Chanakya Neethi ಚಾಣಕ್ಯ ನಿಜವಾಗಲೂ ಕೂಡ ನಮ್ಮ ಭಾರತದ ದೇಶದ ಇತಿಹಾಸದಲ್ಲಿ ಅತ್ಯಂತ ಮೇಧಾವಿ ವ್ಯಕ್ತಿ ಎಂದು ಕೊಡು ತಪ್ಪಾಗಲ್ಲ. ಯಾಕೆಂದರೆ ಮೌರ್ಯ ಸಾಮ್ರಾಜ್ಯದಂತ ದೊಡ್ಡ ಸಾಮ್ರಾಜ್ಯವನ್ನು ಕೇವಲ ಒಬ್ಬ ಚಿಕ್ಕ ಬಾಲಕನಿಂದ ಕಟ್ಟಿಸಿರುವಂತಹ ಅವರ ಶಕ್ತಿ ಹಾಗೂ ಬುದ್ಧಿವಂತಿಕೆ ಎಷ್ಟಿರಬಹುದು ಎಂಬುದನ್ನು ನೀವೇ ಅಂದಾಜಿಸಬಹುದಾಗಿದೆ.
ಮಿತ್ರರೇ ಅವರು ಕೇವಲ ರಾಜತಾಂತ್ರಿಕ ಹಾಗೂ ಅರ್ಥಶಾಸ್ತ್ರ ರೀತಿಯ ವಿಚಾರಗಳನ್ನು ಮಾತ್ರವಲ್ಲದೆ ತಮ್ಮ ಗ್ರಂಥಗಳಲ್ಲಿ ಯಾವ ರೀತಿ ಯಶಸ್ಸು ಜೀವನವನ್ನು ನಡೆಸಬೇಕೆನ್ನುವುದರ ಕುರಿತಂತೆ ಕೂಡ ಬರೆದಿದ್ದಾರೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಯಶಸ್ವಿ ದಾಂಪತ್ಯ ಜೀವನಕ್ಕಾಗಿ ಹೆಂಡತಿ ಯಾವ ರೀತಿ ಗಂಡನ ಜೊತೆಗೆ ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆ.
ಹೌದು ಮಿತ್ರರೇ, ಮೊದಲಿಗೆ ಹೆಂಡತಿಯಾದವಳು ಯಾವತ್ತೂ ಕೂಡ ಗಂಡನ ಬಳಿ ಆತನ ಸಂಪಾದನೆ(earning) ಬಗ್ಗೆ ಹಾಗೂ ಆತ ಎಲ್ಲಿ ಯಾವ ರೀತಿ ಕೆಲಸ ಮಾಡುತ್ತಾನೆ ಎನ್ನುವುದರ ಬಗ್ಗೆ ಪದೇಪದೇ ಕೇಳಬಾರದು. ಯಾಕೆಂದರೆ ಆತ ಖಂಡಿತವಾಗಿ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಕಾರಣದಿಂದಾಗಿ ಕಷ್ಟಪಟ್ಟು ದುಡಿಯುತ್ತಿರುತ್ತಾನೆ ಹೀಗಾಗಿ ಆತನ ಕೆಲಸ ಹಾಗೂ ಸಂಪಾದನೆ ಬಗ್ಗೆ ನೀವು ಅನುಮಾನ ದೃಷ್ಟಿಯಲ್ಲಿ ನೋಡಿದಾಗ ಅವರಿಗೂ ಕೂಡ ಬೇಸರವಾಗುತ್ತಿದೆ.
ಇನ್ನು ಎಲ್ಲಕ್ಕಿಂತ ಪ್ರಮುಖವಾಗಿ ಪ್ರತಿಯೊಂದು ಸೋಲಿನ ಸಂದರ್ಭದಲ್ಲಿ ಕೂಡ ನೀವು ಅಂದರೆ ಹೆಂಡತಿಯಾದವಳು ಗಂಡನಿಗೆ ಧೈರ್ಯ(Encourage) ತುಂಬುವಂತಹ ಕೆಲಸವನ್ನು ಮಾಡಬೇಕು. ಯಾಕೆಂದರೆ ಸೋಲಿನ ಸಂದರ್ಭದಲ್ಲಿ ಅತ್ಯಂತ ಪ್ರೀತಿ ಪಾತ್ರದ ಬೆಂಬಲ ಸಿಗುತ್ತದೆ ಎಂದರೆ ಖಂಡಿತವಾಗಿ ಅವರು ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಉತ್ಸಾಹಿತರಾಗುತ್ತಾರೆ.