ಕನ್ಯಾ ರಾಶಿಯಲ್ಲಿ ಮಂಗಳನ ಸಂಚಾರ ಆಗುವದರಿಂದ ಕಷ್ಟಗಳು ಪರಿಹಾರ ಗೊಳ್ಳುತ್ತದೆ ಮತ್ತು 3 ರಾಶಿಗೆ ಮಂಗಳನಿಂದ ಶುಭ ಫಲ ದೊರೆಯುತ್ತದೆ.

Transit of Mars in Virgo: ಗ್ರಹಗಳು ಮತ್ತು ನಕ್ಷತ್ರಗಳಲ್ಲಿ ಸ್ವಲ್ಪ ಬದಲಾವಣೆ ಆದಾಗ ಅಥವಾ ಒಂದು ನಿರ್ದಿಷ್ಟ ಸ್ಥಾನದಲ್ಲಿ ಬಂದಾಗ ಯೋಗಗಳು ಮತ್ತು ರಾಜಯೋಗ ರೂಪಗೊಳ್ಳುತ್ತದೆ. ಸೆಪ್ಟೆಂಬರ್ 18ರಿಂದ ಮಂಗಳನು ಕನ್ಯಾ ರಾಶಿಗೆ ಚಲಿಸುತ್ತಾನೆ ಇದರಿಂದಾಗಿ ಕೆಲವು ರಾಶಿಗಳಿಗೆ ಒಳ್ಳೆಯದಾಗುತ್ತದೆ. ಪ್ರತಿ ಗ್ರಹಗಳು ಸ್ವಲ್ಪ ಸಮಯದ ನಂತರ ರಾಶಿಯನ್ನು ಬದಲಾಯಿಸುತ್ತದೆ ಆ ಕಾರಣದಿಂದಾಗಿ ನಿಮಗೆ ಯೋಗಗಳು ಬದಲಾಗುತ್ತಾ ಹೋಗುತ್ತದೆ ಒಂದು ಸಲ ಕೆಟ್ಟದಾದರೆ ಇನ್ನೊಮ್ಮೆ ಒಳ್ಳೆಯದು ಆಗಬಹುದು ಇವೆಲ್ಲ ಗ್ರಹ ಮತ್ತು ನಕ್ಷತ್ರದ ಆದರದ ಮೇಲೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 18ರಂದು ಮಂಗಳನು ಕನ್ಯಾ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಸಪ್ಟೆಂಬರ್ 18ರವರೆಗೆ ಆ ರಾಶಿಯಲ್ಲಿ ಚಲಿಸುತ್ತಾನೆ.

ಮಂಗಳನು ಕನ್ಯಾ ರಾಶಿಗೆ ಬಂದಿರುವುದರಿಂದ ರಾಜಯೋಗ ದೊರೆಯುತ್ತದೆ ಮತ್ತು ಶುಭಫಲಗಳು ದೊರಕುತ್ತದೆ. ಈ ಮಂಗಳನ ಸಂಚಾರದಿಂದ ಮೂರು ರಾಶಿಗಳಿಗೆ ತುಂಬಾ ಲಾಭದಾಯಕವಾಗಿರುತ್ತದೆ. ಅದು ಯಾವುದೆಂದರೆ ಮೇಷ ರಾಶಿ, ಕರ್ಕಾಟಕ ರಾಶಿ ಮತ್ತು ತುಲಾ ರಾಶಿ.

ಮೊದಲನೆಯದಾಗಿ ಮೇಷ ರಾಶಿ, ಮಂಗಳನು ಮೇಷ ರಾಶಿಯವರಿಗೆ ತುಂಬಾ ಲಾಭವನ್ನು ತರುತ್ತದೆ. ಕೋರ್ಟು ಕಚೇರಿ ಕೆಲಸಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ನೀವು ಮಾಡುವಂತ ಕೆಲಸದಲ್ಲಿ ಒಳ್ಳೆಯ ಪ್ರೋತ್ಸಾಹವನ್ನು ಸಹೋದ್ಯೋಗಿಗಳಿಂದ ಪಡೆದುಕೊಳ್ಳುತ್ತೀರಾ ಮತ್ತು ಒಳ್ಳೆಯ ಹೆಸರನ್ನು ಮಾಡುತ್ತೀರಾ. ನಿಮ್ಮ ಶತ್ರುಗಳ ವಿರುದ್ಧ ಗೆಲುವನ್ನು ಸಾಧಿಸುತ್ತೀರಾ ಅಷ್ಟೇ ಅಲ್ಲದೆ ಆರ್ಥಿಕ ಲಾಭವೂ ಕೂಡ ಹೆಚ್ಚಾಗುತ್ತದೆ.

Transit of Mars in Virgo

ಎರಡನೆಯ ರಾಶಿ ಕರ್ಕಾಟಕ ರಾಶಿ, ಈ ರಾಶಿಯಲ್ಲಿ ವಿಪರೀತ ರಾಜಯೋಗ ಇರುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗುತ್ತದೆ ಮತ್ತು ಸಿಕ್ಕಿದಂತಹ ಕೆಲಸ ನಿಮಗೆ ಸಂತೋಷವನ್ನು ನೀಡುತ್ತದೆ. ಈ ರಾಶಿಯವರು ಈ ಹಿಂದೆ ತುಂಬಾ ಸಮಸ್ಯೆಗಳನ್ನು ಎದುರಿಸಿದ್ದರು ಈಗ ಅವೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವ ಕಾಲ. ನಿಮ್ಮ ಧೈರ್ಯ ಮತ್ತು ಆತ್ಮಸಾಕ್ಷಿಯೇ ನಿಮಗೆ ಬೆಂಬಲವಾಗಿರುತ್ತದೆ.

ಮೂರನೇದು ತುಲಾ ರಾಶಿ, ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ತುಂಬಾ ಸುಧಾರಿಸುತ್ತದೆ ಮತ್ತು ಮಾಡುವಂತಹ ಕೆಲಸದಲ್ಲಿ ಲಾಭವನ್ನು ಗಳಿಸುತ್ತೀರಾ. ಈ ರಾಶಿಯವರಿಗು ಕೂಡ ರಾಜಯೋಗ ದೊರೆಯುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುತ್ತೀರ ಮತ್ತು ಒಳ್ಳೆಯ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿಯಾಗುತ್ತದೆ.

Leave a Comment