Abhishek Ambareesh ರೆಬೆಲ್ ಸ್ಟಾರ್ ಅಂಬರೀಶ್ ಅವರ ಏಕೈಕ ಪತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಲವು ದಿನಗಳ ಹಿಂದಷ್ಟೇ ಅವಿವಾ(Aviva Bidapa) ಅವರನ್ನು ಮದುವೆಯಾಗುವ ಮೂಲಕ ಸಪ್ತಪದಿಯನ್ನು ತುಳಿದು ಅಧಿಕೃತವಾಗಿ ಇಬ್ಬರು ಕೂಡ ಗಂಡ ಹೆಂಡತಿಯಾಗಿದ್ದಾರೆ.
ವಿದೇಶದಲ್ಲಿ ಇರಬೇಕಾಗಿದ್ದ ಸಂದರ್ಭದಲ್ಲಿ ಇಬ್ಬರು ಕೂಡ ಕಾಮನ್ ಫ್ರೆಂಡ್ಸ್ ಮೂಲಕ ಪರಿಚಿತರಾಗಿ ನಂತರ ಅಲ್ಲಿಯೇ ಡೇಟಿಂಗ್ ಪ್ರಾರಂಭವಾಗಿ ಸಿನಿಮಾ ಲೋಹಕ್ಕೆ ಕಾಲಿಡುವ ಮುನ್ನವೇ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರೂ ಎಂಬುದಾಗಿ ಆಪ್ತ ಮೂಲಗಳಿಂದ ತಿಳಿದುಬಂದಿದೆ. ನಂತರ ಇಬ್ಬರೂ ಬೆಂಗಳೂರಿನ ಅರಮನೆ ಮೈದಾನದಲ್ಲಿ, ಮನೆಯವರ ಒಪ್ಪಿಗೆ ಮೇರೆಗೆ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ಇನ್ನು ಈಗಾಗಲೇ ಮದುವೆ ಹಾಗೂ ರಿಸೆಪ್ಶನ್ ಕಾರ್ಯಕ್ರಮ ಎರಡು ಕೂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಆದರೆ ಈಗ ಅಂಬರೀಶ್(Ambareesh) ಅವರ ತವರು ಜಿಲ್ಲೆ ಆಗಿರುವಂತಹ ಮಂಡ್ಯದ ಜನತೆಗೆ ಮಂಡ್ಯದಲ್ಲಿಯೇ ಬೀಗರ ಊಟ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿದೆ.
ಈ ಬೀಗರ ಊಟ ಕಾರ್ಯಕ್ರಮಕ್ಕೆ ಅಂಬರೀಶ್ ಅವರ ನೆಚ್ಚಿನ ಖಾದ್ಯಗಳಾದಂತಹ ಚಿಕನ್ ಹಾಗೂ ಮಟನ್ ನ ತರಹೇವಾರಿ ಖಾದ್ಯಗಳನ್ನು ಸ್ಥಳೀಯ ಬಾಣಸಿಗರಿಂದಲೇ ಸಿದ್ಧಪಡಿಸಿ 50,000ಕ್ಕೂ ಅಧಿಕ ಮಂಡ್ಯದ ಜನರಿಗೆ ಊಟಕ್ಕೆ ಹಾಕಿಸಲಾಗಿದೆ ಎಂಬುದಾಗಿ ಮೂಲಗಳಿಂದ ಅಧಿಕೃತವಾಗಿ ತಿಳಿದು ಬಂದಿದೆ. ಇದಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಕೂಡ ಆಗಿದೆ ಎಂಬುದಾಗಿ ತಿಳಿದು ಬಂದಿದೆ.