ಮಿಥುನ ರಾಶಿ 2023 ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಕುಟುಂಬ ಜೀವನ ಹೇಗಿರತ್ತೆ? ತಿಳಿದುಕೊಳ್ಳಿ

Gemini Horoscope October Month: 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ ಮಾಸ ಭವಿಷ್ಯ ಶುಭ ಅಶುಭ ಫಲಗಳನ್ನು ಹೊಂದಿರುತ್ತಾರೆ. ಗ್ರಹಗಳ ಚಲನೆಯಿಂದ ಒಂದೊಂದು ತಿಂಗಳಲ್ಲಿ ಬೇರೆ ಬೇರೆ ಫಲಗಳನ್ನು ಅನುಭವಿಸಲಿದ್ದಾರೆ. ಹಾಗಾದರೆ ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯವರ ಮಾಸ ಭವಿಷ್ಯ, ಅವರ ಉದ್ಯೋಗ, ಹಣಕಾಸು, ದಾಂಪತ್ಯ ಜೀವನ ಹೀಗೆ ಹಲವು ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ

ಅಕ್ಟೋಬರ್ ತಿಂಗಳಿನ ಮಿಥುನ ರಾಶಿಯವರ ರಾಶಿ ಭವಿಷ್ಯ ನೋಡುವುದಾದರೆ ಸಪ್ಟೆಂಬರ್ ತಿಂಗಳಿನಲ್ಲಿ ಈಗಷ್ಟೆ ಗಣೇಶ ಹಬ್ಬ ಮುಗಿದಿರುವುದರಿಂದ ಗಣೇಶನ ಅನುಗ್ರಹದಿಂದ ಮಿಥುನ ರಾಶಿಯ ವಿದ್ಯಾರ್ಥಿಗಳು ಹಾಗೂ ಯುವಕರು ಅವರ ಪರಿಶ್ರಮಕ್ಕೆ ಸರಿಯಾದ ಫಲವನ್ನು ಪಡೆಯುತ್ತಾರೆ. ಕೆಲವು ದಿನಗಳಿಂದ ಕಾಡುತ್ತಿರುವ ಸಂದಿಗ್ಧತೆ ಸುಧಾರಿಸುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯವರು ರಿಯಲ್ ಎಸ್ಟೇಟ್ ಸಂಬಂಧಿಸಿದಂತೆ ಅಂದರೆ ಭೂಮಿ ಮನೆ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯವರು ತಮ್ಮ ಸಹೋದ್ಯೋಗಿಗಳಿಂದ ಕೈಗೊಂಡ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ಮಿಥುನ ರಾಶಿಯ ಕುಟುಂಬದವರು ಸಾಮರಸ್ಯದಿಂದ ಇರುತ್ತಾರೆ. ಈ ರಾಶಿಯ ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ ಆದರೆ ಇವರಿಗೆ ನಕಾರಾತ್ಮಕ ಯೋಚನೆಗಳಿಂದ ಉದ್ವಿಗ್ನತೆ ಹೆಚ್ಚಾಗುತ್ತದೆ ಇದರಿಂದ ನಕಾರಾತ್ಮಕ ಯೋಚನೆಗಳನ್ನು ಮಾಡುವುದನ್ನು ಬಿಡಬೇಕು.

ಮಿಥುನ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ದೈಹಿಕ ಸಾಮರ್ಥ್ಯ ಕಡಿಮೆಯಾಗುತ್ತದೆ ಬಲಹೀನತೆ ಹಾಗೂ ಸುಸ್ತು ಕಾಣಿಸುತ್ತದೆ. ಮಿಥುನ ರಾಶಿಯ ಆಡಳಿತ ಮಾಡುವವನು ಬುಧಗ್ರಹನಾಗಿರುತ್ತಾನೆ ಹೀಗಾಗಿ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳ ಸ್ವಭಾವವು ಹೆಚ್ಚು ವಿಕಸಿತಗೊಂಡ ಬುದ್ಧಿವಂತಿಕೆ ಸ್ವಭಾವವನ್ನು ಹೊಂದಿರುತ್ತಾರೆ. ಮಿಥುನ ರಾಶಿಯವರು ಸಂಗೀತ ಹಾಗೂ ಇತರ ಸೃಜನಶೀಲ ಪ್ರಯತ್ನಗಳಲ್ಲಿ ಉತ್ಸುಕರಾಗಿರುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯವರು ಮನೆ ಖರೀದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಬಹುದು.

