Lakshmi Puja: ಲಕ್ಷ್ಮೀದೇವಿಯ ಪೂಜೆ ಮಾಡುವಾಗ ಈ ಹೂವುಗಳನ್ನು ಬಳಸಿ ನಿಮಗೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವಾಗುತ್ತದೆ.

Lakshmi Puja ನಮ್ಮ ಹಿಂದೂ ಸನಾತನ ಸಂಸ್ಕೃತಿಯ ಪುರಾಣ ಗ್ರಂಥಗಳು ಹಾಗೂ ಆಚರಣೆಗಳ ಪ್ರಕಾರ ವಿಷ್ಣುದೇವರ ಪತ್ನಿ ಆಗಿರುವಂತಹ ಲಕ್ಷ್ಮಿ ದೇವಿಯನ್ನು ಸಂಪತ್ತು ಹಾಗೂ ಸಮೃದ್ಧಿಯ ಪ್ರತೀಕ ಎಂಬುದಾಗಿ ನಾವು ಭಾವಿಸುತ್ತೇವೆ ಹಾಗೂ ಪೂಜಿಸುತ್ತೇವೆ. ಸಂಪತ್ತಿಗೆ ಸಂಬಂಧಪಟ್ಟಂತಹ ಪ್ರತಿಯೊಂದು ಪೂಜೆಗಳಲ್ಲಿ ಕೂಡ ಲಕ್ಷ್ಮಿ ದೇವರಿಗೆ ಸಿಂಹ ಪಾಲನ್ನು ನೀಡಲಾಗುತ್ತದೆ.

ಇನ್ನು ಈ ಸಂದರ್ಭದಲ್ಲಿ ಲಕ್ಷ್ಮೀದೇವಿಯ ಪೂಜೆ ಮಾಡುವುದಕ್ಕಿಂತ ಮುಂಚೆ ಕೆಲವೊಂದು ವಿಚಾರಗಳನ್ನು ನೀವು ಅರಿತುಕೊಳ್ಳಬೇಕಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವೊಂದು ಹೂವುಗಳಿಂದ ಲಕ್ಷ್ಮಿ ದೇವಿಯ ಪೂಜೆ ಮಾಡಿದರೆ ಖಂಡಿತವಾಗಿ ಅವಳು ಪ್ರಸನ್ನಳಾಗುತ್ತಾಳೆ. ಈ ವಿಚಾರದ ಕುರಿತಂತೆ ಪುರಾಣ ಗ್ರಂಥಗಳಲ್ಲಿ ಕೂಡ ಉಲ್ಲೇಖವಿದೆ. ಹಾಗಿದ್ದರೆ ಲಕ್ಷ್ಮೀದೇವಿ ಇಷ್ಟಪಡುವಂತಹ ಹೂವುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಪುರಾಣ ಗ್ರಂಥಗಳ ಪ್ರಕಾರ ಟೆಸು ಹೂವನ್ನು ಲಕ್ಷ್ಮೀದೇವಿಗೆ ಶುಕ್ರವಾರದ ದಿನದಂದು ತೆಂಗಿನಕಾಯಿಯ ಜೊತೆಗೆ ಅರ್ಪಿಸಿ ಪೂಜೆ ಮಾಡಿದರೆ, ನಿಜಕ್ಕೂ ಒಳ್ಳೆಯದಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಚಂಡು ಹೂವನ್ನು ಕೂಡ ಮನೆಯ ಬಳಿ ನೆಟ್ಟು ಬೆಳೆಸುವುದು ಶುಭಕರವೆಂದು ಪರಿಗಣಿಸಲಾಗುತ್ತಿದ್ದು ಅದನ್ನು ಕೂಡ ಶುಕ್ರವಾರದ ದಿನದಂದು ಅದರಲ್ಲಿ ವಿಶೇಷವಾಗಿ ಶುಭಕಾರ್ಯದ ಪೂಜೆಯಲ್ಲಿ ಲಕ್ಷ್ಮಿ ದೇವಿಗೆ ಅರ್ಪಿಸಬೇಕು ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ.

ದಾಸವಾಳ ಹೂವನ್ನು ಪ್ರತಿದಿನ ಮನೆಯಲ್ಲಿ ಬೆಳೆದಿದ್ದು ಪೂಜೆ ಮಾಡುವಾಗ ಲಕ್ಷ್ಮೀದೇವಿಗೆ ಅರ್ಪಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಕೆಂಪು ಗುಲಾಬಿ ಕೂಡ ಸಮೃದ್ಧಿಯ ಪ್ರತೀಕ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಅದರಿಂದ ಲಕ್ಷ್ಮೀದೇವಿಯ ಪೂಜೆ ಮಾಡುವುದು ನಿಜಕ್ಕೂ ಕೂಡ ಉತ್ತಮವಾಗಿದೆ.

Leave a Comment