42 ವರ್ಷ ವಯಸ್ಸಾದ ಮೇಲೆ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ ಡಾರ್ಲಿಂಗ್ ಪ್ರಭಾಸ್: ಹುಡುಗಿ ಯಾರು ಗೊತ್ತಾ

ಬಾಹುಬಲಿ ಸೀಕ್ವೆಲ್ ಸಕ್ಸೆಸ್ ನಂತರ ನಟ ಪ್ರಭಾಸ್ ದೇಶಾದ್ಯಂತ ಗುರುತಿಸಿಕೊಂಡಿದ್ದಾರೆ. ಭರವಸೆಯ ನಟ ಎನಿಸಿಕೊಂಡಿದ್ದಾರೆ. ಬಾಹುಬಲಿಗಾಗಿ ಐದಾರು ವರ್ಷ ಪ್ರಭಾಸ್ ಅವರು ನೀಡಿರುವ ಡೆಡಿಕೇಶನ್ ಮೆಚ್ಚಲೇಬೇಕು. ಈ ಸಮಯದಲ್ಲಿ ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳದೆ ಬಾಹುಬಲಿಗಾಗಿಯೇ ಶ್ರಮಪಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಬಾಹುಬಲಿಯ ನಂತರ ಪ್ರಭಾಸ್ ಅವರಿಗೆ ಬೇಡಿಕೆ ಹೆಚ್ಚಿತು. ಸಾಮಾನ್ಯವಾಗಿ ಅವರ ಎಲ್ಲಾ ಸಿನಿಮಾಗಳು ಬಿಗ್ ಬಜೆಟ್ ಸಿನಿಮಾಗಳು. ಆದರೆ ಇತ್ತೀಚಿಗೆ ನಟ ಪ್ರಭಾಸ್ ಹಾಗೂ ನಟಿ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ ಸಿನಿಮಾ ಮಾತ್ರ ಸಕ್ಸೆಸ್ ನಿಂದ ಬಹಳ ದೂರ ಉಳಿದಿದೆ.

ಪ್ರಭಾಸ್ ಅವರು ಹೆಚ್ಚುಕಡಿಮೆ ಯಾವುದೇ ಸಿನಿಮಾದ ಪ್ರಮೋಷನ್ ಅಲ್ಲಿ ತೊಡಗಿಕೊಂಡಿದ್ದರು ಅಥವಾ ಯಾವುದೇ ಸಂದರ್ಶನದಲ್ಲಿ ಕುಳಿತಿದ್ದರು ಅವರಿಗೆ ಒಂದು ಪ್ರಶ್ನೆ ಖಾಯಂ. ಅದೇ “ಪ್ರಭಾಸ್ ಅವರೇ ನಿಮ್ಮ ಮದುವೆ ಯಾವಾಗ” ಅಂತ. ಹೌದು ಪ್ರಭಾಸ್ ಅವರು ಯಾರನ್ನ ಮದುವೆ ಆಗುತ್ತಾರೆ ಅನ್ನೋದು ಬಹಳ ಕ್ಯೂರಿಯಾಸಿಟಿ ಅನ್ನೋ ಹುಟ್ಟಿಸಿರುವ ವಿಷಯ. ಪ್ರಭಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಮದುವೆಯಾಗುವುದು ಯಾವ ಹುಡುಗಿಯನ್ನು ಅಂತ ಕಾತುರದಿಂದ ಕಾಯುತ್ತಿದ್ದಾರೆ. ಕೊನೆಗೂ ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನಟ ಪ್ರಭಾಸ್ ಅವರು ತೆಲುಗು ಚಿತ್ರರಂಗದಲ್ಲಿ ಬಹುದೊಡ್ಡ ಸ್ಟಾರ್ ನಟನಾಗಿ ಗುರುತಿಸಿಕೊಂಡವರು. ಹಾಗಾಗಿ ಇವರು ಮದುವೆಯಾಗುವ ಹುಡುಗಿ ಯಾವ ಭಾಷೆಯ ನಟಿ ಯಾಗಿರಬಹುದು, ಯಾವ ಸ್ಟಾರ್ ನಟಿ ಆಗಿರಬಹುದು ಇನ್ನು ಅನುಮಾನ ಎಲ್ಲರಲ್ಲೂ ಇತ್ತು. ಈ ಹಿಂದೆ ತೆಲುಗು ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಇಬ್ಬರು ಹಸೆಮಣೆ ಏರಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಆದರೆ ನಿಜವಾಗಿಯೂ ಇದು ಕೇವಲ ಗಾಸಿಪ್ ಅಷ್ಟೇ ಇವರಿಬ್ಬರ ನಡುವೆ ಅಂತಹ ಯಾವುದೇ ಸಂಬಂಧವಿಲ್ಲ.

ಆದರೆ ಇದೀಗ ಪ್ರಭಾಸ್ ಮನೆಯವರೇ ಸದ್ಯದಲ್ಲೇ ಪ್ರಭಾಸ್ ಮದುವೆಯಾಗುತ್ತಿರುವ ವಿಷಯವನ್ನು ಹೇಳಿಕೊಂಡಿದ್ದಾರೆ. ಪ್ರಭಾಸ್ ಕುಟುಂಬದ ಸದಸ್ಯರು ಹೇಳಿರುವ ಪ್ರಕಾರ ಪ್ರಭಾಸ್ ಮದುವೆಯಾಗಲಿರುವ ಹುಡುಗಿ ಯಾವುದೇ ಸಿನಿಮಾ ರಂಗಕ್ಕೆ ಸಂಬಂಧಿಸಿದವಳಲ್ಲ. ಪ್ರಭಾಸ್ ಗೆ ಪೋಷಕರು ಈಗಾಗಲೇ ಹುಡುಗಿಯನ್ನು ಗೊತ್ತು ಮಾಡಿದ್ದಾರಂತೆ ಎಂಬ ಮಾತು ಟಾಲಿವುಡ್ ನಲ್ಲಿ ಸುದ್ದಿಯಾಗಿದೆ. ಜೊತೆಗೆ ತನ್ನ ಪಾಲಕರು ನೋಡಿರುವ ಹುಡುಗಿಯನ್ನು ವರಿಸುತ್ತಾನೆ ಪ್ರಭಾಸ್ ಎಂಬುದು ಕೂಡ ವಿಶೇಷ.

ನಟ ಪ್ರಭಾಸ್ ಹೆಸರಿನ ಜೊತೆ ಅನುಷ್ಕಾ ಶೆಟ್ಟಿ ಸೇರಿದಂತೆ ಇನ್ನೂ ಅನೇಕ ಹೆಸರು ತಳುಕು ಹಾಕಿಕೊಂಡಿರುವ ಹುಡುಗಿ ಯಾರು ಅನ್ನೋದು ಹರಿದಾಡುತ್ತಿರುವ ಸುದ್ದಿ. ಹಾಗಾಗಿ ಇನ್ನೂ ಒಂದು ವರ್ಷದೊಳಗೆ ಪ್ರಭಾಸ್ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲದೆ ಪ್ರಭಾಸ್ ಮದುವೆ ವಿಚಾರವನ್ನು ಪ್ರಭಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಇತರರಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಬಾಹುಬಲಿ ಪ್ರಭಾಸ್ ಅವರನ್ನು ವರಿಸುವ ದೇವಸೇನಾ ಯಾರು ಅಂತ ಕಾದು ನೋಡಬೇಕು.

Leave a Comment