ಮಿಥುನ ರಾಶಿಯವರು ಬಿಸಿನೆಸ್ ಮಾಡುತ್ತಿದ್ದಲ್ಲಿ ವ್ಯಾಪಾರ ಪಾಲುದಾರರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ ಇಲ್ಲವಾದಲ್ಲಿ ಜಗಳ ಮನಸ್ತಾಪ ಉಂಟಾಗುತ್ತದೆ. ಮಿಥುನ ರಾಶಿಯವರು ಸ್ನೇಹಿತರ ಹಾಗೂ ಬಂಧುಗಳ ಸಂಪರ್ಕವನ್ನು ಹೆಚ್ಚು ಮಾಡಿಕೊಂಡರೆ ಹೊಸ ಹೊಸ ವೃತ್ತಿಯ ಅವಕಾಶಗಳು ಬರುತ್ತದೆ. ಮಿಥುನ ರಾಶಿಯವರು ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಬೇಕು ಇಲ್ಲವಾದರೆ ಕೆಲವು ತೊಂದರೆಗಳಿಗೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ.

ಮಿಥುನ ರಾಶಿಯ ಅವಿವಾಹಿತರು ಮದುವೆಯಾಗುವ ಯೋಜನೆಯಲ್ಲಿದ್ದರೆ ಕೆಲವು ಸಮಯ ವಿಳಂಬವಾಗಬಹುದು. ಅಕ್ಟೋಬರ್ ತಿಂಗಳಲ್ಲಿ ಮಿಥುನ ರಾಶಿಯವರು ಸಂಗಾತಿಯ ಕುಟುಂಬ ಹಾಗೂ ಪೂರ್ವಜರ ಆಸ್ತಿಯಿಂದ ಹಠಾತ್ತನೆ ಲಾಭ ಪಡೆಯುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯವರು ಹಣದ ಲಾಭವನ್ನು ಪಡೆಯುತ್ತಾರೆ ಹಾಗೆಯೆ ಒತ್ತಡಗಳು ಹೆಚ್ಚಿರುತ್ತವೆ ಈ ರಾಶಿಯವರ ಸೌಕರ್ಯಗಳು ಹೆಚ್ಚಾಗುತ್ತವೆ. ಮಿಥುನ ರಾಶಿಯ ಹೆಣ್ಣುಮಕ್ಕಳಿಗೆ ಅವರ ತಾಯಿ ಸಹೋದರಿ ಸೊಸೆಯಿಂದ ಲಾಭ ದೊರೆಯುತ್ತದೆ ಅವರ ಬೆಂಬಲ ಸರ್ಕಾರ ದೊರೆಯುತ್ತದೆ, ಗಂಡು ಮಕ್ಕಳಿಗೆ ವೃತ್ತಿ ಸ್ಥಳದಲ್ಲಿ ಒತ್ತಡವಿದೆ ಹೀಗಾಗಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ ಆದರೆ ಕಛೇರಿಯಲ್ಲಿ ಸಹದ್ಯೋಗಿಗಳಿಂದ ಸಹಾಯ ಸಿಗುತ್ತದೆ ತಾಳ್ಮೆಯಿಂದ ಕಾಯಬೇಕಾಗುತ್ತದೆ.

ರಾಹು ಕೇತುವಿನ ಗ್ರಹಗಳ ಸಂಚಾರದಿಂದ ಅಕ್ಟೋಬರ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಅಷ್ಟೊಂದು ಅನುಕೂಲವಾಗಿರುವುದಿಲ್ಲ ಹೀಗಾಗಿ ಈ ರಾಶಿಯವರು ವೃತ್ತಿ ಮತ್ತು ಸಂಬಂಧಗಳಿಗೆ ಸಂಬಂಧಿಸಿದಂತೆ ಮಿಶ್ರ ಫಲವನ್ನು ಪಡೆಯುತ್ತಾರೆ. ಮಿಥುನ ರಾಶಿಯವರು ಪ್ರತಿದಿನ 41 ಬಾರಿ ಓಂ ನಮೊ ಭಗವತೆ ವಾಸುದೇವಾಯ ಎಂದು ಜಪಿಸುವುದರಿಂದ ಯೋಗ ಮತ್ತು ಧ್ಯಾನ ಮಾಡುವುದರಿಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಮಿಥುನ ರಾಶಿಯವರಿಗೆ ತಿಳಿಸಿ ಒಟ್ಟಾರೆಯಾಗಿ ಮಿಥುನ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ವೃತ್ತಿ ಉದ್ಯೋಗ ವಿಷಯದಲ್ಲಿ ಮಿಶ್ರ ಫಲಿತಾಂಶವನ್ನು, ಆರೋಗ್ಯ ವಿಷಯದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.

Leave a Comment