ಶ್ರಾವಣ ಮಾಸ ಬಹಳ ಪವಿತ್ರತೆಯನ್ನು ಹೊಂದಿದ್ದು ಈ ಮಾಸವನ್ನು ಭಾರತದಲ್ಲಿ ಅಲ್ಲದೆ ವಿದೇಶದಲ್ಲಿ ಕೂಡ ಆಚರಣೆ ಇದೆ .ಗ್ರಂಥಗಳ ಪ್ರಕಾರ ಈ ಮಾಸದಲ್ಲಿ ಶಿವನ ಆರಾಧನೆ ಮಾಡಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಒಳ್ಳೆಯ ವರನನ್ನು ಪಡೆಯಲು ಭಕ್ತರು ತನ್ನ ಶುದ್ಧ ಮನಸ್ಸಿನಿಂದ ಬೋಲೆ ನಾಥನ್ ಪೂಜಿಸಿದಲ್ಲಿ ಆವ್ರ ಅವರ ಎಲ್ಲ ಇಚ್ಛೆಯನ್ನು ನೆರವೇರಿಸುತ್ತಾರೆ .
ಹುಣ್ಣಿಮೆ ದಿನ ಶ್ರಾವಣ ನಕ್ಷತ್ರ ಬರುವುದರಿಂದ ಈ ಮಾಸವನ್ನು ಕೂಡ ಶ್ರಾವಣ ಮಾಸ ಎಂದು ಕರೆಯುತ್ತಾರೆ ಹಾಗೂ ಈ ಮಾಸದಲ್ಲಿ ಅನೇಕ ಪೂಜಾ ವ್ರತ ಹಾಗೂ ದೇವಿ ಹಾಗೂ ದೇವನ ಆರಾಧನೆ ನಡೆಯುವುದು .ಮೊದಲ ಸೋಮವಾರ 18 ಜುಲೈ ಅಂದು ಇದ್ದು ಈ ದಿನ ವೃತವನ್ನು ಮಾಡಬಹುದು . ಶಿವನ ಕೃಪೆಗೆ ಪಾತ್ರರಾಗಬೇಕು. ಇನ್ನು 12 ಆಗಸ್ಟ್ ಅಂದು ಶ್ರಾವಣ ಮಾಸ ಮುಗಿಯುವುದು ಹಾಗೂ ಈ ತಿಂಗಳಲ್ಲಿ ರಕ್ಷಾ ಬಂದನ ಕೂಡ ಬರುವುದು ಇನ್ನು ನೀವು ಮಾಡುವ ಪೂಜೆ ಪುನಸ್ಕಾರ ಅಲ್ಲಿ ಕೆಲವೊಂದು ತಪ್ಪು ಅನ್ನು ಮಾಡಬಾರದು ಶಿವನ ಪೂಜೆ ಮಾಡುವಾಗ ಈ ಮೂರು ವಸ್ತುವನ್ನು ಬಳಸಬಾರದು ಹಾಗೂ ಮೂರು ಪ್ರಕಾರದ ಸ್ತ್ರೀಯರು ಕೂಡ ಈ ವ್ರತವನ್ನು ಕೈಗೊಳ್ಳಬಾರದು ಒಂದು ವೇಳೆ ನಿರ್ದಾಕ್ಷಿಣ್ಯ ಮಾಡಿದ್ದಲ್ಲಿ ನೀವು ದೇವರ ಶಾಪಕ್ಕೆ ಗುರಿ ಆಗಬೇಕು ಹಾಗೂ ಮನೆ ನಾಶ ಆಗುವುದು ಹಾಗಾಗಿ ಯಾವೆಲ್ಲ ಕಾರಣಗಳು ಎಂದು ನೋಡೋಣ ಬನ್ನಿ.
