ಇಂದು ನಾವು ಮಾಸ ಭವಿಷ್ಯದಲ್ಲಿ ಸಿಂಹ ರಾಶಿಯವರಿಗೆ ಈ ಮಾಸದಲ್ಲಿ ಅಥವಾ ಈ ೨೦೨೦ ರ ಮಾರ್ಚ್ ತಿಂಗಳಿನಲ್ಲಿ ಅವರ ಫಲಾಫಲ ಹೇಗಿದೆ ಸಿಂಹ ರಾಶಿಯವರು ಏನೆಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಭವಿಷ್ಯ ಹೇಗಿದೆ ಏನೆಲ್ಲಾ ಇದೆ, ಇಲ್ಲಾ ಅನ್ನೋದರ ಬಗ್ಗೆ ನೋಡೋಣ ಬನ್ನಿ.
ನಾವು ತಿಳಿಸುವ ಮಾಹಿತಿಯೂ ಚಂದ್ರ ರಾಶಿಯ ಮೇಲೆ ಆಧಾರಿತ ಆಗಿರುತ್ತೆ. ೨೦೨೦ರ ಮಾರ್ಚ್ ತಿಂಗಳಲ್ಲಿ 4 ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡುತ್ತವೆ ಅರದಲ್ಲಿ ಮುಖ್ಯವಾಗಿ ಸಿಂಹ ರಾಶಿಯ ಅಧಿಪತಿ ಆಗಿರುವ ಸೂರ್ಯದೇವನು ಕುಂಭ ರಾಶಿಯಿಂದ ಹೊರಟು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ನಂತರ ಮಂಗಳನು ಮಾರ್ಚ್ 22ರ ನಂತರ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವನು ನಂತರ ಶುಕ್ರನು ಮಾರ್ಚ್ 28 ರಿಂದ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶಿಸುತ್ತಾನೆ. ಮಾರ್ಚ್ 30ರಂದು ಗುರುವು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ.
ಮಾರ್ಚ್ ತಿಂಗಳಲ್ಲಿ ಪೂರ್ಣವಾಗಿ ಶನಿಯು ಮಕರ ರಾಶಿ, ರಾಹು ಮಿಥುನ ರಾಶಿ ಹಾಗೂ ಕೇತು ಕುಂಭ ರಾಶಿಯಲ್ಲಿ ವೀರಾಜಮಾನರಾಗಿರುತ್ತಾರೆ. ಇದರ ಹೊರತಾಗಿ ಚಂದ್ರನು ಪ್ರತಿ ೨ ಅಥವಾ ಎರಡೂವರೆ ದಿನಗಳ ಅವಧಿಯಲ್ಲಿ ತನ್ನ ಸ್ಥಾನ ಬದಲಾವಣೆ ಮಾಡುತ್ತಾ ಇರುತ್ತಾನೆ. ಇದು ಮಾರ್ಚ್ ತಿಂಗಳಿನಲ್ಲಿ ಉಂಟಾಗುವ ಗ್ರಹಗತಿಗಳ ಫಲ.
