ನಿಮಗೆ ಅದೃಷ್ಟದ ಸೂಚನೆ ಕೊಡುವ ಕನಸುಗಳಿವು

ಎಲ್ಲರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ ಸ್ವಪ್ನಶಾಸ್ತ್ರದ ಪ್ರಕಾರ ಒಂದೊಂದು ಕನಸಿಗೂ ಒಂದೊಂದು ಅರ್ಥವಿರುತ್ತದೆ. ಯಾವ ಯಾವ ಕನಸಿಗೆ ಏನೇನು ಅರ್ಥ ಇರುತ್ತದೆ ಎಂಬುದನ್ನು ಹಾಗೂ ಕನಸು ಯಾವಾಗ ಬಿದ್ದರೆ ನಿಜ ಆಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ಎಲ್ಲರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ. ರೊಮ್ಯಾಂಟಿಕ್ ಕನಸಿನಿಂದ ಹಿಡಿದು ಭಯಂಕರವಾಗಿರುವ ಕನಸಿನವರೆಗೆ ಬೀಳುತ್ತದೆ. ಕೆಲವರಿಗೆ ಕನಸು ನೆನಪಿದ್ದರೆ, ಕೆಲವರಿಗೆ ನೆನಪಿರುವುದಿಲ್ಲ. ರಾತ್ರಿ ಬೀಳುವ ಕನಸು ಭವಿಷ್ಯದಲ್ಲಿ ಆಗುವ ಘಟನೆಗಳ ಬಗ್ಗೆ ತಿಳಿಸುತ್ತವೆ. ಕೆಲವೊಂದು ಕನಸುಗಳು ಮುಂದೆ ರಾಜಯೋಗ ಬರಲಿದೆ ಎಂದು ಸೂಚಿಸುತ್ತದೆ. ಕೆಲವು ಕನಸುಗಳು ಎಲ್ಲರಿಗೂ ಬೀಳುವುದಿಲ್ಲ ಬಿದ್ದರೆ ಅವರು ಅದೃಷ್ಟವಂತರು ಅಂತಹ ಕನಸುಗಳು ಯಾವುದು ಎಂದು ತಿಳಿಯೋಣ. ಬೆಟ್ಟದಿಂದ ನೀರು ಹರಿಯುವುದು, ನೀರು ಕುಡಿಯುವಂತೆ ಕನಸು ಬಿದ್ದರೆ ಅದೃಷ್ಟ ಬದಲಾಯಿತು, ದಾರಿದ್ರ್ಯ ದೂರವಾಯಿತು ಎಂದು ಅರ್ಥ. ಈ ರೀತಿಯ ಕನಸು ಎಲ್ಲರಿಗೂ ಬೀಳುವುದಿಲ್ಲ ಬಿದ್ದರೆ ಶ್ರೀಮಂತರಾಗುತ್ತಾರೆ. ಯಾರ ಕನಸಿನಲ್ಲಿ ದೇವರು ಮತ್ತು ಬಿಳಿ ಬಟ್ಟೆ ಬಂದರೆ ಅವರಿಗೆ ದೇವರ ಅನುಗ್ರಹವಾಗಿದೆ ಎಂದು ಅರ್ಥ. ಮುಂದಿನ ದಿನಗಳಲ್ಲಿ ಶುಭ ಸುದ್ದಿ ಸಿಗುತ್ತದೆ, ಕೈಗೊಂಡ ಕಾರ್ಯಗಳು ಸಿದ್ಧಿಯಾಗುತ್ತದೆ ಎಂದು ಅರ್ಥ. ಕನಸಿನಲ್ಲಿ ಬಂಗಲೆ, ಸಿಂಹ, ಪರ್ವತ, ಹೂವು, ಮೊಸರು, ಕಾಮನಬಿಲ್ಲು ಕಂಡರೆ ಆರ್ಥಿಕ ವೃದ್ಧಿಯಾಗುತ್ತದೆ, ಗೌರವ ಸಿಗುವ ಜೊತೆಗೆ ಯಶಸ್ಸು ಸಿಗುತ್ತದೆ. ಕೆಲವು ಪ್ರಾಣಿಗಳು ಕನಸಿನಲ್ಲಿ ಕಂಡರೆ ಅದೃಷ್ಟ ಬರುತ್ತದೆ. ಕನಸಿನಲ್ಲಿ ಮುಂಗುಸಿ ಕಂಡರೆ ಕುಬೇರನ ಅನುಗ್ರಹಕ್ಕೆ ಪಾತ್ರರಾದಂತೆ. ಕನಸಿನಲ್ಲಿ ಹಸು ಕಂಡರೆ ಶುಭ, ಅಂದುಕೊಂಡ ಕೆಲಸ ಅರ್ಧದಲ್ಲಿ ನಿಂತು ಹೋದರೆ ಪೂರ್ಣಗೊಳ್ಳುತ್ತದೆ. ಕನಸಿನಲ್ಲಿ ಆನೆ ಕಂಡರೆ ನಿಮಗೆ ದೊಡ್ಡ ಮಟ್ಟದ ಹಣ ಸಿಗುತ್ತದೆ ಎಂದು ಅರ್ಥ. ಒಂದು ವೇಳೆ ಕನಸಿನಲ್ಲಿ ಆನೆ ಕೋಪವಾಗಿದ್ದಂತೆ ಕಂಡರೆ ಹಣ ಖರ್ಚಾಗುತ್ತದೆ ಎಂದು ಅರ್ಥ. ಕನಸಿನಲ್ಲಿ ಹುಲಿ ಕಂಡರೆ ನೀವು ಬಲಿಷ್ಠರು, ಏನೇ ಕಷ್ಟ ಬಂದರು ಎದುರಿಸುತ್ತೀರಿ ಎಂದು ಅರ್ಥ. ಕನಸಿನಲ್ಲಿ ಹಾವು ಕಂಡರೆ ಶುಭ ಎಂದು ಅರ್ಥ. ಬಂಗಾರದ ಬಣ್ಣದ ಹಾವು ಕಂಡರೆ ಅದೃಷ್ಟ ಬರುತ್ತದೆ. ಹೆಡೆ ಎತ್ತಿದ ಹಾವನ್ನು ನೋಡಿದರೆ ಒಳ್ಳೆಯದಾಗುತ್ತದೆ.