ಶ್ರಾವಣ ಮಾಸದ ಸೋಮವಾರದ ದಿನ ಮುಂಜಾನೆಯೆದ್ದು ಸ್ನಾನಾದಿಗಳನ್ನು ಮುಗಿಸಿ ಶಿವನಿಗೆ ಜಲಾಭಿಷೇಕವನ್ನು ಮಾಡಬೇಕು. ಅದರ ಜೊತೆಗೆ ತಾಯಿ ಪಾರ್ವತಿ ಹಾಗೂ ನಂದಿಗೆ ಹಾಲಿನ ಅಭಿಷೇಕ ಅಥವಾ ಗಂಗಾ ಜಲಾಭಿಷೇಕವನ್ನು ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಶಿವಲಿಂಗದ ಮೇಲೆ ತುಳಸಿ ದಳವನ್ನು ಇಡಬಾರದು ಪಂಚಾಮೃತದಿಂದ ರುದ್ರಾಭಿಷೇಕವನ್ನೂ ಮಾಡಬೇಕು ಬಿಲ್ವಪತ್ರೆಯಿಂದ ಅರ್ಚನೆಯನ್ನು ಮಾಡಬೇಕು ಶಿವಲಿಂಗದ ಮೇಲೆ ಉಮ್ಮತ್ತಿ ಗಿಡದ ಹಣ್ಣು ಆಗಲಿ ಶ್ರೀಗಂಧ ಮತ್ತು ಅಕ್ಷತೆಯನ್ನು ಹಾಕಬೇಕು. ಹಾಗೂ ಎಲ್ಲರ ಹಣೆಗೂ ತಿಲಕವನ್ನು ಇಡಬೇಕು. ಶಿವನಿಗೆ ನೈವೇದ್ಯದ ರೂಪದಲ್ಲಿ ತುಪ್ಪ ಮತ್ತು ಸಕ್ಕರೆಯನ್ನು ಇಡಬೇಕು. ಪೂಜೆಯ ನಂತರ ಧೂಪ ದೀಪಗಳಿಂದ ವಿಘ್ನಕಾರಕನಾದ ಗಣಪತಿಗೆ ಆರತಿಯನ್ನು ಮಾಡಬೇಕು ತದನಂತರ ಶಿವನಿಗೆ ಆರತಿಯನ್ನು ಬೆಳಗಬೇಕು ಆಮೇಲೆ ಪ್ರಸಾದವನ್ನು ಎಲ್ಲರಿಗೂ ಹಂಚಬೇಕು.
ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರು ಮುಂಜಾನೆ ಬೆಳಗ್ಗೆ ಬೇಗ ಎದ್ದು ಪೂಜಾದಿಗಳನ್ನು ಮುಗಿಸಬೇಕು ಇಲ್ಲವಾದಲ್ಲಿ ಶಿವನ ಕೋಪಕ್ಕೆ ನೀವು ಗುರಿಯಾಗುವಿರಿ. ಇನ್ನು ಈ ಮಾಸದಲ್ಲಿ ಎಲ್ಲಾ ತರಕಾರಿಗಳು ದೂಷಿತವಾಗುತ್ತದೆ .ಯಾಕಪ್ಪ ಎಂದು ಅದರ ಬಗ್ಗೆ ಕುಲಂಕುಶವಾಗಿ ಯೋಚನೆ ಮಾಡಿ ಈ ಸಮಯದಲ್ಲಿ ತರಕಾರಿಗಳಲ್ಲಿ ಕೀಟಗಳು ಸೇರಿಕೊಂಡಿರುತ್ತದೆ ಅದನ್ನು ನಾವು ಸೇವನೆ ಮಾಡಿದರೆ ಹಲವಾರು ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಹಾಗಾಗಿ ಶ್ರಾವಣಮಾಸದಲ್ಲಿ ಬದನೆಕಾಯಿಯನ್ನು ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವುದು ನಿಷಿದ್ಧವಾಗಿದೆ. ಗಂಡ-ಹೆಂಡತಿಯರು ಕೂಡ ಈ ಪವಿತ್ರ ಮಾಸದಲ್ಲಿ ಆದಷ್ಟು ತಾಳ್ಮೆಯಿಂದ ಸಂಸಾರವನ್ನು ನಡೆಸಿಕೊಂಡು ಹೋಗಬೇಕು. ನೀವು ಜೊತೆ ಸೇರುವುದು ಆದಷ್ಟು ಕಡಿಮೆ ಮಾಡಬೇಕು ಇಲ್ಲವಾದರೆ ಶಿವನ ಕೋಪಕ್ಕೆ ಗುರಿ ಆಗುವಿರಿ .
