Shani Deva: ಶನಿದೇವನಿಗೆ ಇಷ್ಟವಾಗಿರುವ ನಾಲ್ಕು ರಾಶಿಗಳು ಯಾವುವು ಗೊತ್ತಾ?

Shani Deva ಸಾಮಾನ್ಯವಾಗಿ ಶನಿದೇವನನ್ನು ಎಲ್ಲರೂ ಕೂಡ ನೋಡಿ ಅಂಜುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ನ್ಯಾಯ ದೇವತೆಯೆಂಬುದಾಗಿ ಕರೆಯಲಾಗುತ್ತದೆ. ಕೇವಲ ಕೆಟ್ಟ ಕೆಲಸಗಳನ್ನು ಮಾಡುವವರಿಗೆ ಮಾತ್ರ ಅವರ ಕರ್ಮದ ಫಲವನ್ನು ನೀಡುವಂತಹ ನ್ಯಾಯದಾತ ನಮ್ಮೆಲ್ಲರ ಶನಿದೇವ. ಅಷ್ಟಕ್ಕೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಇರುವಂತಹ ದ್ವಾದಶ ರಾಶಿಗಳಲ್ಲಿ ಶನಿದೇವನ ಇಷ್ಟವಾದ ನಾಲ್ಕು ರಾಶಿಗಳ ಬಗ್ಗೆ ಇಂದು ತಿಳಿಯಲು ಹೊರಟಿದ್ದೇವೆ ಬನ್ನಿ.

ತುಲಾ ರಾಶಿ: ಶನಿದೇವನ ಅತ್ಯಂತ ನೆಚ್ಚಿನ ರಾಶಿಗಳಲ್ಲಿ ತುಲಾ ರಾಶಿ ಕೂಡ ಒಂದಾಗಿದೆ. ಕಾರ್ಯಕ್ಕೆ ತಕ್ಕಂತಹ ಫಲವನ್ನು ಇವರು ಪಡೆಯಲಿದ್ದಾರೆ ಹಾಗೂ ಶನಿದೇವನ ಕೃಪಾಕಟಾಕ್ಷದಿಂದಾಗಿ ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಗೆಲುವನ್ನು ಸಾಧಿಸಲಿದ್ದಾರೆ ಎಂದು ಹೇಳಬಹುದಾಗಿದೆ. ಹೀಗಾಗಿ ಹಾರ್ದಿಕ ಸಮಸ್ಯೆಯಿಂದ ಹೊರ ಬರಬಹುದಾದಂತಹ ಎಲ್ಲಾ ಹಾದಿಗಳನ್ನು ಕೂಡ ಶನಿದೇವ ಇವರಿಗಾಗಿ ತೆರೆಯಲಿದ್ದಾನೆ.

ವೃಷಭ ರಾಶಿ: ಇವರು ಸಾಕಷ್ಟು ಪರಿಶ್ರಮ ಗಳಾಗಿರುತ್ತಾರೆ ಹೀಗಾಗಿ ಇವರನ್ನು ನೋಡಿದರೆ ಶನಿ ದೇವರಿಗೆ ಸಾಕಷ್ಟು ಇಷ್ಟ. ಇವರು ಯಾವುದೇ ಕ್ಷೇತ್ರದಲ್ಲಿ ಕೂಡ ಕೆಲವು ಸಮಯಗಳಷ್ಟು ಕೆಲಸ ಮಾಡಿದರೆ ಸಾಕು ಆ ಕ್ಷೇತ್ರದ ಇಡೀ ಇತಿಹಾಸವನ್ನೇ ತಿಳಿದುಕೊಳ್ಳಬಲ್ಲಂತಹ ಚಾಣಾಕ್ಷತೆ ಇವರಲ್ಲಿದ್ದು ಉತ್ತಮ ಭವಿಷ್ಯ ಮುಂದಿನ ದಿನಗಳಲ್ಲಿ ಇವರಿಗೆ ಕಾದಿದೆ.

ಕುಂಭ ರಾಶಿ: ಈ ರಾಶಿ ಅಧಿಪತಿಯೇ ಶನಿದೇವ ಆಗಿರುವ ಕಾರಣದಿಂದಾಗಿ ಕುಂಭ ರಾಶಿಯವರಂದರೆ ಶನಿಗೆ ಬಹಳಷ್ಟು ಇಷ್ಟ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಶನಿದೇವನ ಕೃಪಾಕಟಾಕ್ಷದಿಂದಾಗಿ ಇವರು ಕೆಲಸಕ್ಕಾಗಿ ಕಾಯುತ್ತಿದ್ದಾರೆ ಕೆಲಸ ಹಾಗೂ ವ್ಯಾಪಾರದಲ್ಲಿ ಸಾಕಷ್ಟು ಸಮಯಗಳಿಂದ ವ್ಯಾಪಾರಿಗಳು ಕಾಯುತ್ತಿದ್ದ ಲಾಭ ಕೂಡ ಸಿಗಲಿದೆ. ಮಕರ ರಾಶಿ: ಸಾಹಸಿಗಳಾಗಿರುವ ಮಕರ ರಾಶಿಯವರಿಗೆ ಶನಿದೇವನ ಸಾತ್ ಕೂಡ ಸಿಗಲಿದ್ದು ಅವರ ಕೆಲಸದಲ್ಲಿ ಅಡ್ಡ ನಿಲ್ಲುವಂತಹ ಶಕ್ತಿ ಯಾರಿಗೂ ಕೂಡ ಇರುವುದಿಲ್ಲ. ಹೀಗಾಗಿ ಕೇವಲ ಗೆಲುವನ್ನು ಮಾತ್ರ ಇವರು ಪಡೆಯಲು ಸಾಧ್ಯ.

Leave a Comment