ಸಂಸಪ್ತಕ ಯೋಗ: ಈ 5 ರಾಶಿಯವರ ಬದುಕೇ ಬದಲಾಗಲಿದೆ, 30 ವರ್ಷಗಳ ನಂತರ ರೂಪುಗೊಂಡಿರುವ ಯೋಗ..

Samsapthaka yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಒಂದೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಬರೋಬ್ಬರಿ 30 ವರ್ಷಗಳ ನಂತರ ಸೂರ್ಯ ಮತ್ತು ಶನಿದೇವ ಇಬ್ಬರು ಕೂಡ ಈಗ 180 ಡಿಗ್ರಿಗಳ ಅಂತರದಲ್ಲಿದ್ದಾರೆ. ಇವರಿಬ್ಬರ ಈ ಸ್ಥಾನದಿಂದ ಸಂಸಪ್ತಕ ಯೋಗ (Samsapthaka yoga) ರೂಪುಗೊಂಡಿದೆ, ಪ್ರಸ್ತುತ ಸೂರ್ಯಾದೇವನು ತನ್ನದೇ ಆದ ಅಧಿಪಠ್ಯದಲ್ಲಿರುವ ಸಿಂಹ ರಾಶಿಯಲ್ಲಿದ್ದಾನೆ, ಶನಿದೇವನು ಕುಂಭ ರಾಶಿಯಲ್ಲಿದ್ದಾನೆ. ಈ ವೇಳೆ ಶನಿದೇವರು ಸೂರ್ಯನ ಮೇಲೆ ದೃಷ್ಟಿ ಬೀರಿರುವುದರಿಂದ, ಕೆಲವು ರಾಶಿಗಳ ಮೇಲೆ ಈ ಯೋಗವು ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಯಾವೆಲ್ಲಾ ರಾಶಿಗಳು ಹುಷಾರಾಗಿ ಇರಬೇಕು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಸಂಸಪ್ತಕ ಯೋಗದ ಪರಿಣಾಮ ವೃಷಭ ರಾಶಿಯವರಿಗೆ ಕಷ್ಟವನ್ನು ತಂದೊಡ್ಡುತ್ತದೆ, ಹಾಗಾಗಿ ನೀವು ಸವಾಲುಗಳನ್ನು ಎದುರಿಸುವಾಗ ಹುಷಾರಾಗಿ ಇರಬೇಕಾಗುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣಬೇಕು ಎಂದರೆ, ಕೆಲಸದ ಸ್ಥಳದಲ್ಲಿ ಬಹಳ ಜಾಗರೂಕವಾಗಿ ಇರಬೇಕು. ಮನೆಯಲ್ಲಿ ವಾದ ವಿದಾದ ಹೆಚ್ಚಾಗುವ ಕಾರಣಕ್ಕೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಕ್ರಿಯೆ ಸಿಗಬೇಕು ಎಂದರೆ, ನಿಮ್ಮ ಕೋಪ ಕಂಟ್ರೋಲ್ ನಲ್ಲಿ ಇರಬೇಕು. ಪ್ರೀತಿ ಪ್ರೇಮದ ವಿಷಯದಲ್ಲೂ ತೊಂದರೆ ಉಂಟಾಗಬಹುದು.

ಸಿಂಹ ರಾಶಿ :- ಸಂಸಪ್ತಕ ರಾಜಯೋಗದ ಪರಿಣಾಮ ನಿಮ್ಮ ರಾಶಿಯ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಬದುಕಿನಲ್ಲಿ ಒಂದಲ್ಲಾ ಒಂದು ತೊಂದರೆಗಳು ಶುರುವಾಗಬಹುದು. ಹಾಗಾಗಿ ಹುಷಾರಾಗಿರಿ. ಈ ಸಮಯದಲ್ಲಿ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಿ. ಈ ವೇಳೆ ಶಾಂತಿಯಿಂದ ಇರುವ ಲಕ್ಷಣ ಕಡಿಮೆ ಇರುವುದರಿಂದ ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಡಿ. ಬಿಸಿನೆಸ್ ನಲ್ಲಿಯೂ ನಷ್ಟ ಆಗಬಹುದು.