ಇನ್ನು ಮನೆಯಲ್ಲಿ ಸದಾ ಖುಷಿ ನಗುವಿನಿಂದ ಕೂಡಿರಬೇಕು. ಮನೆಯಲ್ಲಿ ಕಿರಿಕಿರಿ ,ಜಗಳ ಅಳುವುದನ್ನು ಕಡಿಮೆ ಮಾಡಬೇಕು. ಹಾಗೂ ಮಾಂಸಾಹಾರ ಸೇವನೆಯನ್ನು ಮಾಡಬಾರದು. ಜೊತೆಗೆ ಮದ್ಯದ ಸೇವೇನೆ ಕೂಡ ಮಾಡಬಾರದ್ದು. ಹಾಗೂ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯನ್ನು ಮಾಡಬಾರದು. ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು ಹಾಗೂ ಯಾರ ಜೊತೆಗೂ ಜಗಳವನ್ನು ಆಡಬಾರದು. ಇನ್ನು ತಲೆ ಕೂದಲು, ಉಗುರು ಕಟ್ ಹಾಗೂ ಶೇವಿಂಗ್ ಕೂಡ ಮಾಡಬಾರದು. ಒಳ್ಳೆಯ ನುಡಿಯ ಜೊತೆಗೆ ನಿಮ್ಮ ಕೈಲಾದಷ್ಟು ಅಸಹಾಯಕರಿಗೆ ಹಾಗೂ ಬಡವರಿಗೆ ಸೇವೆಯನ್ನು ಮಾಡಿ, ಯಾಕೆಂದರೆ ಶಿವ ಭೂಮಿಯ ಮೇಲೆ ಸಂಚಾರ ಮಾಡುತ್ತಾ ಇರುವರು ಎನ್ನುವ ನಂಬಿಕೆ ಇದೆ ಹಾಗಾಗಿ ಯಾವ ರೂಪದಲ್ಲಿ ನಿಮ್ಮ ಬಳಿ ಸಹಾಯ ಬೇಡುವನು ಅನ್ನೋದು ಗೊತ್ತಿರೋದಿಲ್ಲ.
ಶಿವನ ಲಿಂಗ ಅಥವಾ ಫೋಟೋ ಇರುವ ಕಡೆ ಯಾವುದೇ ಕಾರಣಕ್ಕೂ ಶೋ ಹಾಗೂ ಚಪ್ಪಲಿ ಅನ್ನು ಧರಿಸಬಾರದು. ಮಹಿಳೆಯರ ಋತು ಚಕ್ರದ ಸಮಸ್ಯೆ ಇದ್ದು ಅದ ಸಮಯದಲ್ಲಿ ಕೆಲವರು ಪೂಜೆ ಮಾಡುತ್ತಾರೆ. ನಮ್ಮ ಪುರಾಣ ಅಲ್ಲಿ ಇಂಥ ಸಮಯದಲ್ಲಿ ಪೂಜಾ ಕಾರ್ಯಕ್ರಮ ನಿಷಿದ್ಧ .ಮುಟ್ಟಿನ ಸಮಯದಲ್ಲಿ ಸ್ತ್ರೀಯರು ದೇವರ ಮೂರ್ತಿ ಸ್ಪರ್ಶ ಹಾಗೂ ದೇವರ ಕೋಣೆ ಪ್ರವೇಶ ಮತ್ತು ದೇವಾಲಯ ಒಳಗಡೆ ಹೋಗುವುದು ನಿಷಿದ್ಧ. ಎಲ್ಲಿ ಶಿವಲಿಂಗ ಇರುವುದು ಅಲ್ಲಿ ಶಿವನ ಶಕ್ತಿ ಅಧಿಕ ಆಗಿದ್ದು ಆ ಲಿಂಗದ ಮೇಲೆ ಸದಾ ಜಲ ಸ್ಪರ್ಶ ಆಗುವುದು ಹಾಗಾಗಿ ಶಿವನು ಶಾಂತ ಆಗುವನು ಈ ಜಲ ಹರಿವಿನಿಂದ ಹಾಗೂ ಗರುಡ ಪುರಾಣದ ಪ್ರಕಾರ ಶಿವಲಿಂಗಕ್ಕೆ ಪ್ರತಿದಿನವೂ ಅಭಿಷೇಕವನ್ನು ಮಾಡಲೇಬೇಕು ಹಾಗಾಗಿ ಕೆಲವೊಬ್ಬರ ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಲಿಂಗಕ್ಕೆ ವಾರಕ್ಕೊಮ್ಮೆ ಅಭಿಷೇಕವನ್ನು ಮಾಡುತ್ತಾರೆ ಇದು ಸರಿಯಾದ ಕ್ರಮವಲ್ಲ.
