ಗ್ರಹಚಾರ ಫಲ ಅಂದರೇನು ಶನಿಯ ಪ್ರಭಾವ 12 ರಾಶಿಗಳ ಮೇಲೆ ಹೇಗಿರುತ್ತೆ ಗೊತ್ತೇ?

ಆಧ್ಯಾತ್ಮಿಕವಾಗಿ ಹಲವು ವಿಚಾರಗಳ ಮೇಲೆ ನಾವುಗಳು ನಂಬುತ್ತೇವೆ ಹಾಗು ಅವುಗಳ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದಿದ್ದರೂ ಕೂಡ ಅದನ್ನು ಹೆಚ್ಚಾಗಿ ನಂಬುವ ಭರವಸೆ ನಮ್ಮಲ್ಲಿ ಇರುತ್ತದೆ. ಕೆಲವರಿಗೆ ಗ್ರಾಕಾಚರ ಫಲವೇನು ಅಂದರೆ ಗೊತ್ತಿರೋದಿಲ್ಲ ಅಷ್ಟೇ ಅಲ್ಲದೆ ಗ್ರಹಚಾರ ಫಲದಿಂದ ಏನಾಗುತ್ತದೆ ಇದು ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳುವ ಚಿಕ್ಕ ಪ್ರಯತನವನ್ನು ಮಾಡೋದಾದರೆ, ಗ್ರಹ ಗೋಚಾರವೆಂದರೆ ನವಗ್ರಹಗಳು ಭೂ ಚಕ್ರದ ಸುತ್ತಲೂ ಮೇಷ ದ್ವಾದಶ ರಾಶಿಗಳನ್ನು ಸುತ್ತುವುದು. ಒಂದು ಸುತ್ತು ಸುತ್ತಲು ಕೆಲವು ಗ್ರಹಗಳು ಕಡಿಮೆ ಕಾಲವನ್ನು, ಇನ್ನು ಕೆಲವು ಗ್ರಹಗಳು ಜಾಸ್ತಿ ಕಾಲವನ್ನು ತೆಗೆದುಕೊಳ್ಳುತ್ತದೆ.

ಭೂಮಂಡಲದಲ್ಲಿ ಭೂಮಿಯನ್ನು ಸುತ್ತಲೂ ತನ್ನ ಸುತ್ತಲಿರುವ ಗ್ರಹಗಳು ಹೇಗೆ ಸಂಚಾರವನ್ನು ನಡೆಸುತ್ತವೆ ಅನ್ನೋದನ್ನ ನೋಡುವುದೆ ಮೊದಲನೆಯದಾಗಿ ಭೂ ಚಕ್ರವನ್ನು ಸುತ್ತಲು ಚಂದ್ರ 1 ತಿಂಗಳು, ಸೂರ್ಯ ಬುಧ ಶುಕ್ರ ಕುಜರು ಸುಮಾರು 1 ವರ್ಷವನ್ನು ಗುರು 12 ವರ್ಷಗಳನ್ನು, ರಾಹು ಕೇತುಗಳು 18 ವರ್ಷಗಳನ್ನು, ಶನಿಯು 30 ವರ್ಷಗಳನ್ನು ತೆಗೆದು ಕೊಳ್ಳುತ್ತದೆ. ಹೀಗೆ ನವಗ್ರಹಗಳು ಕುಂಡಲಿಯಲ್ಲಿ ಸುತ್ತುವಾಗ ಚಂದ್ರನಿರುವ ರಾಶಿಯಿಂದ ಗ್ರಹ ಇರುವ ರಾಶಿಯವರೆಗೆ ಎಣಿಸಿದರೆ ಬರುವ ಸಂಖ್ಯೆಗನುಗುಣವಾಗಿ ಗ್ರಹದ ಫಲ ತಾತ್ಕಾಲಿಕವಾಗಿ ಸಿಗುತ್ತದೆ.

