ಹಿಂದೂ ಧರ್ಮದಲ್ಲಿ ಹಲವು ಆಚಾರ ವಿಚಾರಗಳಿವೆ ಹಾಗೂ ಕೆಲವೊಂದು ಪದ್ದತಿಗಳು ಹಿಂದಿನಿಂದಲೂ ಕೂಡ ರೂಢಿಗತವಾಗಿ ಬಂದಿದೆ, ಬೆಳಗ್ಗೆ ಎದ್ದ ಕೂಡಲೇ ಮನೆಯ ಅಂಗಳ ಗೊಡಿಸುವುದು ಹಾಗೂ ಮನೆಯನ್ನು ಸ್ವಚ್ಛ ಮಾಡುವುದು ಮನೆಯ ಮುಂದೆ ರಂಗೋಲಿ ಬಿಡಿಸೋದು ಹಾಗೂ ಮನೆಯಲ್ಲಿ ದೇವರ ಪೂಜೆ ಮಾಡುವುದು ಇವೆಲ್ಲವೂ ಕೂಡ ದಿನ ನಿತ್ಯದ ಕೆಲಸವಾಗಿದೆ. ಇನ್ನು ಸಂಜೆಯ ಸಮಯದಲ್ಲಿ ಮನೆಯ ಅಂಗಳವನ್ನು ಸ್ವಚ್ಛ ಮಾಡಿ ಮನೆಯಲ್ಲಿ ದೇವರಿಗೆ ದೀಪ ಹಚ್ಚುವ ಪದ್ಧತಿ ನಮ್ಮ ಪೂರ್ವಜರ ಕಾಲದಿಂದಲೂ ಬೆಳೆದುಕೊಂಡು ಬಂದಿದೆ.
ಆದ್ರೆ ಇತ್ತೀಚಿನ ದಿನಗಳಲ್ಲಿ ಇವುಗಳು ಮರೆಯಾಗುತ್ತಿವೆ ಅನಿಸುತ್ತಿದೆ ಸಮಯಕ್ಕೆ ಸರಿಯಾಗಿ ವಟ ಮಾಡದೇ ಇರುವಂತ ಜನರು ಟಿವಿ ಸಿನಿಮಾ ಧಾರಾವಾಹಿಗಳ ಪ್ರಭಾವದಿಂದ ಹಾಗೂ ಇಂದಿನ ಜೀವನ ಶೈಲಿಯಿಂದ ಇವುಗಳು ಮರೆಯಾಗಿವೆ ಅನಿಸುತ್ತಿದೆ. ಶ್ರೀ ದೈವಜ್ಞ ಪಂಡಿತರು ಹೇಳುವ ಪ್ರಕಾರ ಆಚಾರ ಧರ್ಮಗಳನ್ನ ಪಾಲಿಸುವುದೇ ಆಧ್ಯಾತ್ಮಿಕತೆಗೆ ಅಡಿಪಾಯವಾಗಿದೆ, ಸಂಧಿಕಾಲವೆಂದರೆ ಸೂರ್ಯೋದಯಕ್ಕೂ ಮೊದಲು, ಸೂರ್ಯಾಸ್ತದ ನಂತರ 48 ನಿಮಿಷಗಳ ಸಮಯವನ್ನು ಸಂಧಿಕಾಲವೆಂದು ಅಥವಾ ಪರ್ವಕಾಲವೆಂದು ಕರೆಯಲಾಗುತ್ತದೆ.
ಇನ್ನು ಮನೆಯಲ್ಲಿ ಸಂಜೆಯ ಸಮಯದಲ್ಲಿ ಧೂಪದ್ರವ್ಯ ಸಾಂಬ್ರಾಣಿ ಇತ್ಯಾದಿಗಳನ್ನು ಹಚ್ಚುವುದು. ಇದರಿಂದ ಮನೆಯ ಆವರಣವು ಶುಧ್ಹಿಗೊಳ್ಳುವುದಲ್ಲದೆ ಮನೆಯ ಜನರ ಬಟ್ಟೆಗಳು ಕೂಡ ಶುದ್ಧಿಯಾಗುತ್ತವೆ. ಇನ್ನು ಮನೆಯಲ್ಲಿ ಸಂಜೆ ವೇಳೆ ದೇವರಿಗೆ ದೀಪವನ್ನು ಹಚ್ಚಿದಾಗ ತಲೆಬಾಗಿ ನಮಸ್ಕರಿಸಬೇಕು. ಸಂಧ್ಯಾವಂದನೆಯನ್ನು ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚುವುದರ ಜೊತೆಗೆ ಅಂಗಳದಲ್ಲಿರುವ ತುಳಸಿ ಗಿಡಕ್ಕೂ ದೀಪವನ್ನು ಸಮರ್ಪಿಸಬೇಕು.