ಪುರಾಣಗಳ ಪ್ರಕಾರ ತುಳಸಿ ಮಾತೆಯು ಶಿವನ ಸಹೋದರಿ ಆಗಿರುತ್ತಾರೆ ಹಾಗಾಗಿ ತುಳಸಿ ಗಿಡದ ಅಥವಾ ತುಳಸಿ ಪತ್ರೆಯನ್ನು ಇಡುವುದಿಲ್ಲ ಒಂದು ವೇಳೆ ಗಣಪತಿ ಮೂರ್ತಿ ಹಾಗೂ ಶಿವನ ಮೂರ್ತಿಯ ತುಳಸಿದಳ ಅರ್ಚನೆ ಅಥವಾ ತುಳಸಿಯನ್ನು ಇಟ್ಟು ಪೂಜೆ ಸಲ್ಲಿಸಿದ್ದರೆ ನಿಮ್ಮ ಮನೆಗೆ ಅಪಶಕುನಗಳು ಹಾಗೂ ತೊಂದರೆಗಳು ಶುರುವಾಗುವುದು.
ಸ್ನಾನಾದಿಗಳನ್ನು ಮುಗಿಸದೆ ದೇವರ ಮನೆಗೆ ಹೋಗಬಾರದು. ಮಾಂಸಾಹಾರ ಸೇವನೆ ಮತ್ತು ಪುರುಷ ಮತ್ತು ಸ್ತ್ರೀ ಮಿಲನದ ಬಳಿಕ ದೇವರ ಪೂಜೆಯನ್ನು ಮಾಡಬಾರದು ಇದರಿಂದ ಶಿವನು ಕೋಪಗೊಳ್ಳುವನು.
ಇನ್ನು ವ್ರತವನ್ನು ಆಚರಿಸುವರು ಯಾವೆಲ್ಲ ಕ್ರಮ ಅನುಸರಿಸಬೇಕು ಎಂದು ನೋಡುವುದಾದರೆ , ಮೊದಲೆನೆಯದಾಗಿ ವ್ರತವನ್ನು ಆಚರಿಸುವವರು ನಮ್ಮ ಪುರಾಣಗಳ ಪ್ರಕಾರ ವ್ರತವನ್ನು ಆಚರಿಸುವವರು ಯಾವುದೇ ಕಾರಣಕ್ಕೂ ಬೇರೆಯವರ ಮೂಲಕ ಹಣ್ಣುಹಂಪಲುಗಳನ್ನು ತಿನ್ನಬಾರದು ಹಾಗೂ ಸಾಲವನ್ನು ಕೂಡ ಮಾಡಬಾರದು ಹಾಗೂ ಇನ್ನೊಬ್ಬರ ಹತ್ತಿರ ಯಾವುದೇ ಹಣ್ಣನ್ನು ಕೇಳಿಕೊಂಡು ತಿನ್ನಬಾರದು ಒಂದುವೇಳೆ ಇನ್ನೊಬ್ಬರು ಸ್ವಯಿಚ್ಛೆಯಿಂದ ಹಣ್ಣನ್ನು ನೀಡಿದರೆ ಅದರ ಸೇವನೆ ಮಾಡಬಹುದು.
