Kannada Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನಿಗೆ ವಿಶೇಷವಾದ ಸ್ಥಾನವಿದೆ. ಮಂಗಳದೇವನು ಧೈರ್ಯ, ಶೌರ್ಯ, ಮದುವೆ, ಭೂಮಿ ಇವುಗಳ ಪ್ರತೀಕ.. ಮಂಗಳನು ಪ್ರಸ್ತುತ ಕನ್ಯಾ ರಾಶಿಯಲ್ಲಿದ್ದು, 2023ರ ಆಕ್ಟೊಬರ್ 3ರವರೆಗು ಕನ್ಯಾರಾಶಿಯಲ್ಲೇ ಇರಲಿದ್ದಾನೆ. ಆಕ್ಟೊಬರ್ 3ರಂದು ಸ್ಥಾನ ಬದಲಾವಣೆ ಮಾಡಿ ತುಲಾ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಬದಲಾವಣೆಯ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ 3 ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯ ಪರಿಣಾಮ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :– ಮಂಗಳನೇ ಅಧಿಪತಿ ಆಗಿರುವ ಈ ರಾಶಿಗೆ ಮಂಗಳನ ಸ್ಥಾನ ಬದಲಾವಣೆ ಇಂದ ಎಲ್ಲವೂ ಒಳ್ಳೆಯದೇ ಆಗುತ್ತದೆ. ಬದುಕಿನಲ್ಲಿ ನೀವು ಊಹೆ ಮಾಡಿರದ ಹಂತಕ್ಕೆ ದೊಡ್ಡ ಬದಲಾವಣೆ ಆಗಲಿದ್ದು, ಅದೃಷ್ಟ ನಿಮ್ಮ ಬದುಕಿನಲ್ಲಿ ಉತ್ತಮ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಅರ್ಧಕ್ಕೆ ಬಾಕಿ ಇರುವ ಎಲ್ಲಾ ಕೆಲಸಗಳು ಈ ವೇಳೆ ಪೂರ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ.
ಕನ್ಯಾ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ಇವರಿಗೆ ಹಣಕಾಸಿನ ವಿಷಯದಲ್ಲಿ ಉತ್ತಮ ಫಲ ನೀಡುತ್ತದೆ. ಈ ವೇಳೆ ಆಗುವ ಧನಲಾಭದಿಂದ ಬಹಳ ಸಂತೋಷ ಸಿಗುತ್ತದೆ. ಉದ್ಯೋಗದಲ್ಲಿ ಕೂಡ ಎಲ್ಲವೂ ಚೆನ್ನಾಗಿರುತ್ತದೆ. ನೀವಾಡುವ ಮಾತುಗಳ ಗಟ್ಟಿತನದಿಂದ ಎಲ್ಲರೂ ನಿಮ್ಮ ಮಾತನ್ನು ಕೇಳುತ್ತಾರೆ ಹಾಗೆಯೇ ಪಾಲಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಈ ವೇಳೆ ನೀವು ಮನೆ, ಆಸ್ತಿ ಅಥವಾ ಕಾರ್ ಖರೀದಿ ಮಾಡಬಹುದು.
ವೃಶ್ಚಿಕ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇಂದ ಇವರಿಗೆ ಹೆಚ್ಚು ಲಾಭವಾಗುತ್ತದೆ. ಈ ವೇಳೆ ನಿಮ್ಮ ಆದಾಯ ಕೂಡ ಜಾಸ್ತಿ ಆಗುತ್ತದೆ, ನಿಮ್ಮ ಸಂಬಳ ಜಾಸ್ತಿಯಾಗುತ್ತದೆ. ಹಣ ಗಳಿಕೆಗೆ ಬೇರೆ ಬೇರೆ ದಾರಿ ಸಿಗುತ್ತದೆ..ಈ ಹಿಂದೆ ಮಾಡಿರುವ ಹೂಡಿಕೆ ಇಂದ ಲಾಭ ಜಾಸ್ತಿ ಸಿಗುತ್ತದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇರುವವರಿಗೆ ಇದು ಈ ವೇಳೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಸಂಗಾತಿಯ ಜೊತೆಗೆ ಉತ್ತಮ ಬಾಂಧವ್ಯ ಇರುತ್ತದೆ.
ಇದನ್ನೂ ಓದಿ ಸಂಸಪ್ತಕ ಯೋಗ: ಈ 5 ರಾಶಿಯವರ ಬದುಕೇ ಬದಲಾಗಲಿದೆ, 30 ವರ್ಷಗಳ ನಂತರ ರೂಪುಗೊಂಡಿರುವ ಯೋಗ..