ಇನ್ನು ಮೊದಲನೆಯದಾಗಿ ಮಾರ್ಚ್ ತಿಂಗಳಿನಲ್ಲಿ ಸಿಂಹ ರಾಶಿಯವರ ವ್ಯಾಪಾರ ವಹಿವಾಟು ನೋಡುವುದಾದರೆ, ಅಧಿಪತಿಯಾದ ಶನಿ ದೇವನು ಮಾರ್ಚ್ ನಲ್ಲಿ ಮಕರ ರಾಶಿಯಲ್ಲಿ ಇರುತ್ತಾನೆ. ಸಿಂಹ ರಾಶಿಯ ಧನದ ಅಧಿಪತಿಯಾದ ಬುಧನು ಈ ತಿಂಗಳು ಪೂರ್ತಿ ಕುಂಭ ರಾಶಿಯಲ್ಲಿ ನೆಲೆಸಿರುತ್ತಾನೆ. ಸಿಂಹ ರಾಶಿಯವರ ಭವಿಷ್ಯದ ಅಧಿಪತಿಯಾದ ಶುಕ್ರನು ಭಾಗ್ಯವನ್ನು ತರುತ್ತಾನೆ. ಈ ಎಲ್ಲ ಗೃಹಗಳ ಪ್ರಭಾವದಿಂದ ಈ ತಿಂಗಳಲ್ಲಿ ಸಿಂಹ ರಾಶಿಯವರಿಗೆ ವ್ಯಾಪಾರ ವಹಿವಾಟಿನಲ್ಲಿ ಲಾಭ ಹೆಚ್ಚು. ಸ್ವ ಸ್ಥಾನದಿಂದ ದೂರವಿದ್ದು ಕೆಲಸ ನಿರ್ವಹಿಸುವವರಿಗೆ ಕೂಡ ಲಾಭ ಪಡೆಯುತ್ತಾರೆ. ಆಮದು, ರಫ್ತು, ಸಾರಿಗೆ ಇನ್ನಿತರೆ ಕ್ಷೇತ್ರಗಳಿಗೆ ಉತ್ತಮ ಮಾರುಕಟ್ಟೆಯ ಲಾಭ.
ಸ್ವ ಸ್ಥಾನದಿಂದ ದೂರವಿದ್ದು ಕೆಲಸ ಮಾಡುವವರಿಗೆ ಕೂಡ ಯಾವುದೇ ಕ್ಷೇತ್ರದಲ್ಲಿಯೂ ಉತ್ತಮ ಲಾಭ ಆಗಲಿದೆ. ವಿದೇಶಕ್ಕೆ ಹೋಗುವ ಕನಸು ಇರುವವರಿಗೆ ಕೂಡ ಈ ತಿಂಗಳಿನಲ್ಲಿ ನಿಮ್ಮ ಕನಸು ಸಾಕಾರ ಆಗುವ ಕಾಲ ಬಂದಿದೆ. ಇನ್ನು ಹೂಡಿಕೆಯ ವಿಷಯದಲ್ಲಿ ಸಿಂಹ ರಾಶಿಯವರಿಗೆ ಸರಿಯಾದ ಸಮಯ. ಆದರೂ ಸಹ ತಿಂಗಳ ಮಧ್ಯದಿಂದ ಕೊನೆಯವರೆಗೂ ದೊಡ್ಡ ಮಟ್ಟದ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರವಹಿಸುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಉತ್ತಮ ಫಲಗಳು ಇವೆ. ಯಾವುದೇ ಯೋಚನೆ ಅಥವಾ ಹೊಸ ಕೆಲಸಗಳು ಪ್ರಾರಂಭಿಸಬೇಕಿದ್ದಲ್ಲಿ ತಿಂಗಳ ಕೊನೆ ಉತ್ತಮ.
ಶುಕ್ರ ದೇವನು ಒಳ್ಳೆಯ ಸ್ಥಾನದಲ್ಲಿರುವುದರಿಂದ ನಿಮ್ಮ ಕಾರ್ಯದಲ್ಲಿ ಹೊಸ ಸಂಬಂಧಗಳು ಪ್ರವೇಶಿಸಲಿವೆ. ನೌಕರಿಯಿಂದ ವಂಚಿತರಾದವರಿಗೆ ಈ ಸಮಯದಲ್ಲಿ ಒಳ್ಳೆಯ ಉದ್ಯೋಗವಕಾಶಗಳು ದೊರಕದಿದ್ದು ಬಯಸಿದ ಉದ್ಯೋಗಗಳು ಸಿಗುವ ಸಾಧ್ಯತೆ ಇದೆ. ಅಲ್ಲದೆ ಈಗಾಗಲೇ ನೌಕರಿಯಲ್ಲಿ ಇದ್ದವರಿಗೆ ಬಯಸಿದ ಉತ್ತಮ ವರ್ಗದ ವರ್ಗಾವಣೆ ಕೂಡ ಸಿಗಲಿದೆ.