ಸೋಮವಾರದ ರಥ ಅಥವಾ ಶ್ರಾವಣಮಾಸದ ರಥವನ್ನು ನೀವು ಆಚರಿಸುತ್ತಿದ್ದರೆ ಯಾವುದೇ ಕಾರಣಕ್ಕೂ ಪೇರಳೆಹಣ್ಣನ್ನು ವ್ರತ ದಿನ ನೀವು ತಿನ್ನಲೇಬಾರದು. ಮಿಕ್ಕ ದಿನ ನೀವು ಆ ಹಣ್ಣನ್ನು ಸೇವನೆ ಮಾಡಬಹುದು ಹಾಗೂ ಭಗವಂತನಿಗೂ ಕೂಡ ಪೆರಳೆಹಣ್ಣನ್ನು ಇಡಬಾರದು. ಇನ್ನುಮನೆಯಲ್ಲಿ ಯಾವುದಾದರೂ ಹಳೆಯ ಹಿಟ್ಟು ಇದ್ದಲ್ಲಿ ಅದರ ಉಪಯೋಗ ಮಾಡಬಾರದು ಯಾಕೆಂದರೆ ಹಳೇ ಹಿಟ್ಟಿನಲ್ಲಿ ಕ್ರಿಮಿಕೀಟಗಳು ಕೂಡಿಕೊಂಡಿರುತ್ತವೆ. ಇದರಿಂದ ನಿಮಗೆ ಪಾಪ ಬರುತ್ತದೆ ಹಾಗೂ ವ್ರತ ಮಾಡುವವರು ಯಾವಾಗಲೂ ಹೊಸ ಹಿಟ್ಟಿನ ಬಳಕೆಯನ್ನು ಮಾಡಬೇಕು ಹಾಗೂ ಯಾವಾಗಲೂ ಮನಸ್ಸು ಹಾಗೂ ದೇಹದ ಶುದ್ಧತೆ ಇಂದ ಕೂಡಿರಬೇಕು.
ಗಂಡ-ಹೆಂಡತಿ ಇಬ್ಬರೂ ಕೂಡ ಶ್ರಾವಣಮಾಸದ ವ್ರತವನ್ನು ಆಚರಿಸಿದರೆ ಅವರ ಜೀವನ ಬಹಳ ಸುಂದರವಾಗಿರುತ್ತದೆ. ಆದರೆ ಹಿಂದೂ ಪುರಾಣದ ಪ್ರಕಾರ ಇವರು ಸಪ್ತಪದಿಯನ್ನು ತುಳಿದಿಲ್ಲ ಎಂದರೆ ಅವರು ಮಾಡಿರುವ ಪೂಜೆಗೆ ಯಾವುದೇ ಫಲ ಲಭಿಸುವುದಿಲ್ಲ ಹಾಗೂ ನೀವು ಈ ವ್ರತವನ್ನು ಮಾಡಬಾರದು. ಕೋರ್ಟ್ ಅಲ್ಲಿ ಮದುವೆ ಆಗಿದ್ದವರು ಕೂಡ ಮಾಡಬಾರದು ಕೆಲವು ವ್ಯಕ್ತಿಗಳು ತಮ್ಮ ಮನಸ್ಸಿನಲ್ಲಿ ದ್ವೇಷ, ಹೊಟ್ಟೆಕಿಚ್ಚು, ಅಸೂಯೆ ಮುಂತಾದ ಕೆಟ್ಟ ವಿಚಾರಗಳನ್ನೇ ತುಂಬಿಸಿಕೊಂಡು ಜೀವನ ಸಾಗಿಸುತ್ತಿರುತ್ತಾರೆ ಅಂಥವರು ಈ ಶ್ರಾವಣ ಮಾಸದ ವ್ರತವನ್ನು ಮಾಡಲೇಬಾರದು ಒಂದುವೇಳೆ ಶಿವನ ಕೋಪಕ್ಕೆ ನೀವು ಆಗುವುದರಲ್ಲಿ ಎರಡು ಮಾತಿಲ್ಲ.
