Horoscope Kannada: ಶನಿದೇವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತಮವಾದ ಸ್ಥಾನ ನೀಡಲಾಗಿದೆ. ಶನಿದೇವ ನಿಧಾನವಾಗಿ ಚಲಿಸುವ ಗ್ರಹ ಕೂಡ ಹೌದು, ಶನಿದೇವರು ಕರ್ಮಫಲದಾತ ಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಅವರಿಗೆ ಶುಭ ಅಥವಾ ಅಶುಭ ಫಲ ಶನಿದೇವರಿಂದ ಸಿಗುತ್ತದೆ. ಶನಿದೇವರು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಆಗಿದ್ದು, ಪ್ರಸ್ತುತ ಶನಿದೇವರು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಸಾಗುತ್ತಿದ್ದು, 2023ರ ನವೆಂಬರ್ 4ರಂದು ಶನಿದೇವರ ನೇರಚಲನೆ ಶುರುವಾಗಲಿದೆ. ಈ ವೇಳೆ ಶನಿದೇವರ ಆಶೀರ್ವಾದ ಮತ್ತು ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಈ ರಾಶಿಯ ಕರ್ಮದ ಮನೆಯಲ್ಲಿ ಶನಿದೇವರ ಸಂಚಾರ ಇರುವುದರಿಂದ ನಿಮ್ಮ ಬದುಕಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ನಿಮ್ಮ ಕೆಲಸದಲ್ಲಿ ಉತ್ತಮ ಬದಲಾವಣೆ ಇರುತ್ತದೆ. ಬಹಳ ಸಮಯದಿಂದ ಬಾಕಿ ಇರುವ ಕೆಲಸಗಳು ಈಗ ಪೂರ್ತಿಯಾಗುತ್ತದೆ, ಇದರಿಂದ ಖುಷಿ ಸಿಗುತ್ತದೆ. ಈ ವೇಳೆ ನಿಮಗೆ ಹಣಕಾಸಿನ ಲಾಭವಾಗುತ್ತದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಮಿಥುನ ರಾಶಿ :– ಶನಿದೇವರಿಂದ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಅದೃಷ್ಟ ಸಾಥ್ ನೀಡಿದರು ಕೂಡ, ಯಶಸ್ಸು ಪಡೆಯಲು ನಿಮ್ಮ ಪ್ರಯತ್ನ ಕೂಡ ಇರಬೇಕು. ಶನಿದೇವರ ನೇರ ಚಲನೆ ಇಂದ ನಿಮ್ಮ ಬದುಕಿನಲ್ಲಿ ಏಳಿಗೆ ಮತ್ತು ಆರ್ಥಿಕವಾದ ಭದ್ರತೆಯನ್ನು ಒದಗಿಸುತ್ತದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನ್ಯಾಯಕ್ಕಾಗಿ ಹೋರಾಟ ಮಾಡಿದರೆ, ಶನಿದೇವ ನಿಮ್ಮ ಜೊತೆಗಿರುತ್ತಾನೆ. ಕಾನೂನಿಗೆ ಸೇರಿದ ವಿಷಯಗಳಲ್ಲಿ ಅನುಕೂಲವಾಗುತ್ತದೆ. ನ್ಯಾಯದ ಹೋರಾಟಕ್ಕೆ ಶನಿದೇವರು ಕೂಡ ನಿಮಗೆ ಸಾಥ್ ಕೊಡುತ್ತಾನೆ..ಶನಿದೇವರ ಪ್ರಭಾವದಿಂದ ಸಮಾಜದಲ್ಲಿ ಪ್ರತಿಷ್ಠೆ ಮತ್ತು ಸ್ಥಾನದಿಂದ ಸ್ನೇಹಿತರಿಂದ ಮತ್ತು ಜೊತೆಯಲ್ಲಿ ಕೆಲಸ ಮಾಡುವವರಿಂದ ಮೆಚ್ಚುಗೆ ಪಡೆಯುತ್ತೀರಿ. ಈ ವೇಳೆ ನಿಮಗೆ ಹೊಸ ಅವಕಾಶ ಸಿಗಲಿದ್ದು, ಇದರಿಂದ ಹೊಸ ಸಂಬಂಧ ಶುರುವಾಗಬಹುದು.
ಸಿಂಹ ರಾಶಿ :– ಶನಿದೇವರ ನೇರ ಸಂಚಾರ ನಿಮಗೆ ಭರವಸೆ ನೀಡುತ್ತದೆ. ಇದರಿಂದ ಪಾಸಿಟಿವ್ ಬದಲಾವಣೆ ಉಂಟಾಗುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಇದರಿಂದ ಆಸ್ತಿ ಗಳಿಕೆ ಹೆಚ್ಚಾಗುತ್ತದೆ. ಕೋರ್ಟ್ ಕೇಸ್ ಗಳು ಸುಲಭವಾಗಿ ಪರಿಹಾರ ಆಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಬದುಕಿನಲ್ಲಿ ತೃಪ್ತಿ ಕಾಣುತ್ತೀರಿ. ಗಂಡ ಹೆಂಡತಿಯ ನಡುವೆ ಸಮಸ್ಯೆ ಇದ್ದರೆ, ಈ ವೇಳೆ ಪರಿಹಾರ ಆಗುತ್ತದೆ. ನಿಮ್ಮ ಸ್ನೇಹಿತರು ಅಥವಾ ನಿಮ್ಮ ಬಳಗದವರಿಂದ ನಿಮಗೆ ಮೆಚ್ಚುಗೆ ಸಿಗುತ್ತದೆ. ಇದರಿಂದ ನಿಮ್ಮ ಸಾಮಾಜಿಕ ಸ್ಥಿತಿ ಉತ್ತಮವಾಗುತ್ತದೆ.
ಮಕರ ರಾಶಿ :– ಶನಿದೇವರ ನೇರ ಚಲನೆ ಇಂದ ನಿಮಗೆ ಹೆಚ್ಚು ಅನುಕೂಲ ಸಿಗುತ್ತದೆ. ಈ ವೇಳೆ ಶನಿದೇವರು ನಿಮ್ಮ ಜನ್ಮಜಾತಕದಲ್ಲಿ ಆಸ್ತಿಗೆ ಸಂಬಂಧಿಸಿದ ಮನೆಯ ಕಡೆ ಸಂಚಾರ ಮಾಡುತ್ತಾರೆ. ಹಾಗಾಗಿ ಹಣಕಾಸಿನ ಲಾಭ ಮತ್ತು ಸಮೃದ್ಧಿ ಉಂಟಾಗುತ್ತದೆ. ಉದ್ಯೋಗ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಏಳಿಗೆ ಮತ್ತು ಪ್ರಗತಿ ಕಾಣುತ್ತೀರಿ. ಈ ವೇಳೆ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಜೊತೆಗೆ ಕೆಲಸದ ಅವಕಾಶ ಸಿಗುತ್ತದೆ.
ಇದನ್ನೂ ಓದಿ: ಸೂರ್ಯದೇವನ ಕೃಪೆಯಿಂದ ಈ 4 ರಾಶಿಗಳಿಗೆ ಒಂದು ತಿಂಗಳು ಭಾರಿ ಅದೃಷ್ಟ..