ಕನಸಿನಲ್ಲಿ ಅಲಂಕೃತ ಸ್ತ್ರೀಯನ್ನು ಕಂಡರೆ ಲಕ್ಷ್ಮೀ ಕೃಪೆ ಒಲಿದಂತೆ. ತುಪ್ಪ ಕಂಡರೆ ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ದವಸ ಧಾನ್ಯಗಳು ರಾಶಿ ಹಾಕಿದಂತೆ ಕಂಡರೆ ಅದು ಮಂಗಳಕರ. ಸೂರ್ಯ, ಚಂದ್ರ, ನಕ್ಷತ್ರ ಕನಸಿನಲ್ಲಿ ಕಂಡರೆ ಖಾಯಿಲೆಗಳು ಗುಣಮುಖವಾಗುತ್ತದೆ ಎಂದು ಅರ್ಥ. ಕನಸು ಬಿದ್ದ ಸಮಯವು ಮುಖ್ಯ. ಬೆಳಗಿನ ಜಾವದಲ್ಲಿ ಬೀಳುವ ಕನಸುಗಳು ನಿಜವಾಗುತ್ತದೆ. ಬ್ರಾಹ್ಮಿ ಮೂಹೂರ್ತದಲ್ಲಿ ಬೀಳುವ ಕನಸು 10 ದಿನದಲ್ಲಿ ನೆರವೇರುತ್ತದೆ. ಮಧ್ಯರಾತ್ರಿ ಅಥವಾ ಬ್ರಾಹ್ಮಿ ಮೂಹೂರ್ತದಲ್ಲಿ ಕನಸು ಬಿದ್ದರೆ ಒಂದು ತಿಂಗಳ ಒಳಗೆ ಅದೇ ಸುದ್ದಿಯನ್ನು ತರುತ್ತದೆ. ಮಲಗಿದಾಗ ನಿಮ್ಮ ಪತ್ನಿ ಸುಳ್ಳು ಹೇಳಿದಂತೆ ಕನಸು ಬಿದ್ದರೆ ಅದೃಷ್ಟವಂತರಾಗುತ್ತಾರೆ. ಹಸುವಿನ ಹಾಲನ್ನು ಕರು ಕುಡಿಯುತ್ತಿದ್ದಂತೆ ಕಂಡರೆ ಅದು ಶುಭ. ಕನಸಿನಲ್ಲಿ ನೀರು ತುಂಬಿದ ಕೊಡವನ್ನು ಕಂಡರೆ ಶುಭ ಸಮೃದ್ಧಿಯ ಸಂಕೇತ ಅದರಲ್ಲೂ ಮಣ್ಣಿನ ಮಡಕೆಯಲ್ಲಿ ನೀರು ತುಂಬಿರುವಂತೆ ಕಂಡರೆ ಶ್ರೀಮಂತರಾಗುತ್ತಾರೆ ಈ ರೀತಿಯ ಕನಸು ಬಿದ್ದರೆ ಅಂತಹ ವ್ಯಕ್ತಿ ಕುಬೇರನಾಗುತ್ತಾನೆ. ಕನಸಿನಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಕಮಲ, ಕೇದಗೆ, ನಾಗಕೇಸರ ಹೂವುಗಳು ಕಂಡರೆ ಶುಭ. ಕನಸಿನಲ್ಲಿ ಚಿನ್ನಾಭರಣ ಕಳೆದುಕೊಂಡಂತೆ ಕನಸು ಬಿದ್ದರೆ ನೀವು ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುತ್ತೀರಿ ಎಂದು ಸೂಚನೆ. ಕನಸಿನಲ್ಲಿ ಮನೆಯ ನಲ್ಲಿಯಲ್ಲಿ ಇದ್ದಕಿದ್ದ ಹಾಗೆ ನೀರು ಹೊರಹೋದರೆ, ಮನೆಯ ಪ್ರವೇಶ ದ್ವಾರದಲ್ಲಿ ಎಣ್ಣೆ ಚೆಲ್ಲಿದರೆ ಅಶುಭ ಅಲ್ಲದೆ ಮನೆಯಲ್ಲಿ ಹಣ ಖರ್ಚಾಗುತ್ತದೆ ಹಾಗೂ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ರೀತಿ ಯಾರಿಗಾದರೂ ಕನಸು ಬಿದ್ದರೆ ಏನೇನು ಎಂದು ತಿಳಿದುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Comment