ಶಾಸ್ತ್ರಗಳ ಪ್ರಕಾರ ಈ ಶ್ರಾವಣ ಮಾಸವು ಪ್ರೀತಿಯ ಸಂಕೇತವಾಗಿರುತ್ತದೆ ಹಾಗೂಈ ಮಾಸದಲ್ಲಿ ಗಂಡ-ಹೆಂಡತಿಯರು ಜೊತೆಗೂಡಿ ಶಿವನಿಗೆ ಪೂಜೆ ಮಾಡಿದರೆ ಆ ಪೂಜೆಯನ್ನು ಶಿವನು ಮನಸಾರೆ ಸ್ವೀಕರಿಸುತ್ತಾನೆ .ಒಂದು ವೇಳೆ ನೀವಿಬ್ಬರೂ ಬೇರೆಬೇರೆ ಆದಲ್ಲಿ ಈ ಪೂಜೆಯನ್ನು ಮಾಡಲು ಸಾಧ್ಯವಿಲ್ಲ ಹಾಗಾಗಿ ನೀವು ಒಂದುಗೂಡಿ ಪೂಜೆಯನ್ನು ಮಾಡಬೇಕು ಆಚಾರ್ಯ ಚಾಣಕ್ಯ ಪ್ರಕಾರ ಒಬ್ಬ ವೇಶ್ಯೆಯು ಪೂಜೆ ಹಾಗೂ ವ್ರತವನ್ನು ಮಾಡಲೇಬಾರದು. ಶಾಸ್ತ್ರಗಳ ಪ್ರಕಾರ ಕನ್ಯೆಯರು ಶಿವಲಿಂಗ ಸ್ಪರ್ಶ ಮಾಡಬಾರದು. ಇನ್ನೂ ಯಾವ ವ್ಯಕ್ತಿಯು ಹೆಣ್ಣಿನ ನಿಂದನೆ ಮಾಡುತ್ತಾನೆ ಹಾಗೂ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ ಅಂತವರಿಗೆ ಶಿವನು ನರಕದಲ್ಲಿ ಕೂಡ ಜಾಗವನ್ನು ನೀಡುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಮದುವೆ ಆಗದೆ ಇರುವ ಕನ್ಯೆಯರು ಪರ್ವತವನ್ನು ಭಯ-ಭಕ್ತಿಯಿಂದ ಪೂಜಿಸಿದಲ್ಲಿ ಅವರಿಗೆ ಶಿವನು ಕೃಪೆ ಸಿಕ್ಕಿ ಆದಷ್ಟು ಬೇಗ ಕಂಕಣ ಭಾಗ್ಯ ದೊರೆಯುವುದು.
ನೀವು ಮಾಡಿದ ಪೂಜೆ ಶಿವನಿಗೆ ಅರ್ಪಿತವಾಗಿದೆ ಹಾಗೂ ಶಿವನು ಸಂಪ್ರೀತನಾಗಿದ್ದಾನೆ ಎಂದು ಐದು ಸೂಚನೆಗಳ ಮೂಲಕ ನಿಮಗೆ ಸೂಚನೆಯನ್ನು ನೀಡುತ್ತಾನೆ. ಅವು ಯಾವುದೆಂದರೆ ಶಿವನ ವಾಹನ ಹಾಗೂ ದ್ವಾರಪಾಲಕರಾದ ನಂದಿಯು ಅಂದರೆ ಹಸುವಿನ ಮುಖಾಂತರ ನಿಮ್ಮ ಮನೆ ಬಾಗಲಿಗೆ ಬಂದು ತನ್ನ ಕೊಂಬಿನಿಂದ ನಿಮ್ಮ ಮನೆ ಬಾಗಿಲು ತಟ್ಟುತ್ತಿದ್ದಾರೆ. ಇಲ್ಲಿ ಶಿವನು ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದಾನೆ ಎಂದು ಅರ್ಥ ,ಆವಾಗ ನಂದಿ ಮಹಾರಾಜಂಗೆ ತಿಲಕವನ್ನಿಟ್ಟು ಸಿಹಿ ಪದಾರ್ಥಗಳನ್ನು ಅವನಿಗೆ ತಿನ್ನಿಸಬೇಕು ಇದರಿಂದ ನಿಮ್ಮ ಮನೆಗೆ ಸುಖ ಶಾಂತಿ ನೆಮ್ಮದಿ ಸಿಗುವುದು ಎಂದೇ ಅರ್ಥ. ನಿಮ್ಮ ಕನಸಿನಲ್ಲಿ ಶಿವಲಿಂಗದ ದರ್ಶನವಾದರೆ ನಿಮ್ಮ ಕಷ್ಟ-ನಷ್ಟ ದುಃಖಗಳು ನಿಮ್ಮಿಂದ ದೂರವಾಗುವುದು ಎಂದು ಅರ್ಥ ಹಾಗಾಗಿ ನೀವು ಶಿವನ ಪೂಜೆಗೆ ಯಾವುದೇ ಕೊರತೆಯನ್ನು ಮಾಡದೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿರಬೇಕು.
