ಅಕ್ಟೋಬರ್ ತಿಂಗಳಿನಲ್ಲಿ ದ್ವಾದಶ ರಾಶಿಗಳ ಫಲಾನುಫಲ ಹೇಗಿರಲಿದೆ? ಈ ರಾಶಿಯವರ ಬದುಕಿನಲ್ಲಿ ಅದ್ಭುತವೇ ಸಂಭವಿಸಲಿದೆ!

Horoscope October 2023: 12 ತಿಂಗಳಿನಲ್ಲಿ ಅಕ್ಟೋಬರ್ ತಿಂಗಳು ಬಹಳ ಮಹತ್ವಪೂರ್ಣವಾಗಿರಲಿದ್ದು, ಈ ಸಂದರ್ಭದಲ್ಲಿ ಪಿತೃ ದೇವತೆಗಳ ಆಶೀರ್ವಾದದೊಂದಿಗೆ ಗ್ರಹಗಳ ಸ್ಥಾನಪಲ್ಲಟವು ಅಧಿಕವಾಗಿರಲಿದೆ. ಅಕ್ಟೋಬರ್ ಒಂದನೇ ತಾರೀಕು ಕನ್ಯಾ ರಾಶಿಗೆ ಬುಧ ಪ್ರವೇಶ ಮಾಡಿದರೆ, ಅದೇ ದಿನ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರಂತೆ ಅಕ್ಟೋಬರ್ 3ನೇ ತಾರೀಖಿನಂದು ಕುಜನು ತುಲಾ ರಾಶಿಯನ್ನು ಪ್ರವೇಶಿಸಿದರೆ, 18ನೇ ತಾರೀಕಿನಂದು ಸೂರ್ಯ ಮತ್ತು ಬುಧ ಇಬ್ಬರ ಸಂಯೋಗ ತುಲಾ ರಾಶಿಯಲ್ಲಿ ನಡೆಯಲಿದೆ. ಹೇಗೆ ತಿಂಗಳಾಂತ್ಯದಲ್ಲಿ ರಾಹು ಮೀನ ರಾಶಿಯನ್ನು ಹಾಗೂ ಕೇತು ಕನ್ಯಾ ರಾಶಿಯನ್ನು ಪ್ರವೇಶಿಸುವುದರಿಂದ ಗ್ರಹಗಳ ಲೆಕ್ಕಾಚಾರದ ಮೇಲೆ ದ್ವಾದಶ ರಾಶಿಗಳ ಫಲಾನುಫಲ ಹೇಗಿರಲಿದೆ?

ಮೇಷ ರಾಶಿ: ಈ ತಿಂಗಳು ನಿಮ್ಮ ರಾಶಿಯಲ್ಲಿರುವಂತಹ ಕೇತು ಆರ್ಥಿಕವಾಗಿ ಅನುಗ್ರಹವನ್ನು ನೀಡಲಿದ್ದು, ಇದರಿಂದ ಹೆಚ್ಚಿನ ಧನ ಲಾಭ ಮತ್ತು ಶಕ್ತಿಯನ್ನು ಹೊಂದುವಿರಿ, ಯಾವುದೇ ಅಡೆ-ತಡೆಗಳು ಎದುರಾದರೂ ಕೂಡ ನಿಮ್ಮ ಬುದ್ಧಿ ಶಕ್ತಿಯಿಂದ ಎಲ್ಲವನ್ನು ಮೆಟ್ಟಿನಿಂದ ನೀವೊಂದುಕೊಂಡಿರುವ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು. ಗುರು ನಿಮ್ಮ ರಾಶಿಯಲ್ಲಿ ಇರುವುದರಿಂದ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಿದ್ದಲ್ಲಿ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆಯುವ ಶುಭ ಮಾಸ ಇದಾಗಿದೆ.

