Chanakya Neethi ಚಾಣಕ್ಯರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಯಾಕೆಂದ್ರೆ ಅವರು ಅಶೋಕ ಮೌರ್ಯನಂತಹ ಏನು ಇಲ್ಲದ ವ್ಯಕ್ತಿಯನ್ನು ಮಗಧ ಸಾಮ್ರಾಜ್ಯವನ್ನು ಗೆದ್ದು ಚಕ್ರವರ್ತಿ ಆಗುವಂತೆ ಮಾಡಿದವರು. ಇನ್ನು ಅವರು ತಮ್ಮ ಗ್ರಂಥದ ಮೂಲಕ ಪ್ರತಿಯೊಂದು ಕ್ಷೇತ್ರದ ಯಶಸ್ಸಿನ ಹಾದಿಯನ್ನು ಅರುಹಿದ್ದಾರೆ.
ಇನ್ನು ಇದೇ ಪುಸ್ತಕದಲ್ಲಿ ಕೆಲವೊಂದು ವಿಚಾರಗಳನ್ನು ಗಂಡನಾದವನು ಪತ್ನಿಯ ಜೊತೆಗೆ ಮಾಡಬಾರದು ಅಥವಾ ಪತ್ನಿಯ ಬಳಿ ಹೇಳಬಾರದು ಎನ್ನುವ ಬಗ್ಗೆ ಕೂಡ ತಿಳಿಸಿದ್ದು ಯಶಸ್ವಿ ದಾಂಪತ್ಯ ಜೀವನಕ್ಕೆ ಇದೊಂದು ರಹದಾರಿಯಾಗಿದೆ ಎಂಬುದನ್ನು ಕೂಡ ಚಾಣಕ್ಯರು ಹೇಳಿದ್ದು ಆ ವಿಚಾರಗಳ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.
ಯಾವತ್ತೂ ಕೂಡ ಹೆಂಡತಿಗೆ ನಿಮ್ಮ ಆದಾಯದ ಸಂಪೂರ್ಣ ವಿವರವನ್ನು ನೀಡಲು ಹೋಗಬೇಡಿ ಯಾಕೆಂದರೆ ಅದರಲ್ಲಿ ನಿಮಗೂ ಕೂಡ ಉಳಿತಾಯ ಮಾಡಿದಂತೆ ಪ್ರತಿಯೊಂದು ಆದಾಯದ ಚಿಕ್ಕ ಕಾಸಿನ ಮೇಲು ಕೂಡ ತನ್ನ ಅಧಿಕಾರವನ್ನು ಚಲಾಯಿಸಲು ಹೋಗುತ್ತಾಳೆ. ಇದಕ್ಕಾಗಿ ಯಾವತ್ತು ಹೆಂಡತಿಯ ಬಳಿ ಆದಾಯದ ಬಗ್ಗೆ ಸಂಪೂರ್ಣ ವಿವರವನ್ನು ಬಿಚ್ಚಿ ಕೊಡಬೇಡಿ.
ಇನ್ನು ನಿಮ್ಮ ಹಿಂದಿನ ದಿನಗಳಲ್ಲಿ ನಡೆದಿರುವಂತಹ ಕೆಲವೊಂದು ಕಹಿ ಘಟನೆಗಳನ್ನು ಯಾವತ್ತೂ ಕೂಡ ಹೆಂಡತಿಯ ಬಳಿ ಬಿಚ್ಚಿಡಲು ಹೋಗಬೇಡಿ ಯಾಕೆಂದರೆ ಅದನ್ನೇ ಇಟ್ಟುಕೊಂಡು ನಿಮ್ಮ ನಡುವೆ ಜಗಳ ಆದ ಸಂದರ್ಭದಲ್ಲಿ ಅವರು ಅದನ್ನು ನಿಮ್ಮ ವಿರುದ್ಧ ಮಾತನಾಡುವುದಕ್ಕೆ ಉಪಯೋಗಿಸಿಕೊಳ್ಳಲು ಬಹುದು. ಹೀಗಾಗಿ ಈ ವಿಚಾರವನ್ನು ಯಾವತ್ತೂ ಕೂಡ ಹಂಚಿಕೊಳ್ಳಬೇಡಿ.
ಇದನ್ನೂ ಓದಿ: Chanakya Neethi: ಇಂತಹ ಮಹಿಳೆಯರಿಂದ ದೂರ ಇರಿ ಇಲ್ಲವಾದಲ್ಲಿ ನಿಮ್ಮ ಜೀವನ ಬರ್ಬಾದ್ ಆಗಲಿದೆ.