ಇನ್ನು ದೇವರಿಗೆ ಹಚ್ಚಿದ ದೀಪವನ್ನು 24 ಗಂಟೆಗಳು ಉರಿಯುವಂತೆ ನೋಡಿಕೊಳ್ಳಬೇಕು ಅಕಸ್ಮಾತಾಗಿ ಇದು ಸಾಧ್ಯವಿಲ್ಲದಿದ್ದರೆ, ಸಂಜೆಯ ಸಮಯದಲ್ಲಿ ಮತ್ತೆ ದೀಪಗಳನ್ನು ಶುದ್ಧಿಗೊಳಿಸಿ ದೇವರಿಗೆ ದೀಪ ಸಮರ್ಪಿಸಬೇಕು.ಸಂಜೆವೇಳೆ ದೇವರಿಗೆ ದೀಪವನ್ನು ಹಚ್ಚಲು ಮುಖ್ಯ ಕಾರಣವೇನು ಅನ್ನೋದನ್ನ ತಿಳಿಯುವುದಾದರೆ, ಮೊದಲನೆಯದಾಗಿ ಎಣ್ಣೆಯ ದೀಪ ಹಚ್ಚುವುದಾರರಿಂದ ಸುರಕ್ಷಿತವಾದ ಸಾತ್ವಿಕ ಅಲೆಗಳ ಕೋಶವೊಂದು ನಿರ್ಮಾಣವಾಗುತ್ತದೆ ಇದರಿಂದಾಗಿ ಮನೆಯಲ್ಲಿರುವವರಿಗೆ ವಾತಾವರಣದಲ್ಲಿ ಇರುವ ಯಾವುದೇ ನಕಾರಾತ್ಮಕ ಶಕ್ತಿಯ ಅಲೆಗಳಿಂದ ಯಾವುದೇ ಸಂಕಷ್ಟಗಳು ಬರದಂತೆ ಸುರಕ್ಷಿತವಾಗಿರುತ್ತಾರೆ.
ಇನ್ನು ಈ ಕಾರಣಕ್ಕಾಗಿಯೇ ಸಾಕಷ್ಟು ಗ್ರಂಥಗಳಲ್ಲಿ ಸಂಜೆಯ ಒಳಗೆ ನಾವೆಲ್ಲರೂ ಮನೆ ಸೇರಬೇಕೆಂದು ಹೇಳಲಾಗಿದೆ, ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳಿಂದ ನಮಗೆ ತೊಂದರೆಯಾಗದಿರಲೆಂದು ಹೀಗೆ ಹೇಳಲಾಗಿದೆ. ವಿಶೇಷವಾಗಿ ತುಳಸಿ ಗಿಡದ ಬುಡದಲ್ಲಿ ದೀಪ ಬೆಳಗಿಸಿದರೆ ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ಸೃಷ್ಟಿ ಆಗುತ್ತದೆ. ಹಾಗೆ ದೀಪ ಹಚ್ಚುವಾಗ ಈ ಮಂತ್ರವನ್ನು ಜಪಿಸುವುದನ್ನು ಮರೆಯದಿರಿ ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ದನ ..ದೀಪೊ ಹರತು ಮೇ ಪಾಪಂ ದೀಪ ಜ್ಯೋತಿ ನಮೋಸ್ತುತೇ. ಈ ಮಂತ್ರವನ್ನು ಹೇಳಿ ದೀಪ ಹಚ್ಚುವುದರಿಂದ ನಿಮ್ಮ ಮನೆಯ ಹತ್ತಿರ ನಕಾರಾತ್ಮಕ ಶಕ್ತಿ ಬರುವುದಕ್ಕೆ ಯಾವುದೇ ಸಾಧ್ಯತೆಗಳು ಇರುವುದಿಲ್ಲ.