ಎಲ್ಲರಿಗೂ ಹೊಸ ಮನೆಯನ್ನು ಕಟ್ಟಬೇಕೆಂಬ ಆಸೆ ಇರುವುದು ಸಹಜ.ಆದರೆ ಎಲ್ಲರನ್ನೂ ಕಾಡುವ ಪ್ರಶ್ನೆ ಎಂದರೆ ಮನೆಯ ಮುಖ್ಯದ್ವಾರ ಅಥವಾ ಸಿಂಹದ್ವಾರ ಯಾವ ದಿಕ್ಕಿನಲ್ಲಿರಬೇಕು ಎಂಬುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರ ಯಾವ ದಿಕ್ಕಿಗೆ ಇದ್ದರೆ ಒಳ್ಳೆಯದು ಎಂದು ನಾವು ಅದರ ಬಗ್ಗೆ ತಿಳಿಯೋಣ.
ಜೀವನದಲ್ಲಿ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹೇಳುತ್ತಾರೆ.ಜೀವನದಲ್ಲಿ ಮದುವೆ ಆಗುವುದು ಮನೆ ಕಟ್ಟುವುದು ಒಂದೇ ಬಾರಿ.ಎಲ್ಲರೂ ಸ್ವಂತ ಮನೆಯನ್ನು ಹೊಂದಿರುವುದಿಲ್ಲ.ಎಲ್ಲರ ಆರ್ಥಿಕ ಪರಿಸ್ಥಿತಿಯು ಒಂದೇ ಆಗಿರುವುದಿಲ್ಲ ಕೆಲವರು ಬಾಡಿಗೆ ಮನೆಯನ್ನು ಹೊಂದಿರುತ್ತಾರೆ.ಅವರವರ ಉದ್ಯೋಗಕ್ಕಾಗಿ ಅಥವಾ ತಮ್ಮ ಜೀವನವನ್ನು ನಡೆಸುವ ಉದ್ದೇಶಕ್ಕಾಗಿ ಮನೆಯನ್ನು ಬದಲಾಯಿಸುವ ಅವಶ್ಯಕತೆ ಇರುತ್ತದೆ.
ಜ್ಯೋತಿಷ್ಯಶಾಸ್ತ್ರದಲ್ಲಿ 12 ರಾಶಿಗಳನ್ನು ಮಾಡಲಾಗಿದೆ. ಹನ್ನೆರಡು ರಾಶಿಗಳನ್ನು ನಾಲ್ಕು ಭಾಗಗಳಾಗಿ ಗುಂಪು ಮಾಡಲಾಗಿದೆ.ಮೊದಲನೆ ಭಾಗ ಮೇಷ, ಧನಸ್ಸು, ಸಿಂಹ.ವೃಷಭ, ಕನ್ಯಾ, ಮಕರ ಇದು ಎರಡನೇ ಭಾಗ.ಮಿಥುನ, ಕುಂಭ,ತುಲಾ ಇದು ಮೂರನೇ ಭಾಗ.ಮೀನ, ವೃಶ್ಚಿಕ, ಕಟಕ ಇದು ನಾಲ್ಕನೇ ಭಾಗ.ಒಬ್ಬೊಬ್ಬರಿಗೆ ಒಂದೊಂದು ದಿಕ್ಕಿನ ಮನೆಗಳು ಶುಭಫಲ ವಾಗಿರುತ್ತದೆ.ಮೊದಲನೇ ಭಾಗದ ರಾಶಿ ಹೊಂದಿದವರು ಪೂರ್ವದಿಕ್ಕಿಗೆ ಮನೆಯ ಮುಖ್ಯದ್ವಾರವನ್ನು ಕಟ್ಟಬೇಕು.
ಇನ್ನು ಎರಡನೇ ಭಾಗದವರು ದಕ್ಷಿಣ ದಿಕ್ಕಿಗೆ ಮುಖ್ಯದ್ವಾರವನ್ನು ಕಟ್ಟಬೇಕು.ಬೇಕಾದರೆ ಪೂರ್ವದಿಕ್ಕಿಗೆ ಕಟ್ಟಬಹುದು.ಮೂರನೇ ಭಾಗದವರು ಪಶ್ಚಿಮ ದಿಕ್ಕಿಗೆ ಕಟ್ಟಬೇಕು.ದಕ್ಷಿಣ ರಾಶಿಗೆಆಗಿಬರುವುದೇ ಇಲ್ಲ.ಇನ್ನು ಉಳಿದ ನಾಲ್ಕನೇ ನೇ ಭಾಗದವರು ಉತ್ತರಕ್ಕೆ ಮಹಾದ್ವಾರವನ್ನು ಕಟ್ಟಬೇಕು.