Sagittarius Horoscope September Month 2023: ಸೆಪ್ಟೆಂಬರ್ ತಿಂಗಳಿನಲ್ಲಿ ಧನು ರಾಶಿಯವರ ಸಮಯ ಚೆನ್ನಾಗಿರುತ್ತದೆ ಹಾಗೆಯೇ ಕೆಲವು ವಿಚಾರಗಳಲ್ಲಿ ಧನು ರಾಶಿಯವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆದರೆ ಇಂದು ನಾವು ಮೊದಲು ಧನು ರಾಶಿಯವರಿಗೆ ಸಿಗುವ 3 ಶುಭ ವಿಚಾರಗಳ ಬಗ್ಗೆ ತಿಳಿಯೋಣ..
ಪಿತ್ರಾರ್ಜಿತ ಆಸ್ತಿ ಅಂದರೆ ಭೂಮಿ ವಿಚಾರದಲ್ಲಿ ನಿಮಗೆ ಲಾಭ ಸಿಗುತ್ತದೆ. ಸೆಪ್ಟೆಂಬರ್ 2ನೇ ವಾರದ ನಂತರ ಸೆಪ್ಟೆಂಬರ್ 17ರ ನಂತರ ಸೂರ್ಯದೇವ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಕುಜ ಗ್ರಹ ಕೂಡ ಇಲ್ಲೇ ಇರಲಿದ್ದಾನೆ. ಇನ್ನು 9ನೇ ಮನೆಯ ಅಧಿಪತಿ ಆಗಿರುವ ಸೂರ್ಯ 10ನೇ ಮನೆಗೆ ಬಂದು ಪಂಚಮಾಧಿಪತಿ ಆಗಿರುವ ಕುಜನ ಜೊತೆಗೆ ಸೇರಿದಾಗ ಪಿತ್ರಾರ್ಜಿತ ಆಸ್ತಿಗಳ ವಿಷಯದಲ್ಲಿ ನಿಮಗೆ ಒಳ್ಳೆಯದಾಗುತ್ತದೆ. ಪಿತ್ರಾರ್ಜಿತ ಆಸ್ತಿ ರೂಪದಲ್ಲಿ ನಿಮಗೆ ಭೂಮಿ ಸಿಗುತ್ತದೆ, ಹಾಗಾಗಿ ಒಂದು ವೇಳೆ ನೀವು ಪಿತ್ರಾರ್ಜಿತ ಆಸ್ತಿ ಪಡೆಯಲು ಪ್ರಯತ್ನ ಮಾಡುತ್ತಿದ್ದರೆ, ಸೆಪ್ಟೆಂಬರ್ 17ರ ನಂತರ ಪ್ರಯತ್ನಪಡುವುದು ಒಳ್ಳೆಯದು.
ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಕೈತುಂಬಾ ಕೆಲಸ ಸಿಗುತ್ತದೆ. ಸ್ವಂತ ಬಿಸಿನೆಸ್ ಅಥವಾ ಕೆಲಸ ಮಾಡುತ್ತಿರುವವರು ಅಂದರೆ ಪೇಂಟರ್, ಲಾಯರ್ ಅಥವಾ ಇನ್ಯಾವುದೇ ಸ್ವಂತ ಕೆಲಸ ಮಾಡುತ್ತಿರುವವರಿಗೆ ಹೆಚ್ಚು ಹೆಚ್ಚು ಕೆಲಸಗಳು ಸಿಗುತ್ತದೆ. ಇವರಿಗೆ ತಿಂಗಳ ಸಂಬಳ ಇರುವುದಿಲ್ಲ, ಕೆಲಸ ಇದ್ದಷ್ಟು ಹಣ ಸಂಪಾದನೆ ಆಗುತ್ತದೆ. ಹೀಗೆ ಯಾವುದೇ ಸ್ವಂತ ಉದ್ಯಮದಲ್ಲಿ ತೊಡಗಿರುವವರಿಗೆ ಕೈತುಂಬಾ ಕೆಲಸದಿಂದ ಬಿಸಿ ಆಗಿದ್ದು, ಇಡೀ ತಿಂಗಳು ಹೆಚ್ಚು ಕೆಲಸ ಸಿಗುತ್ತದೆ. ಆದರೆ ಅದಕ್ಕೆ ಪೇಮೆಂಟ್ ಬರುವಲ್ಲಿ ಸ್ವಲ್ಪ ಸಮಸ್ಯೆ ಎದುರಾಗಬಹುದು. ಅದಕ್ಕೆ ನೀವು ಪರಿಹಾರ ಕಂಡುಕೊಳ್ಳಬಹುದು.
ಮದುವೆ ಆಗದೆ ಇರುವವರಿಗೆ ಅನಿರೀಕ್ಷಿತ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ. ಒಂದು ವೇಳೆ ನೀವು ಇಷ್ಟು ದಿನ ಮದುವೆಗೆ ಪ್ರಯತ್ನಪಟ್ಟು ಒಳ್ಳೆಯ ಸಂಬಂಧ ಸಿಕ್ಕಿಲ್ಲ ಎಂದು ಅಂದುಕೊಳ್ಳುತ್ತಿದ್ದರೆ ಈ ಶ್ರಾವಣ ಮಾಸದಲ್ಲಿ ನೀವು ನಿರೀಕ್ಷೆ ಮಾಡಿರದ ಕಡೆಯಿಂದ ನಿಮಗೆ ಒಳ್ಳೆಯ ಸಂಬಂಧ ಬರುತ್ತದೆ. ನಿಮ್ಮ ಸಂಬಂಧಿಕರು ಅಥವಾ ಇನ್ಯಾವುದಾದರು ಮೂಲದಿಂದ ಇನ್ನು ಮದುವೆ ಆಗಿಲ್ಲದ ಧನು ರಾಶಿಯ ಹುಡುಗ ಅಥವಾ ಹುಡುಗಿಗೆ ಒಳ್ಳೆಯ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ..
ಇದನ್ನೂ ಓದಿ Scorpio Horoscope: ವೃಶ್ಚಿಕ ರಾಶಿಯವರಿಗೆ ಈ ತಿಂಗಳಲ್ಲಿ ಆ ಒಂದು ಪುಣ್ಯವೇ ನಿಮ್ಮನ್ನ ಕಾಪಾಡುತ್ತೆ