ಇನ್ನು ವೈವಾಹಿಕ ಜೀವನದ ಕುರಿತು ನೋಡುವುದಾದರೆ ಈ ತಿಂಗಳಿನಲ್ಲಿ ಯಾವುದೇ ರೀತಿಯ ದಾಂಪತ್ಯ ಕಲಹಗಳು ಉಂಟಾಗುವುದಿಲ್ಲ. ಎಲ್ಲಾ ಕಲಹಗಳು ದೂರವಾಗಿ ಮನೆ ಹಾಗೂ ಮನಸ್ಸಿನಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ. ಹಂಗ ಸಿಂಹ ರಾಶಿಯವರಿಗೆ ಈ ತಿಂಗಳಿನಲ್ಲಿ ಕುಟುಂಬದ ಸಹಕಾರ ಸಿಗಲೆಂದು ಪೋಷಕರ ಮಾರ್ಗದರ್ಶನ ಸಹಾಯ ದೊರೆಯಲಿದೆ. ಒಟ್ಟಿನಲ್ಲಿ ಈ ತಿಂಗಳಿನಲ್ಲಿ ದಾಂಪತ್ಯ ಜೀವನದಲ್ಲಿ ಸಂತೋಷಕರ ಲಾಭಗಳು ದೊರೆಯಲಿದ್ದು ಹಾಗೂ ಪತ್ನಿಯ ಮನೆಯವರಿಂದ ಸಿಹಿ ಸುದ್ದಿಗಳು ಸಿಗಲಿವೆ.
ಪ್ರೇಮಿಗಳಿಗೆ ಸಹಾಯ ಮಾರ್ಚ್ ತಿಂಗಳಿನಲ್ಲಿ ಸುಖ ಸಂತೋಷ ಸಿಗಲಿದ್ದು ಹುಟ್ಟಿಗೆ ಸಮಯ ಕಳೆಯುವ ಹಲವಾರು ಅವಕಾಶಗಳು ಲಭಿಸಲಿವೆ. ವಿದ್ಯಾರ್ಥಿಗಳು ಮಾರ್ಚ್ ತಿಂಗಳಿನಲ್ಲಿ ಸಾಕಷ್ಟು ಏಕಾಗ್ರತೆಯಿಂದ ಸಾಮರ್ಥ್ಯವನ್ನು ಹೊಂದುತ್ತಾರೆ. ಯಾರಿಂದಲೂ ವಿದ್ಯಾರ್ಥಿಗಳ ಓದಿಗೆ ಭಂಗ ಉಂಟಾಗುವುದಿಲ್ಲ ಸ್ನೇಹಿತರ ಹಾಗೂ ಗುರುಗಳ ಸಹಕಾರ ಸಹ ಸಿಗಲಿದೆ.
ಇನ್ನು ಸಿಂಹರಾಶಿಯವರ ಆರೋಗ್ಯದ ಬಗ್ಗೆ ನೋಡುವುದಾದರೆ ಈ ರಾಶಿಯವರು ತಿಂಗಳ ಪ್ರಾರಂಭದಿಂದ ಮಧ್ಯದವರೆಗೆ ಲವಲವಿಕೆಯಿಂದಿರುತ್ತಾರೆ ಆದರೆ ತಿಂಗಳ ಮಧ್ಯದಿಂದ ತಿಂಗಳದ ಕೊನೆಯವರೆಗೆ ಆಹಾರ ಪಾನೀಯದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಈ ಸಮಯದಲ್ಲಿ ಫುಡ್ ಪಾಯಿಸನ್ ಅಥವಾ ದೇಹದ ಉಷ್ಣತೆಯ ತೊಂದರೆಗಳುಂಟಾಗುತ್ತವೆ. ಒಟ್ಟಾರೆಯಾಗಿ ಮಾರ್ಚ್ ತಿಂಗಳಿನಲ್ಲಿ ಸಿಂಹರಾಶಿಯವರಿಗೆ ಗ್ರಹಗಳು ಶುಭಫಲವನ್ನು ತಂದು ಒಳ್ಳೆಯ ದಿನಗಳನ್ನು ನಿಮ್ಮ ಪಾಲಿಗೆ ಒದಗಿಸುತ್ತವೆ.