ಇನ್ನು ಮುಖ್ಯವಾಗಿ ತಿಳಿಯಬೇಕಾದ ವಿಷಯ ಏನು ಅನ್ನೋದನ್ನ ಹೇಳುವುದಾದರೆ, ಗ್ರಹಚಾರದ ಫಲ ತಿಳಿಯಬೇಕಾದರೆ ಮುಖ್ಯವಾಗಿ ವಿಷಯವೇನೆಂದರೆ ಬಹು ಮಂದವಾಗಿ ಸಂಚರಿಸುವ ಗ್ರಹದ ಫಲ ಅನುಭವಕ್ಕೆ ಬರುತ್ತದೆ. ಹೌದು ಭೂಮಂಡಲದಲ್ಲಿ ಭೂಮಿ ಸೂರ್ಯ ಚಂದ್ರ ಹಾಗೂ ಹಲವು ಗ್ರಹಗಳನ್ನು ಕಾಣಬಹುದಾಗಿದೆ, ಅವುಗಳಲ್ಲಿ ಬಹುಬೇಗನೆ ಸಂಚರಿಸುವ
ಗ್ರಹದ ಫಲ ಅಷ್ಟು ಅನುಭವಕ್ಕೆ ಬರುವುದಿಲ್ಲ. ಆದ್ರೆ ಗ್ರಹಗಳೆಲ್ಲಾ ಅತ್ಯಂತ ಮಂದವಾಗಿ ಸಂಚರಿಸುವ ಶನಿಗ್ರಹದ ಗೋಚಾರ ಹೆಚ್ಚು ಅನುಭವಕ್ಕೆ ಬರುತ್ತದೆ.

ಶನಿ ಮನುಷ್ಯನ ಜನ್ಮರಾಶಿಯಿಂದ 12ನೆ ರಾಶಿಗೆ ಬಂದಾಗ ಏಳರಾಷ್ಟ್ರ ಶನಿ ಕಾಟ ಅಥವಾ ಸಾಡೆಸಾತ್‌ ಪ್ರಾರಂಭವಾಗುತ್ತದೆ ಎಂದು ಎಲ್ಲರಿಗೂ ತಿಳಿಯುತ್ತದೆ, ಶನಿಯು ಮೇಲ್ಕಂಡ 12ನೇ ರಾಶಿ, ಜನ್ಮರಾಶಿ, ಮತ್ತು ಜನ್ಮರಾಶಿಗೆ ಎರಡನೇಯ ರಾಶಿಗಳಲ್ಲಿ ಇರುವ ಒಟ್ಟು ಕಾಲ ಅಥವಾ ಏಳೂವರೆ ವರ್ಷಕಾಲ ಮನುಷ್ಯನಿಗೆ ಬಹು ಕಷ್ಟದಾಯಕವಾಗಿರುತ್ತದೆ. ಈ ಏಳರಾಷ್ಟ್ರ ಶನಿ ಕಾಟ ಅಥವಾ ಏಳುವರೆ ವರ್ಷ ಕಾಲದಲ್ಲಿನ ಮೊದಲಿನ ಎರಡುವರೆ ವರ್ಷಗಳು ಅನೇಕರಿಗೆ ಹೆಚ್ಚು ಕಷ್ಟದಾಯಕವಾಗುವುದು ಅನುಭವದ ಮಾತು. ಆದ್ದರಿಂದ ಈ ಶನಿ ಕಾಟದ ಕಾಲದಲ್ಲಿ ಜಾತಕನಿಗೆ ಗುರುಬಲ ಇದ್ದಾಗ ಕಾರ್ಯಸಿದ್ಧಿ ಕುಟುಂಭದಲ್ಲಿ ವಿವಾಹಾದಿ ಶುಭ ಕೆಲಸಗಳು ನಡೆಯುತ್ತದೆ. ಪಾಪ ಗ್ರಹಗಳಾದ ಶನಿ, ರವಿ, ರಾಹು, ಕೇತು ಜನ್ಮ ರಾಶಿಯಿಂದ ತಮ್ಮ ಗೋಚಾರದಲ್ಲಿ 3-6-11ನೆಯ ಸ್ಥಾನಕ್ಕೆ ಬಂದಾಗ ಶುಭಫಲ ಕೊಡುತ್ತದೆ.

Leave a Comment