Abhishek Ambareesh: ಅಭಿಷೇಕ್ ಅಂಬರೀಶ್ ಅವರ ಮದುವೆಯಲ್ಲಿ ಯಶ್ ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ?

Yash ಕೊನೆಗೂ ಅಂಬರೀಶ್ ಅವರ ಏಕೈಕ ಸುಪುತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಅವಿವಾ(Aviva Bidapa) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಕಷ್ಟು ವರ್ಷಗಳ ಇವರ ಪ್ರೀತಿ ಈಗ ಮದುವೆ ಸಮಾರಂಭದೊಂದಿಗೆ ಇನ್ನೊಂದು ಹಂತಕ್ಕೆ ಹೋಗಿದೆ.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಬ್ಬರೂ ಕೂಡ ಶಾಸ್ತ್ರೋಕ್ತವಾಗಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಈ ಮದುವೆಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೆಲೆಬ್ರಿಟಿಗಳ ದಂಡೇ ಹರಿದು ಬಂದಿದೆ. ಈ ಸಂದರ್ಭದಲ್ಲಿ ಯಶ್ ಅವರು ಕೂಡ ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಜೊತೆಗೆ ಬಂದಿದ್ದಾರೆ.

ಮೊದಲಿನಿಂದಲೂ ಕೂಡ ಅಭಿಷೇಕ್ ಅಂಬರೀಶ್ ಅವರು ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಜೊತೆಗೆ ಸಹೋದರತ್ವದ ಬಾಂಧವ್ಯವನ್ನು ಹೊಂದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ಆಗಿರುವ ರಾಧಿಕಾ ಪಂಡಿತ್(Radhika Pandit) ಅವರ ಜೊತೆಗೆ ಅದ್ದೂರಿ ಆಗಿಯೇ ಡ್ರೆಸ್ ಮಾಡಿಕೊಂಡು ಮದುವೆ ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಇಬ್ಬರು ಡ್ರೆಸ್ ಎಷ್ಟು ಚೆನ್ನಾಗಿದೆ ಎಂದರೆ ಅಭಿಷೇಕ್ ಅಂಬರೀಶ್ ಅವರ ಮದುವೆ ಅಲ್ಲ ಬದಲಾಗಿ ರಾಕಿಂಗ್ ಸ್ಟಾರ್ ಯಶ್ ದಂಪತಿಗಳ ಮದುವೇನೇ ಎನ್ನೋ ಹಾಗೆ ಅದ್ದೂರಿಯಾಗಿ ಬಂದಿದ್ದಾರೆ. ಈ ಫೋಟೋ ನೋಡಿ ಖಂಡಿತವಾಗಿ ನೀವು ಕೂಡ ಹಾಗೆ ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment