ಊಟವಿಲ್ಲದೆ ಹಸಿದುಕೊಂಡಿರುವಂತಹ ಅದೆಷ್ಟು ಜನರ ನಡುವೆ ಈ ರೀತಿ ಊಟವನ್ನು ವೇಸ್ಟ್ ಮಾಡಿರುವುದು ನಿಜಕ್ಕೂ ಕೂಡ ನನಗೆ ಬೇಸರ ತಂದಿದೆ ಎಂಬುದಾಗಿ ಹೇಳಿದ್ದಾರೆ.

Leave a Comment