Scorpio Horoscope: ವೃಶ್ಚಿಕ ರಾಶಿಯವರಿಗೆ ಈ ತಿಂಗಳಲ್ಲಿ ಆ ಒಂದು ಪುಣ್ಯವೇ ನಿಮ್ಮನ್ನ ಕಾಪಾಡುತ್ತೆ

Scorpio Horoscope September Month: ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿಯಾದ ವೃಶ್ಚಿಕ ರಾಶಿಯಲ್ಲಿ ಜನಿಸಿರುವವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಗ್ರಹಗತಿ ಹೇಗಿದೆ ಯಾವ ಗ್ರಹ ಯಾವ ಫಲ ಕೊಡಲಿದ್ದಾರೆ ದೇವರ ಅನುಗ್ರಹಕ್ಕೆ ಹೇಗೆ ಪಾತ್ರರಾಗಬೇಕು ಹಾಗೂ ವೃಶ್ಚಿಕ ರಾಶಿಯವರ ಸಪ್ಟೆಂಬರ್ ತಿಂಗಳಿನ ಆರೋಗ್ಯ ಹೇಗಿದೆ, ಉದ್ಯೋಗ, ವಿದ್ಯಾಭ್ಯಾಸ ಮುಂತಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೋಡೋಣ

ಸಪ್ಟೆಂಬರ್ ತಿಂಗಳಿನಲ್ಲಿ ಶ್ರಾವಣ ಮಾಸ ಈ ಮಾಸದಲ್ಲಿ ಶಿವನ ಆರಾಧನೆ ಮಾಡಬೇಕು. ಮಂಗಳವಾರ ಮಂಗಳಗೌರಿ ವ್ರತ ಮಾಡುವುದರಿಂದ ಎಲ್ಲಾ ರಾಶಿಯವರಿಗೂ ಒಳ್ಳೆಯದಾಗುತ್ತದೆ. ಈ ತಿಂಗಳಿನಲ್ಲಿ ಸ್ವರ್ಣ ಗೌರಿ ವ್ರತ, ವರ ಸಿದ್ಧಿವಿನಾಯಕ ವ್ರತ ಮಾಡುವುದರಿಂದ ಒಳ್ಳೆಯದಾಗುತ್ತದೆ. ಶ್ರಾವಣ ಮಾಸದಲ್ಲಿ ಪೂಜೆ ಪುನಸ್ಕಾರ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ. ವೃಶ್ಚಿಕ ರಾಶಿಯವರಲ್ಲಿ ಅರ್ಧಾಷ್ಟಮ ಶನಿ ಇರುವುದರಿಂದ ಚಂಚಲ ಸ್ವಭಾವ ಕಂಡುಬರುತ್ತದೆ.

ಈ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಗುರು ಬಲ ಅಷ್ಟೊಂದು ಚೆನ್ನಾಗಿಲ್ಲ. ವೃಶ್ಚಿಕ ರಾಶಿಯವರ ನಿರೀಕ್ಷೆಗಳು ಈ ತಿಂಗಳಿನಲ್ಲಿ ಈಡೇರುವ ಸಂಭವ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಸಪ್ಟೆಂಬರ್ ತಿಂಗಳು ಶುಭವನ್ನು ತರುತ್ತದೆ. ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಅನುಕೂಲ ಇದೆ. ಈ ರಾಶಿಯವರು ಕೆಲವೊಮ್ಮೆ ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ ಆದರೆ ಸಪ್ಟೆಂಬರ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರ ಹಣದ ಸಮಸ್ಯೆ ನಿವಾರಣೆ ಆಗುತ್ತದೆ, ಋಣಬಾಧೆಗಳು ದೂರಾಗುವ ಸಮಯ ಇದಾಗಿದೆ.

ವೃಶ್ಚಿಕ ರಾಶಿಯವರ ಮನೆಯಲ್ಲಿ ಸಪ್ಟೆಂಬರ್ ತಿಂಗಳಿನಲ್ಲಿ ಶುಭಕಾರ್ಯ ವಾತಾವರಣ ನಿರ್ಮಾಣವಾಗುತ್ತದೆ. ಈ ರಾಶಿಯ ವಿದ್ಯಾರ್ಥಿಗಳು ಸಪ್ಟೆಂಬರ್ ತಿಂಗಳಿನಲ್ಲಿ ಉತ್ತಮ ಫಲ ಪಡೆಯುತ್ತಾರೆ. ಕಬ್ಬಿಣ, ಬೆಳ್ಳಿ ಬಂಗಾರದ ವ್ಯಾಪಾರ ಮಾಡುವ ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಉತ್ತಮ ಲಾಭವನ್ನು ಕೊಡುತ್ತದೆ. ವೃಶ್ಚಿಕ ರಾಶಿಯ ಕೃಷಿಕರಿಗೆ ಸಪ್ಟೆಂಬರ್ ತಿಂಗಳು ಉತ್ತಮವಾಗಿದೆ, ಕೆಲಸ ಕಾರ್ಯಗಳು ವೇಗವಾಗಿ ನಡೆಯುತ್ತದೆ. ವೃಶ್ಚಿಕ ರಾಶಿಯವರು ಬೇರೆಯವರಿಗೆ ಒಳ್ಳೆಯದು ಮಾಡಿರುವುದು, ಶ್ರಮದಿಂದ ಮಾಡಿದ ಕೆಲಸ ಸಪ್ಟೆಂಬರ್ ತಿಂಗಳಿನಲ್ಲಿ ಫಲ ಕೊಡುತ್ತದೆ.