ವೃಷಭ ರಾಶಿ: ನಿಮ್ಮ ರಾಶಿ ಚಕ್ರದ ನಾಲ್ಕನೇ ಮನೆಯಲ್ಲಿರುವಂತಹ ಶುಕ್ರನು ಶುಭ ಲಾಭವನ್ನು ಕರುಣಿಸಲಿದ್ದು, ಇದರಿಂದ ಹೊಸ ಮನೆ ಖರೀದಿ ಯೋಗವಿದೆ. ಸ್ವಂತ ಉದ್ಯಮದಲ್ಲಿ ಹೆಚ್ಚಿನ ಲಾಭ, ಈ ತಿಂಗಳನ್ನು ಪರಿವರ್ತನೆಯ ಮಾಸ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಅವಧಿಯಲ್ಲಿ ಹೆಚ್ಚಿನ ಹಣವನ್ನು ಸಂಪಾದಿಸಲಿದ್ದೀರಿ ಹಾಗೂ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ.

ಮಿಥುನ ರಾಶಿ: ಹತ್ತನೆ ಮನೆಯಲ್ಲಿ ರಾಹು ನಿಮ್ಮ ರಾಶಿಯನ್ನು ಪ್ರವೇಶಿಸಲಿರುವುದರಿಂದ ಅಕ್ಟೋಬರ್ ಅಷ್ಟು ಲಾಭದಾಯಕವಾಗಿಲ್ಲ. ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವರು, ಉದ್ಯೋಗ ಕ್ಷೇತ್ರದಲ್ಲಿ ಸುಖ ಸುಮ್ಮನೆ ಕಿರಿಕಿರಿ ಹಾಗೂ ಮನಸ್ತಾಪವನ್ನು ಅನುಭವಿಸುವಿರಿ.

ಕಟಕ ರಾಶಿ: ನಿಮ್ಮ ರಾಶಿಯ 9ನೇ ಮನೆಯಲ್ಲಿ ರಾಹು ಇದ್ದು, ಶನಿಯ ಕೃಪೆಯು ಇಲ್ಲದಿರುವುದರಿಂದ ಸಮಸ್ಯೆಗೆ ಸಿಲುಕಿ ಕೊಳ್ಳುವಿರಿ ಸಾಲಭಾದೆ ನಿಮ್ಮನ್ನು ಇನ್ನಷ್ಟು ಬಾದಿಸಲಿದೆ. ವ್ಯಾಪಾರದಲ್ಲಿ ನಿರೀಕ್ಷಿಸಿದಂತಹ ಲಾಭ ದೊರಕುವುದಿಲ್ಲ.

ಸಿಂಹ ರಾಶಿ: ಶುಕ್ರನ ನಿಮ್ಮ ರಾಶಿಯನ್ನು ಪ್ರವೇಶಿಸಲಿರುವುದರಿಂದ ಹೆಚ್ಚಿನ ಲಾಭ ನಿಮ್ಮದಾಗಲಿದೆ. ಪತಿ ಪತ್ನಿಯರಲ್ಲಿ ಪ್ರೀತಿ, ವ್ಯಾಪಾರದಲ್ಲಿ ಪ್ರಗತಿ ಹೊರಗಡೆ ಆಹಾರ ಸೇವಿಸುವಾಗ ಜಾಗ್ರತೆ ಇರಲಿ, ಅದರಿಂದ ಆರೋಗ್ಯ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ.

ಕನ್ಯಾ ರಾಶಿ: ನಿಮ್ಮ ರಾಶಿಗೆ ಗುರು ಬಲ ಇಲ್ಲದಿರುವುದರಿಂದ ಪ್ರಯಾಣದಲ್ಲಿ ಸಮಸ್ಯೆಯಾಗಲಿದೆ, ಕೃಷಿ ಚಟುವಟಿಕೆ ಮಾಡುತ್ತಿರುವವರು ಕಿರಿಕಿರಿಯನ್ನು ಅನುಭವಿಸುವಿರಿ, ಆದಷ್ಟೂ ಮಾತನಾಡದೆ ಮೌನವನ್ನು ವಹಿಸುವುದು ಉತ್ತಮ.

