ನಮ್ಮ ಪೂರ್ವಜರು ಹಾಗೂ ಶಾಸ್ತ್ರದ ಪ್ರಕಾರ ಸೂರ್ಯ ಮುಳುಗುವ ವೇಳೆ ಯಾವುದೇ ಕೆಲಸ ಮಾಡಬಾರದು ಎಂಬ ನಂಬಿಕೆ ಇದೆ.ಪುರಾಣಗಳಲ್ಲಿಯೂ ಈ ಬಗ್ಗೆ ಉಲ್ಲೇಖ ಗಳಿವೆ. ಹಾಗಾದರೆ ಸೂರ್ಯ ಮುಳುಗುವ ಯಾವೆಲ್ಲಾ ಕೆಲಸಮಾಡಬಾರದು ಅಂದರೆ ಸೂರ್ಯ ಮುಳುಗುವ ವೇಳೆ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಮ್ಮ ಶಾಸ್ತ್ರಗಳ ಪ್ರಕಾರ ಸಂಜೆ ಸಮಯದಲ್ಲಿ ಊಟ ಮಾಡುವುದರಿಂದ ನಮ್ಮ ಸಂಪತ್ತು ಕಡಿಮೆ ಆಗುತ್ತದೆ.
ಹಸಿವಾದರೆ ಅಲ್ಪ ಅಹಾರ ಸೇವನೆ ಮಾತ್ರ ಮಾಡಬಹುದು. ಸಂಜೆ ಸಮಯದಲ್ಲಿ ಮನೆಗಳನ್ನ ಶುದ್ದೀಕರಿಸುವ ಕಾರ್ಯವನ್ನು ಮಾಡುವುದು ಒಳ್ಳೆಯದಲ್ಲ. ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಬೇಕೆಂದರೆ ಸಂಜೆ ವೇಳೆ ಪೂಜಾ ಕಾರ್ಯದಲ್ಲಿ ತೊಡಗಬಹುದು. ಸಂಜೆಯ ವೇಳೆ ಶೃಂಗಾರದಲ್ಲಿ ತೊಡಗುವುದು ಸೂಕ್ತವಲ್ಲ. ಶಾಸ್ತ್ರಗಳ ಪ್ರಕಾರ ಸಂಜೆ ವೇಳೆ ಭೂಮಿಯ ಮೇಲೆ ಲಕ್ಷ್ಮೀ ದೇವಿ ಒಡಾಡುತ್ತಾಳಂತೆ ಇಂತಹ ವೇಳೆ ಶೃಂಗಾರ ಮಾಡುವುದು ಉತ್ತಮವಲ್ಲ ಎಂಬ ನಂಬಿಕೆ ಇದೆ.
ಸಂಜೆಯ ವೇಳೆ ನಿದ್ದೆಮಾಡಬಾರದು ಹೌದು ಇದರಿಂದ ನಮ್ಮ ಮನಸ್ಸು ಉತ್ತೇಜನ ಕಳೆದುಕೊಂಡು ಜ್ಞಾಪಕ ಶಕ್ತಿ ಕುಂದುತ್ತದೆ. ನಮ್ಮ ಶಾಸ್ತ್ರಗಳು ಹಾಗೂ ಹಿರಿಯರು ಇದನ್ನೇ ಹೇಳಿದ್ದಾರೆ ಆದರೆ ನಾವು ಇದಕ್ಕೆ ತಲೆಕೆಡಿಸಿ ಕೊಳ್ಳೊದಿಲ್ಲ. ಸಂಜೆಯ ವೇಳೆಯ ತುಳಸಿ ಎಲೆಗಳನ್ನು ಕೀಳುವುದು ನಮ್ಮ ಮನೆಗೆ ಬಡತನವನ್ನು ಆಹ್ವಾನಿಸಿದಂತೆ.ದೇವರ ಮೇಲೆ ನಂಬಿಕೆ ಇರೋರು ಈ ಕೆಲಸಗಳನ್ನು ಮಾಡಬೇಡಿ.ನಮ್ಮ ಪುರಾಣಗಳಲ್ಲಿ ಹೇಳಿದ ವಿಷಯಗಳು ವಿಜ್ಞಾನದ ಪ್ರಕಾರವೂ ಸರಿಯಾಗಿವೆ.