ಕನ್ಯಾ ರಾಶಿ :- ಸಂಸಪ್ತಕ ಯೋಗದಿಂದ ನೀವು ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ವೇಳೆ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಗಮನ ಕೊಡಿ, ಹೆಚ್ಚು ಒತ್ತಡ ಹೇರಿಕೊಳ್ಳಬೇಡಿ. ನಿಮ್ಮ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು, ನಿಮಗೆ ಕೋಪ ಬರುವುದು ಸಾಮಾನ್ಯ, ಆದರೆ ವಿವಾದಗಳನ್ನು ಸ್ವಲ್ಪ ತಾಳ್ಮೆಯಿಂದ ನಿಭಾಯಿಸಿ. ದೊಡ್ಡವರ ಜೊತೆ ಕೂತು ಮಾತನಾಡಿದರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

Samsapthaka yoga

ತುಲಾ ರಾಶಿ :- ಸಂಸಪ್ತಕ ಯೋಗದಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ತೊಂದರೆ ಶುರುವಾಗಬಹುದು. ಮನೆಯ ಸಮಸ್ಯೆಗಳಲ್ಲಿಯೇ ಹೆಚ್ಚು ತೊಡಗಿಕೊಳ್ಳುವ ಹಾಗೆ ಆಗಬಹುದು. ಅದರಿಂದ ಮನಸ್ಸಿಗೆ ಅಶಾಂತಿ ಮಾಡಿಕೊಳ್ಳದೆ, ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಬಿಸಿನೆಸ್ ಮಾಡುತ್ತಿರುವವರು ದೊಡ್ಡ ಕಾಂಟ್ರ್ಯಾಕ್ಟ್ ಗಳನ್ನು ತೆಗೆದುಕೊಳ್ಳಬೇಡಿ., ಬಿಸಿನೆಸ್ ವಿಸ್ತರಣೆಗೆ ಇದು ಸೂಕ್ತ ಸಮಯವಲ್ಲ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಸರಿಯಾಗಿ ಪ್ಲಾನ್ ಮಾಡದೆ ಕೆಲಸ ಶುರು ಮಾಡಿದರೆ ಸೋಲು ಕಾಣಬಹುದು. ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಳ್ಳಿ, ಆಗ ಎಲ್ಲವೂ ಒಳ್ಳೆಯದಾಗುತ್ತದೆ..

ಮಕರ ರಾಶಿ :- ಸಂಸಪ್ತಕ ಯೋಗ ನಿಮ್ಮ ಬದುಕಿಗೆ ಹೆಚ್ಚು ನಕಾರಾತ್ಮಕತೆ ತರುತ್ತದೆ. ಎಂಥದ್ದೇ ಘಟನೆ ನಡೆದರು ನೀವು ಆತ್ಮವಿಶ್ವಾಸದಿಂದ ಎದುರಿಸಬೇಕು. ಈ ವೇಳೆ ಆರೋಗ್ಯ ಮತ್ತು ಕುಟುಂಬ ಎರಡು ಕಡೆ ಗಮನವಹಿಸಿ. ಆಹಾರದ ಬಗ್ಗೆ ಗಮನ ಕೊಟ್ಟರೆ ಆರೋಗ್ಯವೂ ಚೆನ್ನಾಗಿರುತ್ತದೆ. ಹೂಡಿಕೆ ಮಾಡುವ ಮೊದಲು ಸರಿಯಾಗಿ ವಿಚಾರಿಸಿ ಎಲ್ಲಾ ತಿಳಿದುಕೊಂಡು ಬಳಿಕ ಹೂಡಿಕೆ ಮಾಡಿ. ಒಂದು ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರಿಂದ ನಿಮ್ಮ ಕೆಲಸಕ್ಕೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಯೋಚಿಸಿ.

Leave a Comment