Garuda Purana ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಅತ್ಯಂತ ಪವಿತ್ರವಾದ ಗ್ರಂಥಗಳಿವೆ. ಅವುಗಳಲ್ಲಿ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂವಹನವನ್ನು ಗ್ರಂಥ ರೂಪದಲ್ಲಿ ಗರುಡ ಪುರಾಣ(Garuda Purana) ಎನ್ನುವ ಗ್ರಂಥದ ಮೂಲಕ ದಾಖಲಿಸಲಾಗಿದೆ.
ಗರುಡ ಪುರಾಣದಲ್ಲಿ ದುರಾದೃಷ್ಟಗಳನ್ನು ಅದೃಷ್ಟದ ರೂಪದಲ್ಲಿ ಪರಿವರ್ತನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಕೂಡ ಸಾಕಷ್ಟು ವಿವರಣೆಗಳನ್ನು ನೀಡಿದ್ದಾರೆ ಅದರ ಕುರಿತಂತೆ ಸಂಪೂರ್ಣವಾಗಿ ತಿಳಿಯುವ ಮೂಲಕ ನಿಮ್ಮ ಜೀವನದಲ್ಲಿ ಕೂಡ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಬಗೆ ಹೇಗೆ ಎಂಬುದನ್ನು ಸಂಪೂರ್ಣ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ನಿಮ್ಮ ಮನೆ ಹಾಗೂ ನಿಮ್ಮನ್ನು ಶುಚಿತ್ವದಿಂದ ಕಾಪಾಡಿಕೊಳ್ಳುವುದು ಇದಕ್ಕೆ ದಾರಿಯಾಗಿದೆ. ಪ್ರತಿದಿನ ನೀವು ಇರುವಂತಹ ಸ್ಥಳವನ್ನು ಶುಚಿಯಾಗಿ ಇಟ್ಟುಕೊಂಡರೆ ನೀವು ಅದೃಷ್ಟವನ್ನು ಸಂಪಾದಿಸಬಹುದಾಗಿದೆ. ಯಾಕೆಂದರೆ ಶುಚಿತ್ವ ಇದ್ದಲ್ಲಿ ಮಾತ್ರ ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತವಾಗಿರುವಂತಹ ಲಕ್ಷ್ಮಿದೇವಿ ನೆಲೆಸಿರುತ್ತಾಳೆ. ಹೀಗಾಗಿ ನೀವು ಹಾಗೂ ನಿಮ್ಮ ಪರಿಸರದ ಸುತ್ತಮುತ್ತಲನ್ನು ಶುಚಿತ್ವದಿಂದ ಇಟ್ಟುಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ.
ಆದಷ್ಟು ನೀವು ನಿಮ್ಮ ಜೀವನದಲ್ಲಿ ದಾನ ಧರ್ಮಗಳನ್ನು ಹೆಚ್ಚಾಗಿ ಮಾಡಬೇಕು ಇದರಿಂದ ನಿಮ್ಮ ಮೋಕ್ಷದ ಸಾಧ್ಯತೆ ಹೆಚ್ಚಾಗುತ್ತದೆ. ಜೀವಿತಾವಧಿಯಲ್ಲಿ ಇದರಿಂದ ಪುಣ್ಯ ಸಂಪಾದನೆ ಮಾಡಬಹುದು ಹಾಗೂ ಆ ಪುಣ್ಯ ಸಂಪಾದನೆಂದರೆ ನೀವು ಸಾಕಷ್ಟು ಕಷ್ಟದ ಪರಿಸ್ಥಿತಿ ಗಳನ್ನು ಕೂಡ ಗೆಲ್ಲುವಂತಹ ಸಾಮರ್ಥ್ಯ ನಿಮಗೆ ದೊರಕುತ್ತದೆ. ಈ ನಿಯಮಗಳನ್ನು ಪಾಲಿಸುವ ಮೂಲಕ ನೀವು ನಿಮ್ಮ ಜೀವನದಲ್ಲಿ ಕಂಡುಬರುವಂತಹ ದುರದೃಷ್ಟವನ್ನು ಕೂಡ ಅದೃಷ್ಟವನ್ನಾಗಿ ಪರಿವರ್ತಿಸಬಹುದು.