Scorpio Horoscope September Month

ಸಂತಾನ ಇಲ್ಲದ ವೃಶ್ಚಿಕ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಸಂತಾನ ಪ್ರಾಪ್ತಿಯಾಗುವ ಸಂಭವವಿದೆ ಕೆಲವೊಮ್ಮೆ ಗುರು ಬಲ ಇಲ್ಲದಿದ್ದರೂ ಶುಕ್ರನ ಅನುಗ್ರಹದಿಂದ ಸಂತಾನ ಸಮಸ್ಯೆ ನಿವಾರಣೆಯಾಗುತ್ತದೆ. ಈ ರಾಶಿಯವರ ಆರೋಗ್ಯದ ಸಮಸ್ಯೆಯೂ ಈ ತಿಂಗಳಿನಲ್ಲಿ ನಿವಾರಣೆಯಾಗುತ್ತದೆ. ಈ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಸಜ್ಜನರ ಜೊತೆ ಇರುವ ಅವಕಾಶ ಲಭಿಸುತ್ತದೆ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು. ಬಹಳ ದಿನಗಳಿಂದ ಕಾಡುತ್ತಿದ್ದ ಕಾನೂನಿನ ಸಮಸ್ಯೆ ಈ ತಿಂಗಳಿನಲ್ಲಿ ಪರಿಹಾರವಾಗುತ್ತದೆ.

ವೃಶ್ಚಿಕ ರಾಶಿಯವರು ತಂದೆ, ತಾಯಿಯ ವಿಷಯದಲ್ಲಿ ಅವರ ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. ಈ ರಾಶಿಯವರ ಸುತ್ತ ಮುತ್ತಲಿನ ಜನರು ನಂಬಿಸಿ ಮೋಸ ಮಾಡುವ ಸಾಧ್ಯತೆಯಿದೆ ಆದ್ದರಿಂದ ಜನರನ್ನು ಸುಲಭವಾಗಿ ನಂಬಬಾರದು. ಈ ರಾಶಿಯವರು ಯಾವುದೆ ನಿರ್ಧಾರ ತೆಗೆದುಕೊಳ್ಳುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ವೃಶ್ಚಿಕ ರಾಶಿಯವರ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಕೈ ಗಂಟಿನ ಸಮಸ್ಯೆ, ಗಂಟಲು ನೋವು ಕಂಡುಬರುವ ಸಾಧ್ಯತೆ ಇದೆ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಿ.

ಈ ರಾಶಿಯವರ ಮನೆಯಲ್ಲಿ ವೃದ್ದರಿದ್ದರೆ ಕಾಳಜಿಯಿಂದ ನೋಡಿಕೊಳ್ಳಿ. ವೃಶ್ಚಿಕ ರಾಶಿಯವರು ಮುಷ್ಟಿ ಅನ್ನವನ್ನು ದೇವರಿಗೆ ನೈವೇದ್ಯ ಮಾಡಿ ಅನ್ನವನ್ನು ಅನ್ನದಾನ ಮಾಡುವ ಕ್ಷೇತ್ರಕ್ಕೆ ಅರ್ಪಿಸುವುದರಿಂದ ಒಳ್ಳೆಯದಾಗುತ್ತದೆ. ಮಾನಸಿಕವಾಗಿ ನೊಂದಿರುವವರಿಗೆ ಸಾಂತ್ವನ ಹೇಳುವುದರಿಂದ ಪುಣ್ಯ ದೊರೆಯುತ್ತದೆ. ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಹೇಳುವುದರಿಂದ ಒಳ್ಳೆಯದಾಗುತ್ತದೆ. ಗಣೇಶ ಚತುರ್ಥಿಯಂದು ಗಣೇಶನಿಗೆ ಬಾಳೆಹಣ್ಣು, ಕಬ್ಬು, ಬೆಲ್ಲವನ್ನು ನೈವೇದ್ಯ ಮಾಡಬೇಕು.

ದೇವರ ಪೂಜೆ ಮಾಡುವಾಗ ಭಕ್ತಿಯಿಂದ ಮಾಡಿದಾಗ ಮಾತ್ರ ದೇವರು ಫಲ ಕೊಡುತ್ತಾನೆ ಆಡಂಬರದಲ್ಲಿ ಪೂಜೆ ಮಾಡಿ ಭಕ್ತಿ ಇಲ್ಲದಿದ್ದರೆ ಯಾವುದೆ ಫಲ ಲಭಿಸುವುದಿಲ್ಲ. ಒಟ್ಟಿನಲ್ಲಿ ವೃಶ್ಚಿಕ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಮಿಶ್ರಫಲ ದೊರೆಯಲಿದ್ದು ಪರಿಹಾರವನ್ನು ತಿಳಿಸಲಾಗಿದೆ ಅದರಂತೆ ದೇವರ ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ತಮ್ಮ ಕಷ್ಟವನ್ನು ದೂರ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗೋಣ

Leave a Comment