ತುಲಾ ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ಗುರು ಬಲವು ಹೇರಳವಾಗಿರುವುದರಿಂದ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿದರು ಅದರಲ್ಲಿ ಲಾಭವನ್ನು ಪಡೆಯುವಿರಿ, ಈ ತಿಂಗಳು ರಾಹು ನಿಮ್ಮ ರಾಶಿಯ 6ನೇ ಮನೆಯನ್ನು ಪ್ರವೇಶಿಸಲಿದ್ದು, ಈ ತಿಂಗಳು ನಿಮ್ಮ ಅದೃಷ್ಟ ದುಪ್ಪಟ್ಟಾಗಲಿದೆ.

ವೃಶ್ಚಿಕ ರಾಶಿ: ಗುರು ಹಾಗೂ ಶನಿಯ ಬಲ ಇಲ್ಲದಿರುವುದರಿಂದ ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕುವುದಾಗಲಿ ಅಥವಾ ಹೊಸ ಮನೆ ಜಮೀನನ್ನು ಖರೀದಿಸುವ ಯೋಜನೆಯನ್ನು ಮಾಡದಿರುವುದು ಒಳಿತು. ಸುಖ ಸುಮ್ಮನೆ ಸುಮ್ಮನೆ ಹಣವ್ಯಯ, ವಿದ್ಯಾರ್ಥಿಗಳಿಗೆ ಹಿನ್ನಡೆ ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ.

ಧನು ರಾಶಿ: ಶನಿ ಹಾಗು ಗುರುವಿನ ಬಲ ಇರುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ ಕೌಟುಂಬಿಕ ಸಂತೋಷ, ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಉದ್ಯೋಗ ಪ್ರಾಪ್ತಿ.

ಮಕರ ರಾಶಿ: ಹಲವಾರು ದಿನಗಳಿಂದ ಬರಬೇಕಿದ್ದಂತಹ ಹಣವು ಶನಿಯ ಅನುಗ್ರಹದಿಂದ ನಿಮ್ಮ ಕೈ ಸೇರಲಿದ್ದು, ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ಜಮೀನು ಅಥವಾ ಸೈಟು ಖರೀದಿಸುವ ಶುಭಯೋಗ ನಿಮಗಿದ್ದು, ಯಾವುದಾದರೂ ಹೊಸ ಕೆಲಸ ಮಾಡುವ ಮುನ್ನ ಸ್ನೇಹಿತರ ಅಥವಾ ಗುರುಹಿರಿಯರ ಸಲಹೆಯನ್ನು ಪಡೆಯುವುದು ಒಳಿತು.

ಕುಂಭ ರಾಶಿ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ, ಹೊಸ ವಾಹನ ಖರೀದಿಸುವ ಯೋಗವು ಒಲಿದು ಬಂದಿದೆ. ಜೀವನದಲ್ಲಿ ಇದ್ದಂತಹ ಒತ್ತಡಗಳು ಕಡಿಮೆಯಾಗಿ ಹಲವು ಸಮಸ್ಯೆಗಳು ಕೂಡ ಕೊನೆಯಾಗುತ್ತವೆ.

ಮೀನಾ ರಾಶಿ: ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಶನಿಯ ದಯದಿಂದಾಗಿ ನೀವಂದುಕೊಂಡಿರುವಂತಹ ಕೆಲಸ ದೊರಕಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆಗೆ ಎಚ್ಚರ ವಹಿಸಿ. 12 ರಾಶಿಗಳ ಪೈಕಿ ನಿಮ್ಮ ರಾಶಿ ಯಾವುದೆಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಇದನ್ನೂ ಓದಿ ಇಂದಿನ ಭಾದ್ರಪದ ಹುಣ್ಣಿಮೆಯ ವಿಶೇಷ ರಾಶಿ ಫಲ! ಈ ರಾಶಿಯವರಿಗಂತೂ ಬೇಡ ಬೇಡ ಎಂದರು ಅದೃಷ್ಟ ಹುಡುಕಿಕೊಂಡು ಬರುತ್ತೆ

Leave a Comment