Ganesha Puja: ವಿಘ್ನ ವಿನಾಶಕ ಗಣೇಶನ ಪೂಜೆಯಲ್ಲಿ ಅಪ್ಪಿತಪ್ಪಿಯು ಈ ವಸ್ತುಗಳನ್ನು ಉಪಯೋಗಿಸಬೇಡಿ.

Ganesha Puja ವಿಜ್ಞಾನ ವಿನಾಶಕ ಗಣೇಶ(Lord Ganesh) ಪ್ರತಿಯೊಂದು ಪೂಜಾ ಕಾರ್ಯಕ್ರಮದಲ್ಲಿ ಪ್ರಥಮವಾಗಿ ಪೂಜಿತ ನಾಗುವಂತಹ ದೈವ. ಹೀಗಾಗಿ ಪುರಾಣ ಗ್ರಂಥಗಳಲ್ಲಿ ಕೂಡ ಗಣೇಶನಿಗೆ ಮೊದಲ ಪೂಜೆ ಏನು ನೆರವೇರಿಸಬೇಕು ಎನ್ನುವುದು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿದೆ ಎಂಬುದಾಗಿ ಸಾಕಷ್ಟು ಬಾರಿ ಉಲ್ಲೇಖಿತವಾಗಿದೆ ಆದರೆ ಪೂಜೆಯ ಸಂದರ್ಭದಲ್ಲಿ ಕೆಲವೊಂದು ರೀತಿ ನಿಯಮಗಳನ್ನು ಕೂಡ ಪಾಲಿಸಬೇಕಾಗಿರುತ್ತದೆ.

ಹೌದು ಪೂಜೆಯನ್ನು ಕೇವಲ ದೀಪ ಹಚ್ಚಿ ಕೈಮುಗಿದು ಪೂಜೆ ಮಾಡುವುದು ಅಷ್ಟೊಂದು ಸಮಂಜಸಕರವಾದ ಪ್ರಾರ್ಥನೆ ಆಗಿರುವುದಿಲ್ಲ ಅದಕ್ಕೆ ಆದ ರೀತಿಯಲ್ಲಿ ಮಹತ್ವವನ್ನು ನೀಡಿ ನಿಯಮಗಳನ್ನು ಪಾಲಿಸಿ ಪೂಜೆ ಮಾಡಿದಲ್ಲಿ ಮಾತ್ರ ಆ ಪೂಜೆಗೆ ಒಂದು ಅರ್ಥ ಸಿಗುತ್ತದೆ. ಕೆಲವೊಂದು ವಸ್ತುಗಳನ್ನು ಗಣಪತಿ(Ganapathi) ಪೂಜೆಯ ಸಂದರ್ಭದಲ್ಲಿ ಉಪಯೋಗಿಸಬಾರದು ಎನ್ನುವಂತಹ ನಿಯಮ ಕೂಡ ಇದೆ ಅವು ಯಾವುವು ಎಂಬುದನ್ನು ತಿಳಿಯೋಣ.

ಹೌದು ಮಿತ್ರರೇ ಪುರಾಣ ಶಾಸ್ತ್ರಗಳ ಪ್ರಕಾರ ತುಳಸಿಗೆ ಗಣೇಶ ಶಾಪವನ್ನು ನೀಡಿದ್ದಾನೆ ಹೀಗಾಗಿ ಗಣಪತಿ ಪೂಜೆಯ ಸಂದರ್ಭದಲ್ಲಿ ತುಳಸಿ ದಳವನ್ನು ಉಪಯೋಗಿಸುವುದು ನಿಶಿದ್ಧ ಎಂಬುದಾಗಿ ಹೇಳಲಾಗುತ್ತದೆ. ಇನ್ನು ಚಂದ್ರನನ್ನು ಕೂಡ ನೋಡಿದರೆ ಗಣೇಶನಿಗೆ ಆಗುವುದಿಲ್ಲ ಹೀಗಾಗಿ ಚಂದ್ರನಿಗೆ ಪ್ರಿಯವಾದಂಥ ಬಿಳಿ ಶ್ರೀಗಂಧ ಬಿಳಿ ಬಟ್ಟೆ ಸೇರಿದಂತೆ ಬಿಳಿಯ ವಸ್ತುಗಳನ್ನು ಹೆಚ್ಚಾಗಿ ಗಣೇಶನಿಗೆ ಅರ್ಪಿಸುವುದು ಸೂಕ್ತವಲ್ಲ.

ಯಾವತ್ತು ಕೂಡ ಗಣೇಶನಿಗೆ ಅಕ್ಷತೆಯನ್ನು ಹಾಕುವಾಗ ಮುರಿದ ತುಂಡಾದ ಅಕ್ಷತೆಯನ್ನು ಹಾಕುವುದು ತಪ್ಪಾಗುತ್ತದೆ ಯಾಕೆಂದರೆ ಅಕ್ಷತೆ ಪವಿತ್ರವಾದ ವಸ್ತುವಾಗಿದ್ದು ಅದನ್ನು ಅರ್ಧಂಬರ್ದ ಹಾಕಿದರೆ ಗಣೇಶನಿಗೆ ಪೂಜೆಯಲ್ಲಿ ಅಪಚಾರ ಮಾಡಿದಂತಾಗುತ್ತದೆ. ಇದರ ಜೊತೆಗೆ ಬಾಡಿದ ಹೂವಿನ ಮಾಲೆಗಳನ್ನು ಕೂಡ ಗಣೇಶನಿಗೆ ಅರ್ಪಿಸುವುದು ಪೂಜೆಯ ಪವಿತ್ರತೆಯನ್ನು ಕೆಡಿಸಿದಂತಾಗುತ್ತದೆ ಹೀಗಾಗಿ ಈ ಮೇಲಿನ ವಸ್ತುಗಳನ್ನು ಯಾವತ್ತೂ ಕೂಡ ಗಣೇಶನಿಗೆ ಪೂಜೆ ಮಾಡುವಾಗ ಅರ್ಪಿಸಬೇಡಿ.

Leave a Comment