ಶಾಸ್ತ್ರಗಳ ಪ್ರಕಾರ ನೀಲಕಂಠ ಪಕ್ಷಿಯು ಶಿವನ ಪ್ರತಿರೂಪವಾಗಿದೆ ಎಂದು ಹೇಳುತ್ತಾರೆ .ಶ್ರಾವಣ ಮಾಸದಲ್ಲಿ ಈ ಪಕ್ಷಿಯು ನಿಮ್ಮ ಮನೆ ಮಾಳಿಗೆಯಲ್ಲಿ ಬಂದು ಕುಳಿತುಕೊಂಡರೆ ಸ್ವತ ಶಿವನೇ ನಿಮ್ಮ ಮನೆಗೆ ಬಂದಿದ್ದಾನೆ ಯಾವುದೇ ಕಾರಣಕ್ಕೂ ಆ ಪಕ್ಷಿಯನ್ನು ಹೊರಗೆ ಓಡಿಸಬೇಡಿ ಹಿಂದೆ ಶ್ರೀರಾಮನು ನೀಲಕಂಠ ಪಕ್ಷಿ ವೀಕ್ಷಣೆ ಮಾಡಿದ ನಂತರ ರಾವಣನ ಮೇಲೆ ಯುದ್ಧವನ್ನು ಗೆದ್ದಿದ್ದು ಎಂಬ ಪ್ರತೀತಿ ಇದೆ. ಇನ್ನು ಮನೆಯ ಒಳಗಡೆ ಕಪ್ಪು ನಾಗರಹಾವು ಬಂದರೆ ಯಾವುದೇ ಹಾನಿಯನ್ನು ಮಾಡದೆ ಪೂಜೆಯನ್ನು ಸಲ್ಲಿಸಬೇಕು ಶ್ರಾವಣಮಾಸದಲ್ಲಿ ಶಿವನು ಭೂಮಿಯ ಮೇಲೆ ಸಂಚಾರವನ್ನು ಮಾಡುತ್ತಿರುತ್ತಾನೆ .ಯಾವುದಾದರೂ ರೂಪದಲ್ಲಿ ತನ್ನ ಭಕ್ತರ ಮನೆಗೆ ಬಂದು ಅವರ ಸೇವೆಯನ್ನು ಪಡೆಯುತ್ತೇನೆ ಎಂಬ ನಂಬಿಕೆ ಇದೆ.
ಕೊನೆಯದಾಗಿ ಶ್ರಾವಣ ಮಾಸದ ಸೋಮವಾರದಂದು ಡಮರುಗದ ಧ್ವನಿ ಹಾಗೂ ಗಂಟೆಗಳ ನಾದವನ್ನು ನಿಮಗೆ ಕೇಳಿಸಿದರೆ ಅದು ಅತ್ಯಂತ ಶುಭವಾದ ಸುದ್ದಿ ಆಗಿರುತ್ತದೆ. ಇಲ್ಲಿ ನಿಮ್ಮ ಭಕ್ತಿಗೆ ಶಿವನು ಒಲಿದು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ದೂರಮಾಡಿ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿಯನ್ನು ನೀಡುತ್ತಾನೆ.